ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಿಸಿ

| Published : Nov 16 2025, 02:30 AM IST

ಸಾರಾಂಶ

ರಾಜ್ಯದ ಕಬ್ಬು ಬೆಳೆಗಾರರು ಒಂದು ಕಡೆ ಕಬ್ಬಿನ ಬೆಲೆ ಹೆಚ್ಚಳದಿಂದ ಖುಷಿಗೊಂಡರೆ ಇನ್ನೊಂದು ಕಡೆ ರಾಜ್ಯಾದ್ಯಂತ ರೈತರು ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತಕ್ಕೆ ರೈತರು ಕುಗ್ಗಿದ್ದಾರೆ.

ಕುಕನೂರು: ಆಪ್ತ ಕಾರ್ಯದರ್ಶಿ ಪದ್ಮನಾಮ ಮೂಲಕ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ರಾಜ್ಯ ರೈತ ಸಂಘದಿಂದ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಕಬ್ಬು ಬೆಳೆಗಾರರು ಒಂದು ಕಡೆ ಕಬ್ಬಿನ ಬೆಲೆ ಹೆಚ್ಚಳದಿಂದ ಖುಷಿಗೊಂಡರೆ ಇನ್ನೊಂದು ಕಡೆ ರಾಜ್ಯಾದ್ಯಂತ ರೈತರು ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತಕ್ಕೆ ರೈತರು ಕುಗ್ಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರ ಗೋಳು ಕೇಳುವವರಿಲ್ಲ ಮೆಕ್ಕೆಜೋಳದ ಬೆಲೆ ಕ್ವಿಂಟಲ್‌ ಗೆ ₹1400 ರಿಂದ ₹1300 ಗೆ ಕುಸಿತಗೊಂಡಿದೆ. ಬೆಲೆ ಕುಸಿತ ರೈತರಿಗೆ ದೊಡ್ಡ ಆಘಾತ ನೀಡಿದೆ.

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹2400 ರಂತೆ ಬೆಂಬಲ ಬೆಲೆ ನೀಡಿದೆ. ಶೀಘ್ರ ಜಿಲ್ಲೆಯಲ್ಲಿ ಸಹ ಮೆಕ್ಕೇಜೋಳ ಖರೀದಿ ಕೇಂದ್ರ ಆರಂಭಿಸಿ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ, ರೈತ ಸಂಘದ ಕಾರ್ಯಕರ್ತ ಅಣ್ಣಪ್ಪ ನೆರಗಲ್ಲ, ಶರಣಪ್ಪ ಕರಮುಡಿ, ಮಾರುತಿ, ಬಸವರಾಜ ಇತರರಿದ್ದರು.