ಎಸ್ಸೆಸ್ಸೆಫ್‌ ಜಯನಗರ ಡಿವಿಷನ್ ಸಾಹಿತ್ಯೋತ್ಸವ: ಯಾರಬ್ ನಗರ ಚಾಂಪಿಯನ್‌

| Published : Nov 05 2024, 12:39 AM IST

ಎಸ್ಸೆಸ್ಸೆಫ್‌ ಜಯನಗರ ಡಿವಿಷನ್ ಸಾಹಿತ್ಯೋತ್ಸವ: ಯಾರಬ್ ನಗರ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಯನಗರ ಡಿವಿಷನ್‌ಗೆ ಒಳಪಟ್ಟ ವಿವಿಧ ಶಾಖೆಗಳ ಇನ್ನೂರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್‌ ಫೆಡರೇಶನ್‌(ಎಸ್ಸೆಸ್ಸೆಫ್‌) ಜಯನಗರ ಡಿವಿಷನ್ ಸಾಹಿತ್ಯೋತ್ಸವ ಶನಿವಾರ ಹಾಗೂ ಭಾನುವಾರ ಇಲ್ಲಿನ ಸ‌ಅದಿಯ ಫೌಂಡೇಶನ್ ಯಾರಬ್ ನಗರದಲ್ಲಿ ಅದ್ಧೂರಿಯಾಗಿ ಜರುಗಿತು. ಯಾರಬ್ ನಗರ ಚಾಂಪಿಯನ್‌ ಆಗಿ ಹೊರಹೊಮ್ಮಿತು.ಸ್ಥಳೀಯ ಮುದರ್ರಿಸ್ ಅಬ್ದುಲ್ ಲತೀಫ್ ಸ‌ಅದಿ ಕೊಟ್ಟಿಲ ದ್ವಜಾರೋಹಣಗೈದರು. ಸಲೀಮ್ ನ‌ಈಮಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಾಹಿತ್ಯೋತ್ಸವದ ಜಿಲ್ಲಾಧ್ಯಕ್ಷರಾದ ಫಾರೂಖ್ ನ‌ಈಮಿ ಉದ್ಘಾಟಿಸಿದರು. ಎಸ್ಸೆಸ್ಸೆಫ್‌ ಬೆಂಗಳೂರು ಜಿಲ್ಲಾಧ್ಯಕ್ಷ ಲತೀಫ್ ನ‌ಈಮಿ ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಯನಗರ ಡಿವಿಷನ್‌ಗೆ ಒಳಪಟ್ಟ ವಿವಿಧ ಶಾಖೆಗಳ ಇನ್ನೂರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಪ್ರಥಮ ಸ್ಥಾನವನ್ನು ಯಾರಬ್ ನಗರ ಶಾಖೆ ತನ್ನದಾಗಿಸಿಕೊಂಡರೆ, ಬನ್ನೇರುಘಟ್ಟ ಶಾಖೆ ಮತ್ತು ಅರೆಕೆರೆ ಶಾಖೆ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆಯಿತು. ಅರಕೆರೆ ಶಾಖೆಯ ಮಹಮ್ಮದ್ ಅಲಿ ಸ್ಟಾರ್ ಆಫ್ ದಿ ಫೆಸ್ಟ್ ಹಾಗೂ ಬನ್ನೇರುಘಟ್ಟ ಶಾಖೆಯ ಅಹ್ಮದ್ ಕಬೀರ್ ಪೆನ್ ಆಫ್ ಫೆಸ್ಟ್ ಗೌರವಕ್ಕೆ ಪಾತ್ರರಾದರು. ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಅನ್ಸಾರ್ ಪಾಶ, ಎಸ್ಸೆಸ್ಸೆಫ್‌ ನಾಯಕರಾದ ಶಿಹಾಬ್ ಮಡಿವಾಳ, ಸಿದ್ದೀಖ್ ಕಾಜೂರು, ಸಂಶುದ್ದೀನ್ ಅಝ್ಹರಿ, ಶಂಸುಕ್ಕ ಕಬಾಬ್ ಮಹಲ್, ಇಸ್ಮಾಯಿಲ್ ಸ‌ಅದಿ ಕಿನ್ಯ, ಜಮಾಲ್ ಸಖಾಫಿ, ಜಮಾಲ್ ಸಖಾಫಿ ಉಸ್ತಾದ್, ರವೂಫ್ ಜಯನಗರ ಸಹಿತ ಪ್ರಮುಖರು ಭಾಗಹಿಸಿದ್ದರು. ಜಯನಗರ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಶ್ತಾಕ್ ಅಹಮದ್ ಸ್ವಾಗತಿಸಿ, ಜಯನಗರ ಡಿವಿಷನ್ ಸಾಹಿತ್ಯೋತ್ಸವದ ಅಧ್ಯಕ್ಷ ಫಝಲುರ್ರಹ್ಮಾನ್ ಧನ್ಯವಾದ ಸಮರ್ಪಿಸಿದರು.