ಸಾರಾಂಶ
ರಾಮನಗರ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಾರ್ಚ್ 21ರಿಂದ ರಾಜ್ಯಾದ್ಯಂತ ಪರೀಕ್ಷೆ ಆರಂಭವಾಗಿದ್ದು, ಈಗಾಗಲೇ ಇಲಾಖೆ ಅಧೀಕ್ಷಕರಿಗೆ ಪರೀಕ್ಷೆ ನಡೆಸುವ ಕುರಿತಂತೆ ಅಗತ್ಯ ತರಬೇತಿ ಕಾರ್ಯಾಗಾರ ಸಹ ನಡೆಸಲಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟಲು ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ರಾಜ್ಯ ಸರ್ಕಾರ ಕಳೆದ ವರ್ಷವೇ 10ನೇ ತರಗತಿ ಹಂತದಲ್ಲಿ ವೆಬ್ ಕಾಸ್ಟಿಂಗ್ ಜಾರಿ ಮಾಡಿತ್ತು. ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷವೂ ಮುಂದುವರೆಸಿದೆ. ಹಾಗಾಗಿ ವಿದ್ಯಾರ್ಥಿಗಳು ವೆಬ್ ಕಾಸ್ಟಿಂಗ್ ಅಡಿಯಲ್ಲಿ ಸಿಸಿ ಕ್ಯಾಮರೆ ಎದುರಿಸಿ ಪರೀಕ್ಷೆ ಬರೆಯಬೇಕಿದೆ.ವಾರ್ಷಿಕ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ನೋಡಿಕೊಳ್ಳುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಲವು ಸುತ್ತಿನ ಸಭೆ ಹಾಗೂ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಈ ಸಭೆಯಲ್ಲಿ ಪ್ರತಿ ಇಲಾಖೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು. ಪರೀಕ್ಷಾ ಪೂರ್ವ ಹಾಗೂ ನಡೆಯುವ ದಿನದಲ್ಲಿ ಸಿಬ್ಬಂದಿ ಮಾಡಬೇಕಾದ ಕರ್ತವ್ಯದ ಕುರಿತು ಸಾಕಷ್ಟು ಮಾಹಿತಿ ನೀಡಲಾಗಿದೆ.
ಸಿಸಿ ಟಿವಿ ಕ್ಯಾಮೆರಾ:ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸುವ ಸಂಬಂಧ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು 42 ಪರೀಕ್ಷಾ ಕೇಂದ್ರಗಳನ್ನು ತರೆದಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರದ ಪ್ರತಿ ತರಗತಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಸಿಸಿಟಿವಿ ಅಳವಡಿಸಿದ್ದು, ಇದರ ವೆಬ್ ಕಾಸ್ಟಿಂಗ್ ಅನ್ನು ರಾಮನಗರ ಜಿಲ್ಲಾ ಪಂಚಾಯಿತಿ ಭವನದಲ್ಲಿ ನಿಯಂತ್ರಣ ಕೊಠಿಡಿ ತೆರೆಯಲಾಗಿದೆ. ಇದಕ್ಕಾಗಿ ಬೇಕಾಗುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೀಕ್ಷಣೆಗಾಗಿಯೇ ತಂಡವನ್ನು ರಚಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುವ ಪ್ರತಿ ಕೊಠಡಿಯಲ್ಲಿ ಸಿಸಿಟಿವಿ ಅಳವಡಿಸಲು ಇಂಟರ್‌ನೆಟ್ ಮೂಲಕ ಪರೀಕ್ಷಾ ಚಟುವಟಿಕೆಗಳನ್ನು ವೆಬ್ಕಾಸ್ಟಿಂಗ್ ಮಾಡುವ ವೇಳೆ ವಿದ್ಯುತ್ ಸಂಪರ್ಕವೇನಾದರೂ ಕಡಿತಗೊಂಡಲ್ಲಿ ಯುಪಿಎಸ್ ಅಳವಡಿಸಿ ಪರೀಕ್ಷಾ ಕಾರ್ಯ ನಡೆಸಲು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಕೇಂದ್ರವಿರುವ ಮುಖ್ಯ ಶಿಕ್ಷಕರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.ಈ ಸಂಬಂಧ ಪರೀಕ್ಷಾ ಕೇಂದ್ರಗಳಲ್ಲಿನ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಒಕೆ ಸಟರ್ಿಫಿಕೇಟ್ ತರಲು ದ್ವಿ-ಸದಸ್ಯ ತಂಡ ರಚಿಸಿ ಈ ಮೂಲಕ ಮಾಹಿತಿ ಪಡೆದುಕೊಂಡಿದೆ.
ಜಿಲ್ಲಾ ಪಂಚಾಯತಿ ಭವನದಲ್ಲಿ ಜಿಲ್ಲಾ ಹಂತದ ಸಿಸಿಟಿವಿ ವೆಬ್ಕಾಸ್ಟಿಂಗ್ ಮಾಡಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗರುವ ಕೇಂದ್ರದಲ್ಲಿ 32 ಅಧಿಕಾರಿ ಮತ್ತು ಸಿಬ್ಬಂದಿಯ ತಂಡವನ್ನು ರಚಿಸಲಾಗಿದೆ. ರಾಜ್ಯ ಹಂತದಿಂದ ಇವರಿಗೆ ತರಬೇತಿಯನ್ನು ನೀಡಲಾಗಿದೆ.ಈ ಬಾರಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಪ್ರತ್ಯೇಕ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿಲ್ಲ. ಬದಲಿಗೆ ಖಾಸಗಿ ನೋಂದಾಯಿತ ಅಭ್ಯರ್ಥಿಗಳು ಕೂಡ ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್‌ಗಳು, ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾರಕರು ಹಾಗೂ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ.ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಲಾಖಾ ಸ್ಥಾನಿಕ ಜಾಗೃತ ದಳ ಮತ್ತು ಇಲಾಖೇತರ ಜಿಲ್ಲಾ ಮಟ್ಟದ ಅಧಿಕಾರಿಗಳ ಜಾಗೃತ ದಳದ ಅಧಿಕಾರಿಗಳನ್ನು ಇಲಾಖೆ ನೇಮಕ ಮಾಡಿದೆ.
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ), ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು ಹಾಗೂ ಶಿಕ್ಷಣಾಧಿಕಾರಿಗಳ ತಂಡಗಳ ಸಂಚಾರಿ ಜಾಗೃತದಳ ರಚಿಸಲಾಗಿದೆ. ಜಿಲ್ಲೆಯಲ್ಲಿ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪರೀಕ್ಷಾ ಕೇಂದ್ರ ತೆರೆಯಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ವೇಳಾಪಟ್ಟಿ: ಮಾ.21ರಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು ಏ.04ರವರೆಗೆ ನಡೆಯಲಿದೆ. ಮೊದಲ ದಿನ ಪ್ರಥಮ ಭಾಷೆಗೆ ಪರೀಕ್ಷೆ ನಡೆಯಲಿದೆ.
ಬಾಕ್ಸ್........................ಪರೀಕ್ಷೆ ಬರೆಯಲಿರುವ 13,804 ವಿದ್ಯಾರ್ಥಿಗಳು
ರಾಮನಗರ ಜಿಲ್ಲೆಯಲ್ಲಿ ಒಟ್ಟು 13804 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಚನ್ನಪಟ್ಟಣ 3258, ಕನಕಪುರ 4254, ಮಾಗಡಿ 2621 ಮತ್ತು ರಾಮನಗರ 3621 ಮಕ್ಕಳು ಇದ್ದು ಕನಕಪುರ ತಾಲೂಕಿನಲ್ಲಿ ಹೆಚ್ಚು ಅಂದರೆ 4254 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಹಾಗೂ ಮಾಗಡಿ ಅತೀ ಕಡಿಮೆ ಅಂದರೆ 2621 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ.ಬಾಕ್ಸ್...............
ಪರೀಕ್ಷಾ ಕೇಂದ್ರಗಳು:ತಾಲೂಕುಸಂಖ್ಯೆ
ಕನಕಪುರ14ಚನ್ನಪಟ್ಟಣ13
ಮಾಗಡಿ09ರಾಮನಗರ13
ಒಟ್ಟು49----------------------------------
ಕೋಟ್ .....................ರಾಮನಗರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾ.21ರಂದಿ ಆರಂಭವಾಗಲಿದ್ದು, ಈಗಾಗಲೆ ಬೇಕಿರುವ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೆಬ್ ಕಾಸ್ಟಿಂಗ್ ಸೇರಿದಂತೆ ಎಲ್ಲಾ ಸಿದ್ಧತೆ ನಡೆದಿದೆ.
-ವಿ.ಸಿ.ಬಸವರಾಜೇಗೌಡ, ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ ರಾಮನಗರ(ಯಾವುದಾದರೂ ಒಂದು ಸಾಂದರ್ಭಿಕ ಚಿತ್ರ ಬಳಸಿ)