ಜಿಲ್ಲಾದ್ಯಂತ 90 ಕೇಂದ್ರದಲ್ಲೂ ಪ್ರಥಮ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ

| Published : Mar 26 2024, 01:20 AM IST

ಜಿಲ್ಲಾದ್ಯಂತ 90 ಕೇಂದ್ರದಲ್ಲೂ ಪ್ರಥಮ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ
Share this Article
  • FB
  • TW
  • Linkdin
  • Email

ಸಾರಾಂಶ

1030 ಗೈರು, 26,483 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು. ಎಲ್ಲ 90 ಪರೀಕ್ಷಾ ಕೇಂದ್ರಗಳ 1309 ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರಿಂದ ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ನಡೆದ ಪ್ರಕರಣಗಳು ನಡೆದಿಲ್ಲ.

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲೆಯ 560 ಶಾಲೆಗಳ ಒಟ್ಟು 27,513 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರೂ ಸೋಮವಾರ ನಡೆದ ಪ್ರಥಮ ದಿನದ ಪರೀಕ್ಷೆಗೆ 26.483 ಹಾಜರಾಗಿದ್ದರೆ ಒಟ್ಟು 1030 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಎಲ್ಲ 90 ಪರೀಕ್ಷಾ ಕೇಂದ್ರಗಳ 1309 ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರಿಂದ ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ನಡೆದ ಪ್ರಕರಣಗಳು ನಡೆದಿಲ್ಲ.

ಔರಾದ್ ತಾಲೂಕಿನಲ್ಲಿ 121 ನೂತನ ಹಾಗೂ 20 ಪುನರಾವರ್ತಿತ ವಿದಯಾರ್ಥಿಗಳು ಸೇರಿ 141 ವಿದ್ಯಾರ್ಥಿಗಳು ಗೈರಾಗಿದ್ದರೆ 3275 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ಬಸವಕಲ್ಯಾಣ ತಾಲೂಕಿನಲ್ಲಿ 172 ನೂತನ ಹಾಗೂ 31 ಪುನರಾವರ್ತಿತ ಹೀಗೆ ಒಟ್ಟು 203 ವಿದ್ಯಾರ್ಥಿಗಳು ಗೈರಾಗಿದ್ದು ಒಟ್ಟು 5432 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಭಾಲ್ಕಿ ತಾಲೂಕಿನಲ್ಲಿ 128 ನೂತನ ಹಾಗೂ 24 ಪುನರಾವರ್ತಿತ ಸೇರಿದಂತೆ ಒಟ್ಟು 152 ವಿದ್ಯಾರ್ಥಿಗಳು ಗೈರಾಗಿದ್ದು ಒಟ್ಟು 4229 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಬೀದರ್‌ ತಾಲೂಕಿನಲ್ಲಿ 263 ನೂತನ ಹಾಗೂ 60 ಪುನರಾವರ್ತಿತ ಸೇರಿದಂತೆ 323 ವಿದ್ಯಾರ್ಥಿಗಳು ಗೈರಾಗಿದ್ದರೆ ಇಲ್ಲಿ 7566 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ಹುಮನಾಬಾದ್‌ ತಾಲೂಕಿನಲ್ಲಿ 5981 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ 153 ನೂತನ ಹಾಗೂ 53 ಪುನರಾವರ್ತಿತ ಸೇರಿದಂತೆ 211 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಹೀಗೆ ಜಿಲ್ಲೆಯಲ್ಲಿ 837 ಹೊಸ ಹಾಗೂ 193 ಪುನರಾವರ್ತಿತ ಸೇರಿದಂತೆ ಒಟ್ಟು 1030 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಥಮ ಪತ್ರಿಕೆ ಸುಸೂತ್ರವಾಗಿ ನಡೆದಿದೆ ಎಂದು ಡಿಡಿಪಿಐ ಸಲೀಂ ಪಾಶಾ ತಿಳಿಸಿದ್ದಾರೆ.