ಬೇಲೂರಲ್ಲಿ ಗುಲಾಬಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆಗೆ ಸ್ವಾಗತ

| Published : Mar 26 2024, 01:19 AM IST

ಬೇಲೂರಲ್ಲಿ ಗುಲಾಬಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆಗೆ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ಬೇಲೂರಿನ ಸರ್ವೋದಯ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ತಾಲೂಕು ದಂಡಾಧಿಕಾರಿ ಎಂ.ಮಮತಾ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿ ಶುಭ ಹಾರೈಸಿದರು.

ಶುಭ ಕೋರಿದ ತಹಸೀಲ್ದಾರ್ ಮಮತ । ಸರ್ವೋದಯ ಕಾಲೇಜಲ್ಲಿ ಪರೀಕ್ಷೆಬೇಲೂರು: ಭಯಬಿಟ್ಟು ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ಸರ್ವೋದಯ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ತಾಲೂಕು ದಂಡಾಧಿಕಾರಿ ಎಂ.ಮಮತಾ ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿ ಶುಭ ಹಾರೈಸಿದರು.

೨೦೨೩-೨೪ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಿದ್ದು ಸರ್ವೋದಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಮಮತಾ ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟದ ಈ ದಿನ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯದಿಂದ ಪರೀಕ್ಷೆಗೆ ಹಾಜರಾಗದೆ ಸಂತೋಷದಿಂದ ಬಂದು ತಮ್ಮಲ್ಲಿರುವ ಅಘಾದವಾದ ಜ್ಞಾನದ ಪ್ರತಿಭೆಯನ್ನು ಪರೀಕ್ಷೆಯಲ್ಲಿ ಬರೆಯುವ ಮೂಲಕ ಪೋಷಕರ ಹಾಗೂ ಶಿಕ್ಷಕರ ನಂಬಿಕೆಯನ್ನು ಉಳಿಸುವ ಕೆಲಸ ಮಾಡಬೇಕು. ಒಂದು ವರ್ಷದ ಶ್ರಮ ಇಂದು ನಿಮ್ಮ ಬರವಣಿಗೆ ಮೂಲಕ ನನಸಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಎಲ್ಲಾ ರೀತಿಯ ಪೂರ್ವಸಿದ್ಧತೆಯೊಂದಿಗೆ ಪ್ರಾರಂಭಿಸುತ್ತಿದೆ. ಈ ಬಾರಿಯ ೭ ಪರೀಕ್ಷಾ ಕೆಂದ್ರಗಳನ್ನು ಸ್ಥಾಪಿಸಿದ್ದು ಸುಮಾರು ೨೦೮೧ ವಿದ್ಯಾರ್ಥಿ ಗಳು ಪರೀಕ್ಷೆಯಲ್ಲಿ ಹಾಜರಾಗುತ್ತಿದ್ದಾರೆ. ಬಂದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಇನ್ನಿತರೆ ಸೌಲಭ್ಯಗಳನ್ನು ಒದಗಿಸಿದ್ದು ಯಾರೂ ಸಹ ಅಂಜದೆ ಪ್ರೀತಿಯಿಂದ ಪರೀಕ್ಷೆಯನ್ನು ಬರೆಯಬೇಕು. ಈ ಬಾರಿ ಒಟ್ಟು ೨೦೦ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದು ಪಟ್ಟಣದ ವ್ಯಾಪ್ತಿಯಲ್ಲಿ ಪಿಯುಸಿ ಸರ್ವೋದಯ ಹಾಗೂ ಎಸ್‌ಸಿಎಸ್ ಶಾಲೆಯಲ್ಲಿ ಪರೀಕ್ಷಾ ಕೆಂದ್ರವನ್ನು ತೆರಯಲಾಗಿದೆ. ಅಲ್ಲದೆ ಅರೇಹಳ್ಳಿ ಬಿಕ್ಕೋಡು ಹಳೇಬೀಡು ಹಾಗೂ ಹಗರೆಯಲ್ಲಿ ಸಹ ಪರೀಕ್ಷಾ ಕೆಂದ್ರಗಳನ್ನು ತೆರಯಲಾಗಿದೆ ಎಂದರು.

ಸರ್ವೋದಯ ಶಾಲೆಯ ಪ್ರಾಂಶುಪಾಲ ಪ್ರಕಾಶ್, ಮುಖ್ಯೋಪಾಧ್ಯಾಯ ಗಿರೀಶ್, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನೋಡಲ್ ಅಧಿಕಾರಿ ಗೊಪಾಲ್, ಮಾರ್ಗಾಧಿಕಾರಿ ರವಿಕುಮಾರ್, ಶಿವಪ್ಪ, ಪಾಲಾಕ್ಷಮೂರ್ತಿ ಇದ್ದರು.ಬೇಲೂರು ಸರ್ವೋದಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ತಹಸೀಲ್ದಾರ್‌ ಎಂ.ಮಮತಾ ಗುಲಾಬಿ ಹೂ ನೀಡಿದರು.