ಚಿಕ್ಕಮಗಳೂರುಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಈ ಬಾರಿ ಶೇಕಡಾವಾರು ಪ್ರಮಾಣದಲ್ಲಿ ಭಾರೀ ಏರಿಕೆ ಸಾಧನೆ ಮಾಡಿದರು ಜಿಲ್ಲಾವಾರು ಫಲಿತಾಂಶದಲ್ಲಿ 17ನೇ ಸ್ಥಾನಕ್ಕೆ ಕುಸಿದಿದೆ.
ಈ ಬಾರಿ ಶೇಕಡಾವಾರು ಪ್ರಮಾಣದಲ್ಲಿ ಭಾರೀ ಏರಿಕೆ । ಜಿಲ್ಲಾವಾರು ಫಲಿತಾಂಶದಲ್ಲಿ 17ನೇ ಸ್ಥಾನಕ್ಕೆ ಕುಸಿತ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಈ ಬಾರಿ ಶೇಕಡಾವಾರು ಪ್ರಮಾಣದಲ್ಲಿ ಭಾರೀ ಏರಿಕೆ ಸಾಧನೆ ಮಾಡಿದರು ಜಿಲ್ಲಾವಾರು ಫಲಿತಾಂಶದಲ್ಲಿ 17ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ಬಾರಿ ಶೇ. 84.76 ರಷ್ಟು ಫಲಿತಾಂಶ ಪಡೆದು ಎಂಟನೆ ಸ್ಥಾನದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆ ಈ ಬಾರಿ ಶೇ. 94.99 ರಷ್ಟು ಫಲಿತಾಂಶ ಪಡೆದರೂ 17ನೇ ಸ್ಥಾನಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ ಈ ಬಾರಿ 11,798 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜ ರಾಗಿದ್ದು, ಈ ಪೈಕಿ 11,207 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಇನ್ನೂ ಹೊಸ ವಿದ್ಯಾರ್ಥಿಗಳು ಪರಿಗಣಿಸಿದರೆ 10,119 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 9,623 ಮಂದಿ ಪಾಸ್ ಆಗಿದ್ದಾರೆ. ಈ ಪ್ರಕಾಶ ಶೇ.95.10 ರಷ್ಟು ಫಲಿತಾಂಶ ದೊರಕಿದೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 5,742 ಬಾಲಕರಲ್ಲಿ 5,388 ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ. 93.83 ರಷ್ಟು ಫಲಿತಾಂಶ ಬಂದಿದೆ. ಇನ್ನು 6,068 ವಿದ್ಯಾರ್ಥಿನಿಯರಲ್ಲಿ 5,819 ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ಶೇ. 94.89ರಷ್ಟು ಫಲಿತಾಂಶ ಬಂದಿದೆ. ... ಬಾಕ್ಸ್...ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ
ಜಿಲ್ಲೆಯಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿರುವುದು ಗಮನಾರ್ಹವಾಗಿದೆ.ಗ್ರಾಮೀಣ ಪ್ರದೇಶದ 8,017 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 9,692 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ. 95.95ರಷ್ಟು ಫಲಿತಾಂಶ ಪಡೆದರೆ. ನಗರ ಪ್ರದೇಶದ 11,810 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ 11,207 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 94.89 ರಷ್ಟು ಫಲಿತಾಂಶ ಲಭಿಸಿದೆ.... ಬಾಕ್ಸ್.....
ಶೃಂಗೇರಿಗೆ ಮೊದಲ ಸ್ಥಾನಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 17ನೇ ಸ್ಥಾನ ಪಡೆದಿದ್ದರೂ ಜಿಲ್ಲೆಯ ಮಟ್ಟಿಗೆ ಶೃಂಗೇರಿ ಶೈಕ್ಷಣಿಕ ವಲಯ ಶೇ. 100ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿದೆ. ಎನ್.ಆರ್.ಪುರ 97.3ರಷ್ಟು ಫಲಿತಾಂಶ ಪಡೆದು ಎರಡನೆ ಸ್ಥಾನದಲ್ಲಿದೆ.
---ಬಾಕ್ಸ್---ತಾಲೂಕುವಾರು ಫಲಿತಾಂಶದ ವಿವರ
ತಾಲೂಕುಶೇಕಡಾಶೃಂಗೇರಿ100
ಕೊಪ್ಪ97.34ಮೂಡಿಗೆರೆ96.10
ಚಿಕ್ಕಮಗಳೂರು95.60ಎನ್.ಆರ್.ಪುರ97.55
ತರೀಕೆರೆ93.67ಬೀರೂರು92.39
ಕಡೂರು91.93.. ಬಾಕ್ಸ್...100ಕ್ಕೆ 100 ಫಲಿತಾಂಶ: ಸರ್ಕಾರಿ ಶಾಲೆ ಟಾಪ್
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ 165 ಪ್ರೌಢಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ. ಅದರಲ್ಲಿ ಸರ್ಕಾರಿ ಪ್ರೌಢಶಾಲೆಗಳೇ ಅತಿ ಹೆಚ್ಚು ಫಲಿತಾಂಶ ಪಡೆದಿರುವುದು ವಿಶೇಷ. ಜಿಲ್ಲೆಯ 89 ಸರ್ಕಾರಿ ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದರೆ, ಅನುದಾನಿತ 18 ಹಾಗೂ ಅನುದಾನ ರಹಿತ 58 ಪ್ರೌಢಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ.----ಬಾಕ್ಸ್ ----ಬೃಂದಾ ಎಂ.ತಾಪ್ಸೆಗೆ ಅಭಿನಂದನೆ
ರಾಜ್ಯಕ್ಕೆ ಮೊದಲ ರ್‍ಯಾಂಕ್ ಗಳಿಸುವ ಮೂಲಕ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಬೃಂದಾ ಎಂ.ತಾಪ್ಸೆಗೆ ಶಾಸಕ ಎಚ್. ಡಿ. ತಮ್ಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಭೋಜೇಗೌಡ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಇನ್ನೂ ಬೃಂದಾ ಸಾಧನೆ ಹಿನ್ನೆಲೆಯಲ್ಲಿ ಉಂಡೆದಾಸರಹಳ್ಳಿಯ ಸೆಂಟ್ ಮೇರಿಸ್ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಆಡಳಿತ ಮಂಡಳಿ ಹಾಗೂ ಶಿಕ್ಷಕರು ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದರು.