Start a goshala (cow shelter) at Yalladakere and Kariyala.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಶನಿವಾರ ಜೆಜಿ ಹಳ್ಳಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ತಹಸೀಲ್ದಾರ್ ಎಂ. ಸಿದ್ದೇಶ್ ಮಾತನಾಡಿ ಹೋಬಳಿಗಳಿಗೆ ತೆರಳಿ ಅಲ್ಲಿರುವ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. 27 ಇಲಾಖೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸಲಾಗುವುದು. ಎಲ್ಲಾ ಇಲಾಖೆಯ ಅರ್ಜಿ ಪಡೆಯುವ ಕೌಂಟರ್‌ಗಳನ್ನು ತೆರೆಯಲಾಗಿದೆ. ಇಲ್ಲಿ ಪರಿಹಾರ ಕಾಣದ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು. ಎಲ್ಲರೂ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸಿಬಿ ಪಾಪಣ್ಣ ಸಮಸ್ಯೆಗಳ ಮನವಿ ಸಲ್ಲಿಸಿ ಮಾತನಾಡಿ ಜೆಜಿ ಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಇಂಥ ಬರವನ್ನು ಹಿಂದೆಂದೂ ನೋಡಿರಲಿಲ್ಲ. ರಾತ್ರಿ ಹನ್ನೆರಡು ಗಂಟೆ ಹೊತ್ತಲ್ಲಿಯೂ ಸಹ ಜನರು ನೀರಿನ ಟ್ಯಾoಕರ್ ಕಾಯುತ್ತಾರೆ. ದನ ಕರುಗಳಿಗೆ ಮೇವಿಲ್ಲ. ಆದಷ್ಟು ಬೇಗ ಗೋ ಶಾಲೆ ತೆರೆಯಬೇಕು. ಯಲ್ಲದಕೆರೆ, ಕರಿಯಾಲಕ್ಕೆ ಎರಡು ಗೋ ಶಾಲೆ ಪ್ರಾರಂಭ ಮಾಡಬೇಕು. ಕಿಲಾರದಹಳ್ಳಿಗೆ ಬೋರ್ ವೆಲ್ ಕೊರೆಸಿಕೊಡಬೇಕು.ಬರ ಇರುವುದರಿಂದ ಮೋಟಾರ್ ಪಂಪ್ ಕೇಬಲ್ ಕಳ್ಳತನ ನಡೆಯುತ್ತಿದ್ದು ಆ ಬಗ್ಗೆ ಪೊಲೀಸ್ ಇಲಾಖೆ ಶೀಘ್ರ ಗಮನ ಹರಿಸಬೇಕು ಎಂದರು.

ಕರಿಯಾಲ ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಯ್ಯ ಮನವಿ ಮಾಡಿ ಗ್ರಾಮಕ್ಕೆ ಸ್ಮಶಾನ ಇಲ್ಲ. ಈಗಾಗಲೇ ಹಿಂದಿನ ತಹಸೀಲ್ದಾರ್ ರಿಗೆ ಸಹ ಮನವಿ ಮಾಡಿದ್ದೆವು. ಅವರು ೫ಭೇಟಿ ನೀಡಿದ್ದರು. ಆದರೂ ಸ್ಮಶಾನ ಜಾಗವನ್ನು ಹದ್ದು ಬಸ್ತು ಮಾಡಿಕೊಡಲಾಗಿಲ್ಲ. ಸರ್ಕಾರಿ ಬಸ್ ಗಳು ಸರ್ವಿಸ್ ರಸ್ತೆಗೆ ಬರದೇ ಹೈವೇ ನಲ್ಲೆ ಹೋಗುತ್ತಿದ್ದು ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ತೊಂದರೆ ಆಗುತ್ತಿದೆ ಎಂದರು. ಗಾಯಿತ್ರಿ ಕೆರೆಗೆ ನೀರು ಹರಿಸಬೇಕು, ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ,ಆರ್ ಓ ಪ್ಲಾoಟ್ ಸಮಸ್ಯೆ,ತ್ರಿ ಫೇಸ್ ವಿದ್ಯುತ್ ಅವಧಿ ಕಡಿತಗೊಳಿಸಲಾಗುತ್ತಿದೆ, ಇ ಸ್ವತ್ತು ಆಗಿಲ್ಲ, ಜಮೀನುಗಳಿಗೆ ದಾರಿ ಬಿಡಿಸಿ,ನಿವೇಶನ ಮಂಜೂರು ಮಾಡಿ ಎಂದು ಹಲವರು ಮನವಿ ಮಾಡಿದರು.

ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ 20, ತಾಲೂಕು ಪಂಚಾಯ್ತಿಯ 28, ಸಣ್ಣ ನೀರಾವರಿ ಇಲಾಖೆಯ 1,ಕೆಎಸ್ ಆರ್ ಟಿಸಿ 1,ಕೆಇಬಿ 2,ಆರೋಗ್ಯ ಇಲಾಖೆಯ ಒಂದು ಅರ್ಜಿ ಸೇರಿದಂತೆ ಒಟ್ಟು 53 ಅರ್ಜಿಗಳನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ತಾಪಂ ಇಓ ಡಾ ಪ್ರಮೋದ್,ಬಿಇಓ ಸಿಎಂ ತಿಪ್ಪೇಸ್ವಾಮಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಚಿತ್ರ 1,2

ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಶನಿವಾರ ಜೆಜಿ ಹಳ್ಳಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ ಸಿದ್ದೇಶ್ ಉದ್ಘಾಟನೆ ಮಾಡಿ ಮಾತನಾಡಿದರು.