ಶಾಮನೂರು ಶಿವಶಂಕರಪ್ಪ ಶ್ರದ್ಧಾ ಕೇಂದ್ರಗಳ ಸುಧಾರಣೆಗೆ ತಮ್ಮದೇ ಕೊಡುಗೆ ನೀಡುವ ಮೂಲಕ ಸಮಾಜ ಸೇವೆ ಮಾಡಿರುವ ಅವರು ಅಮರರಾಗಿದ್ದಾರೆ ಎಂದು ಕುಣಿಗಲ್ ಟೌನ್ ವೀರಶೈವ ಸಮಾಜದ ಉಪಾಧ್ಯಕ್ಷ ಬಸವರಾಜ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಶಾಮನೂರು ಶಿವಶಂಕರಪ್ಪ ಶ್ರದ್ಧಾ ಕೇಂದ್ರಗಳ ಸುಧಾರಣೆಗೆ ತಮ್ಮದೇ ಕೊಡುಗೆ ನೀಡುವ ಮೂಲಕ ಸಮಾಜ ಸೇವೆ ಮಾಡಿರುವ ಅವರು ಅಮರರಾಗಿದ್ದಾರೆ ಎಂದು ಕುಣಿಗಲ್ ಟೌನ್ ವೀರಶೈವ ಸಮಾಜದ ಉಪಾಧ್ಯಕ್ಷ ಬಸವರಾಜ್ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದ ಅಟವಿ ಸ್ವಾಮಿ ದೇವಾಲಯದಲ್ಲಿ ಕುಣಿಗಲ್ ಟೌನ್ ವೀರಶೈವ ಸಮಾಜ ಹಾಗು ಕುಣಿಗಲ್ ತಾಲೂಕು ವೀರಶೈವ ಸಮಾಜದ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಮನೂರು ಕಗ್ಗೆರೆ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರ ಪರಮ ಭಕ್ತರಾಗಿದ್ದರು. ಎಡೆಯೂರಿನಲ್ಲಿ ತಮ್ಮ ಸ್ವಂತ ಹಣದಿಂದ ಶಾಮನೂರು ಶಿವಶಂಕರಪ್ಪ ಎಂಬ ಹೆಸರಿನಲ್ಲಿ ವಸತಿಗೃಹ ನಿರ್ಮಾಣ ಮಾಡಿದ್ದು, ಅಟವಿ ಸ್ವಾಮಿ ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ಕೂಡ ಸಹಾಯಧನ ಮಾಡಿದ ಮಹಾದಾನಿಗಳು. ಪ್ರತಿಯೊಂದು ಗ್ರಾಮ ಹಳ್ಳಿ ಸೇರಿದಂತೆ ಎಲ್ಲಾ ಜನಾಂಗದವರಿಗೆ ತಮ್ಮ ಸಹಾಯ ಹಸ್ತವನ್ನು ನೀಡುತ್ತಿದ್ದು ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವರು ಮಠಗಳಿಗೆ ದಾನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಹಣ ಮತ್ತು ಕೊಡುವ ಮನಸ್ಸು ಏಕವ್ಯಕ್ತಿಯಲ್ಲಿ ಇದೆ ಎಂಬುದಕ್ಕೆ ಶಾಮನೂರು ಶಿವಶಂಕರಪ್ಪ ಮಾದರಿ ಆಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಚೇತನ್ ಮಾತನಾಡಿ ಶಾಮನೂರು ಸರಳತೆಯ ಬಹು ವಿಶೇಷ ವ್ಯಕ್ತಿ ಚಿಕ್ಕವರು ದೊಡ್ಡವರು ಎಂಬ ಭೇದಭಾವ ಇಲ್ಲದೆ ಎಲ್ಲರನ್ನೂ ಕೂಡ ಸಮಾನವಾಗಿ ಕಾಣುತ್ತಿದ್ದರು ಅವರ ಆತ್ಮೀಯತೆ ನಾವು ಕಂಡಾಗ ಸಂತಸ ಪಟ್ಟೆವು. ಇಂತಹ ವ್ಯಕ್ತಿಗಳು ನಮ್ಮ ದೇವಾಲಯ ಮತ್ತು ಸಮಾಜಕ್ಕೆ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಕೇವಲ ವೀರಶೈವ ಲಿಂಗಾಯಿತರಿಗೆ ಮಾತ್ರ ಅಲ್ಲದೆ ಎಲ್ಲಾ ಧರ್ಮದವರನ್ನು ಸಮಾನತೆಯಾಗಿ ಕಾಣುತ್ತಿದ್ದ ಮಹಾಪುರುಷರು ಎಂದರು. ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರವನ್ನು ಇಟ್ಟು ಸಮಾಜದ ಬಂಧುಗಳು ಪುಷ್ಪ ನಮನವನ್ನು ಸಲ್ಲಿಸಿ ಮೌನ ಆಚರಿಸಿದರು. ಅರ್ಚಕ ಸೇರಿದಂತೆ ಈ ಸಂದರ್ಭದಲ್ಲಿ ನಿರ್ದೇಶಕರಾದ ಲೋಕೇಶ್, ನಾಗರಾಜ್ ಬಸವರಾಜ್ ಅಕ್ಕಮಹಾದೇವಿ ಸಮಾಜದ, ಶೈಲಜ ಮಹದೇವು ಹಾಗೂ ನಿರ್ದೇಶಕರಾದ ಜಯಮ್ಮ ನಾಗಮಣಿ ಸೇರಿದಂತೆ ಇತರರು ಇದ್ದರು.