ಸಾರಾಂಶ
ಹುಬ್ಬಳ್ಳಿ ನಗರದಿಂದ ದೇಶದ ವಿವಿಧ ಭಾಗಗಳಿಗೆ ಶೀಘ್ರದಲ್ಲಿ ಸ್ಟಾರ್ ಏರ್‌ಲೈನ್ಸ್ ಕಾರ್ಯಾಚರಣೆ ನಡೆಸಲಿದೆ ಎಂದು ಘೋಡಾವತ್ ಗ್ರೂಪ್ ಅಧ್ಯಕ್ಷ ಸಂಜಯ ಘೋಡಾವತ್ ಭರವಸೆ ನೀಡಿದರು.
ಹುಬ್ಬಳ್ಳಿ: ನಗರದಿಂದ ದೇಶದ ವಿವಿಧ ಭಾಗಗಳಿಗೆ ಶೀಘ್ರದಲ್ಲಿ ಸ್ಟಾರ್ ಏರ್‌ಲೈನ್ಸ್ ಕಾರ್ಯಾಚರಣೆ ನಡೆಸಲಿದೆ ಎಂದು ಘೋಡಾವತ್ ಗ್ರೂಪ್ ಅಧ್ಯಕ್ಷ ಸಂಜಯ ಘೋಡಾವತ್ ಭರವಸೆ ನೀಡಿದರು.
ಅವರು ಈಚೆಗೆ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ, ವಿಮಾನ ನಿಲ್ದಾಣ ಪ್ರಾಧಿಕಾರದ ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಸೋಮಾಪುರ, ಸುನೀಲ ನಲವಡೆ, ಕಸ್ತೂಬಾ ಸಂಶಿಕರ, ಉದಯ ಪುರಾಣಿಕಮಠ ನಿಯೋಗವು ಈಚೆಗೆ ಭೇಟಿ ನೀಡಿದ ವೇಳೆ ನಿಯೋಗದ ಮನವಿಗೆ ಸ್ಪಂದಿಸಿ ಮಾತನಾಡಿದರು.ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ- ಜೋಧಪುರ, ಹುಬ್ಬಳ್ಳಿ- ಅಹಮದಾಬಾದ್, ಹುಬ್ಬಳ್ಳಿ- ದೆಹಲಿ, ಹುಬ್ಬಳ್ಳಿ- ಚೆನ್ನೈ ಮತ್ತು ಹುಬ್ಬಳ್ಳಿ- ಶಿರಡಿಗೆ ಹೋಗಲು ಸ್ಟಾರ್ ಏರ್‌ಲೈನ್ಸ್‌ನ ವಿಮಾನ ಸಂಚಾರ ಪ್ರಾರಂಭಿಸಲು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಂಜಯ ಘೋಡಾವತ್, ಮುಂಬರುವ ದಿನಗಳಲ್ಲಿ ಸ್ಟಾರ್ ಏರ್‌ಲೈನ್ಸ್‌ನಿಂದ ಎರಡು ಹೊಸ ವಿಮಾನಗಳನ್ನು ಕೊಂಡುಕೊಳ್ಳಲಾಗುವುದು, ಅವುಗಳಲ್ಲಿ ಒಂದನ್ನು ಹುಬ್ಬಳ್ಳಿ- ಜೋಧಪುರ ಮಾರ್ಗವಾಗಿ ಸಂಚಾರ ಪ್ರಾರಂಭಿಸಲಾಗುವುದು. ಮತ್ತೊಂದನ್ನು ಬೇರೆ ಮಾರ್ಗಕ್ಕೆ ಉಪಯೋಗಿಸಲಾಗುವುದು ಎಂದು ಭರವಸೆ ನೀಡಿದರು ಎಂದು ನಿಯೋಗ ಪ್ರಕಟಣೆಯ ಮೂಲಕ ತಿಳಿಸಿದೆ. ಈ ವೇಳೆ ಸುಧೀರ ವೋರಾ, ಉಜ್ವಲ್ ಸಿಂಘಿ, ಸುಭಾಷ ಡಂಕ ಮತ್ತಿತರರಿದ್ದರು.