ಸಾರಾಂಶ
ಮಾದಕ ವಸ್ತು ಚಟಕ್ಕೆ ಬಲಿಯಾದರೆ ಆಗುವ ಪರಿಣಾಮ, ಅದರಿಂದ ಉಂಟಾಗುತ್ತಿರುವ ಸಾವು, ನೋವು ಮತ್ತು ಅಪರಾಧ ಪ್ರಮಾಣದ ಕುರಿತು ತಿಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬನ್ನಿಮಂಟಪದಲ್ಲಿನ ಸೆಂಟ್ ಫಿಲೋಮಿನಾಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಯೋಜಿಸಲಾಗಿತ್ತು.ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಪಿ ಎಂ. ಮುತ್ತುರಾಜ್ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯಿಂದ ಆಗುತ್ತಿರುವ ಪರಿಣಾಮದ ಕುರಿತು ವಿವರಿಸಿದರು.
ಮಾದಕ ವಸ್ತು ಚಟಕ್ಕೆ ಬಲಿಯಾದರೆ ಆಗುವ ಪರಿಣಾಮ, ಅದರಿಂದ ಉಂಟಾಗುತ್ತಿರುವ ಸಾವು, ನೋವು ಮತ್ತು ಅಪರಾಧ ಪ್ರಮಾಣದ ಕುರಿತು ತಿಳಿ ಹೇಳಿದರು.ಕಾರ್ಯಕ್ರಮ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರವಿ ಜೆ.ಡಿ. ಸಲ್ಡಾನ, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿರ್ಲಿ ಆಂಥೋನಿ, ಸುಹಾನಾ ಪೂವಯ್ಯ, ಡಾ.ಬಿ. ಶೈಲಾ ಮೊದಲಾದವರು ಇದ್ದರು.