ಸಾರಾಂಶ
ಕವಿತಾಳ ಪಟ್ಟಣದಲ್ಲಿ ಹತ್ತನೇ ತರಗತಿಯ ಮೊದಲ ದಿನದ ಕನ್ನಡ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂವು ನೀಡಿ, ಸ್ವಾಗತಿಸಲಾಯಿತು.
ಕನ್ನಡಪ್ರಭ ವಾರ್ತೆ ಕವಿತಾಳಹತ್ತನೇ ತರಗತಿಯ ಮೊದಲ ದಿನದ ಕನ್ನಡ ಪರೀಕ್ಷೆ ಸುಗಮವಾಗಿ ಜರುಗಿದೆ.
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 300 ವಿದ್ಯಾರ್ಥಿಗಳ ಪೈಕಿ 299 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಬ್ಬ ವಿದ್ಯಾರ್ಥಿ ಗೈರು ಹಾಜರಿಯಾಗಿದ್ದರು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 289 ವಿದ್ಯಾರ್ಥಿಗಳ ಪೈಕಿ 286 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಮೂವರು ಗೈರು ಹಾಜರಾಗಿದ್ದರು. ಅದೇ ರೀತಿ ಇಲ್ಲಿನ ನವಚೇತನ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 247 ವಿದ್ಯಾರ್ಥಿಗಳ ಪೈಕಿ 244 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮೂವರು ಗೈರು ಹಾಜರಾಗಿದ್ದರು.ಒಟ್ಟು ಮೂರು ಪರೀಕ್ಷಾ ಕೇಂದ್ರಗಳಲ್ಲಿ 836 ಜನರು ಹಾಜರಾದರೆ 7 ಜನ ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಿಲ್ಲ. ಲೋಕಲ್ ಸ್ಕ್ವಾಡ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹನುಮಂತರಾಯ ನಾಯಕ ಅವರು ಮೂರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಮೀಪದ ಹಾಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಬಂದ ವಿದ್ಯಾರ್ಥಿಗಳಿಗೆ ಪುಷ್ಪ ಕೊಡುವುದರ ಮೂಲಕ ಸ್ವಾಗತಿಸಿ ಪರೀಕ್ಷೆಯ ಭಯವನ್ನು ಹೋಗಲಾಡಿಸ ಲಾಯಿತು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಸುಭಾಷ್ ಸಿಂಗ್ ಹಜಾರೆ ಇದ್ದರು. ಹಾಲಾಪುರ, ತೋರಣದಿನ್ನಿ ಸರಕಾರಿ ಪ್ರೌಢಶಾಲೆಗಳು, ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಹಾಲಾಪೂರ, ಜ್ಞಾನಾಕ್ಷಿ ಶಾಲೆ ಇರಕಲ್ ಮಠ, ಬೆಸ್ಟ್ ಪಬ್ಲಿಕ್ ಶಾಲೆ, ಸಾಯಿ ಚೈತನ್ಯ ಹಿರೇದಿನ್ನಿ ಶಾಲೆಯ ಒಟ್ಟು 325 ವಿದ್ಯಾರ್ಥಿಗಳು ಹಾಜರಾಗಿದ್ದರು.