ಬೆಂಗಳೂರಿನಲ್ಲಿ ನಾಳೆ ಎಸ್ಸೆಸ್ಸೆಫ್ ಸೌಹಾರ್ದ ನಡಿಗೆ ಸಮಾರೋಪ

| Published : Jul 03 2025, 01:47 AM IST

ಬೆಂಗಳೂರಿನಲ್ಲಿ ನಾಳೆ ಎಸ್ಸೆಸ್ಸೆಫ್ ಸೌಹಾರ್ದ ನಡಿಗೆ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ‘ಮನಸ್ಸು ಮನಸ್ಸುಗಳನ್ನು ಪೋಣಿಸುವ’ ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕದ 20 ಪಟ್ಟಣಗಳಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಬೆಂಗಳೂರು: ಭಾರತದಲ್ಲಿ ಹಲವಾರು ಜಾತಿ-ಧರ್ಮಗಳಿದ್ದು ಯಾವುದೇ ಧರ್ಮ ಕೋಮುವಾದವನ್ನು ಪ್ರಚೋದಿಸುವುದಿಲ್ಲ. ಎಲ್ಲಾ ಧರ್ಮಗಳ ಸಾರವು ಶಾಂತಿ ಮತ್ತು ಸಹಬಾಳ್ವೆಯಾಗಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಕೋಮುವಾದ ಮಿತಿ ಮೀರಿ ಕೊಲೆಗಳು ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದಲ್ಲಿ ಇಲ್ಲಿನ ಧಾರ್ಮಿಕ ನೇತಾರರು ಮುಂದು ಬರಬೇಕು. ಆ ನಿಟ್ಟಿನಲ್ಲಿ ಇಲ್ಲಿನ ಎಲ್ಲಾ ಜಾತಿ ಧರ್ಮಗಳ ನೇತಾರರನ್ನು ಸೇರಿಸಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ‘ಮನಸ್ಸು ಮನಸ್ಸುಗಳನ್ನು ಪೋಣಿಸುವ’ ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕದ 20 ಪಟ್ಟಣಗಳಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಸಮರೋಪ ಸಮಾರಂಭ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಜುಲೈ 4ರಂದು ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಬೇಲಿ ಮಠ ಸ್ವಾಮೀಜಿ ಶ್ರೀ ಶ್ರೀ ಚರಮೂರ್ತಿ ಶಿವರುದ್ರ ಮಹಸ್ವಾಮೀಜಿ, ಪೂಜ್ಯ ಧಮ್ಮವೀರ ಭಂತೆ ಸ್ವಾಮೀಜಿ, ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಇದರ ಪ್ರಾಂಶುಪಾಲಾ ರೆವರೆಂಡ್ ಫಾ. ಸಿರಿಲ್ ಮೆನೆಜಸ್ ಎಸ್.ಜೆ ಹಾಗೂ ಕರ್ನಾಟಕ ರಾಜ್ಯ ಯುವಜನ ಸಂಘ ಅಧ್ಯಕ್ಷ ಬಶೀರ್ ಸ‌ಅ‌ದಿ ಪೀಣ್ಯ, ಎಸ್ಸೆಸ್ಸೆಫ್ ರಾಜ್ಯಧ್ಯಕ್ಷರಾದ ಸುಫಿಯಾನ್ ಸಖಾಫಿ, ಎಸ್.ವೈ.ಎಸ್ ರಾಜ್ಯ ಸಾಂತ್ವನ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪಯೋಟ, ಸ್ವಾಗತ ಸಮಿತಿ ಚೇರ್ಮಾನ್ ಸ್ವಾಲಿಹ್ ಟಿ.ಸಿ ಹಾಗೂ ಕರ್ನಾಟಕ ಮುಸ್ಲಿಂ ಜಮಾತ್, ಎಸ್.ವೈ.ಎಸ್, ಎಸ್ಸೆಸ್ಸೆಫ್ ನಾಯಕರು ಭಾಗವಹಿಸಲಿದ್ದಾರೆ.