ಕ್ರೀಡೆ ಎಂದರೆ ಶಿಸ್ತು. ಕ್ರೀಡಾಪಟುಗಳು ಶಿಸ್ತನ್ನು ಬೆಳೆಸಿಕೊಳ್ಳಬೇಕು, ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಕ್ರೀಡಾಪಟುಗಳು ಉತ್ತಮವಾಗಿ ಆಟವಾಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯಬೇಕು. ಮುಂದಿನ ದಿನಗಳಲ್ಲಿ ಇದೇ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಕ್ರೀಡೆಗೆ ಉತ್ತೇಜನೆ ನೀಡುವ ನಿಟ್ಟಿನಲ್ಲಿ ವಿದ್ಯಾಪ್ರಚಾರ ಸಂಘದಲ್ಲಿ ಕ್ರೀಡಾ ಅಕಾಡಮಿ ಆರಂಭಿಸಿ ಅದಕ್ಕೆ ತಗಲುವ ವೆಚ್ಚವನ್ನು ಎಸ್‌ಟಿಜಿ ಚಾರಿಬಟಲ್ ಟ್ರಸ್ಟ್‌ನಿಂದ ಭರಿಸಲಾಗುವುದು ಎಂದು ವಿದ್ಯಾ ಪ್ರಚಾರ ಸಂಘದ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು.ಪಟ್ಟಣದ ಕಾಲೇಜಿನ ಆವರಣದಲ್ಲಿ ವಿದ್ಯಾ ಪ್ರಚಾರ ಸಂಘದ ವಿಜಯ ಪ್ರಥಮ ದರ್ಜೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪ್ರೋ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ಕ್ರಿಕೆಟ್‌ಗೆ ಮಾರುಹೋಗುತ್ತಿರುವ ಪ್ರಸ್ತುತ ದಿನಗಳಲ್ಲಿ ಕಬಡ್ಡಿಗೂ ಸಹ ಕ್ರಿಕೆಟ್‌ಗೆ ಸರಿಸಮಾನವಾಗಿ ರಾಜ್ಯ, ರಾಷ್ಟ್ರ ಹಾಗೂ ವಿಶ್ವಮಟ್ಟದಲ್ಲಿ ಬೆಳೆದು ದಾಪುಗಾಲು ಹಾಕುತ್ತಿದೆ. ಕಬಡ್ಡಿ, ಖೋ-ಖೋ ಸೇರಿದಂತೆ ಮಕ್ಕಳು ಎಲ್ಲಾ ತರಹದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಉದ್ದೇಶದಿಂದ ನಮ್ಮ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ವಿದ್ಯಾ ಪ್ರಚಾರದ ಸಂಘದ ವತಿಯಿಂದಲೇ ಕ್ರೀಡಾ ಅಕಾಡಮಿಯನ್ನು ಆರಂಭಿಸಲಾಗುವುದು, ವಾರ್ಷಿಕವಾಗಿ ಅದಕ್ಕೆ ತಗಲುವ ವೆಚ್ಚವನ್ನು ನಮ್ಮ ಎಸ್ ಟಿಜಿ ಚಾರಿಟಬಲ್ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು ಎಂದು ಭರವಸೆ ನೀಡಿದರು.ಕ್ರೀಡೆ ಎಂದರೆ ಶಿಸ್ತು. ಕ್ರೀಡಾಪಟುಗಳು ಶಿಸ್ತನ್ನು ಬೆಳೆಸಿಕೊಳ್ಳಬೇಕು, ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಕ್ರೀಡಾಪಟುಗಳು ಉತ್ತಮವಾಗಿ ಆಟವಾಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯಬೇಕು. ಮುಂದಿನ ದಿನಗಳಲ್ಲಿ ಇದೇ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಎರಡು ದಿನಗಳ ಕಾಲ ನಡೆಯುವ ಪ್ರೋ ಕಬ್ಬಡಿ ಲೀಗ್ ನಲ್ಲಿ 8 ತಂಡಗಳು ಭಾಗವಹಿಸಲಿದ್ದು ಗೆಲುವಿಗಾಗಿ ಸೆಣಸಾಟ ನಡೆಸಲಿವೆ.ಸಂಸ್ಥೆಯ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು, ಉಪಾಧ್ಯಕ್ಷೆ ಶಾಂತಮ್ಮ, ಖಜಾಂಚಿ ಎನ್.ರಾಮೇಗೌಡ, ಸಹಕಾರ್ಯದರ್ಶಿ ಗೋಪಾಲ್, ನಿರ್ದೇಶಕರಾದ ಪಿ.ಎಸ್.ಲಿಂಗರಾಜು, ಕೆ.ಸೋಮೇಗೌಡ, ಎಂ.ಎಸ್.ಮರೀಸ್ವಾಮೀಗೌಡ, ನಿವೃತ್ತ ಪ್ರಾಂಶುಪಾಲ ಚಿಕ್ಕಾಡೆ ಪ್ರಕಾಶ್, ಬಿಇಡಿ ಪ್ರಾಂಶುಪಾಲ ಡಾ.ಎನ್.ಕೆ.ವೆಂಕಟೇಗೌಡ, ಪ್ರೊ.ಎಂ.ಕೃಷ್ಣಮೂರ್ತಿ, ಕೆ.ಆರ್.ಮಹದೇವಯ್ಯ, ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ್, ಬೀಮೇಶ್ ಬಾಬು, ದೈ.ಶಿ.ಉಪನ್ಯಾಸಕ ಎಸ್.ಎಂ.ಗುರುಸ್ವಾಮಿ, ದೈ.ಶಿ.ನಿರ್ದೇಶಕರಾದ ಎಸ್.ನಂದೀಶ್, ಡಿ.ಆರ್.ನಂದೀಶ್, ನಿವೃತ್ತ ದೈ.ಶಿ.ನಿ.ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.