ಸಾರಾಂಶ
ಚೆನ್ನೈ ಮತ್ತು ಅಹಮದಾಬಾದ್ ಮಾರ್ಗದ ವಿಮಾನ ಯಾನವನ್ನು ಪುನಃ ಪ್ರಾರಂಭಿಸಬೇಕು. ವ್ಯಾಪಾರ ಅಭಿವೃದ್ಧಿಗಾಗಿ ಸೂರತ್ ಮತ್ತು ಕೊಚ್ಚಿನ್‌ಗೆ ಹೊಸದಾಗಿ ವಿಮಾನ ಸೇವೆ ಕಲ್ಪಿಸಬೇಕು. ಜೋಧ್‌ಪುರ, ಕೋಲ್ಕತ್ತಾ ಮತ್ತು ಗೋವಾಕ್ಕೆ ಹೆಚ್ಚುವರಿ ಮಾರ್ಗಗಳ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿದರು.
ಹುಬ್ಬಳ್ಳಿ:
ಹುಬ್ಬಳ್ಳಿಯಿಂದ ಜೋಧಪುರ, ಕೋಲ್ಕತ್ತಾ ಮತ್ತು ಗೋವಾಕ್ಕೆ ಹೆಚ್ಚುವರಿ ವಿಮಾನ ಯಾನ, ಸೂರತ್, ಕೊಚ್ಚಿನ್‌ಗೆ ವಿಮಾನಯಾನ ಆರಂಭಿಸಬೇಕು. ಚೆನ್ನೈ ಮತ್ತು ಅಹಮದಾಬಾದ್‌ಗೆ ಪುನಃ ವಿಮಾನ ಸೇವೆ ಪ್ರಾರಂಭಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಕೆಸಿಸಿಐ ನಿಯೋಗವೂ ಈ ಕುರಿತು ಮನವಿ ಸಲ್ಲಿಸಿತು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಪಾತ್ರ ಬಹುದೊಡ್ಡದು. ಇದೀಗ ಅದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ದೇಶಾದ್ಯಂತ ಬೇರೆ ಬೇರೆ ರಾಜ್ಯಗಳಿಗೆ ಹಾಗೂ ಪ್ರಮುಖ ನಗರಗಳಿಗೆ ವಿಮಾನ ಯಾನ ಸಂಪರ್ಕ ಹೊಂದಿದೆ. ಚೆನ್ನೈ ಮತ್ತು ಅಹಮದಾಬಾದ್ ಮಾರ್ಗದ ವಿಮಾನ ಯಾನವನ್ನು ಪುನಃ ಪ್ರಾರಂಭಿಸಬೇಕು. ವ್ಯಾಪಾರ ಅಭಿವೃದ್ಧಿಗಾಗಿ ಸೂರತ್ ಮತ್ತು ಕೊಚ್ಚಿನ್‌ಗೆ ಹೊಸದಾಗಿ ವಿಮಾನ ಸೇವೆ ಕಲ್ಪಿಸಬೇಕು. ಜೋಧ್‌ಪುರ, ಕೋಲ್ಕತ್ತಾ ಮತ್ತು ಗೋವಾಕ್ಕೆ ಹೆಚ್ಚುವರಿ ಮಾರ್ಗಗಳ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿದರು.ಜಿಎಸ್‌ಟಿ ತೆರಿಗೆ ಸುಧಾರಣೆಯಾಗಿದೆ. ಆದರೂ ಜಿಎಸ್‌ಟಿ ಸಂಬಂಧಿಸಿದಂತೆ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಇವುಗಳ ಪರಿಹಾರಕ್ಕೆ ರಾಜ್ಯದಲ್ಲಿ ನ್ಯಾಯಮಂಡಳಿ 2 ಪೀಠಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರಿಂದ ಒಂದು ಬೆಂಗಳೂರಲ್ಲಿ, ಮತ್ತೊಂದು ಧಾರವಾಡದಲ್ಲಿ ಸ್ಥಾಪಿಸಿದರೆ ಉತ್ತಮ. ಧಾರವಾಡ-ಹುಬ್ಬಳ್ಳಿ ನಗರಗಳ ಸುತ್ತಮುತ್ತಲಿನ ಸ್ಥಳಗಳಿಂದ ತೆರಿಗೆದಾರರು ಜಿಎಸ್‌ಟಿ ವಿವಾದಗಳಿಗೆ ಸಂಬಂಧಿಸಿದ ವಿಚಾರಣೆ ಮತ್ತು ಕಾನೂನು ಪ್ರಕ್ರಿಯೆಗಳಿಗೆ ಹಾಜರಾಗಲು ಬೆಂಗಳೂರಿಗೆ ಪ್ರಯಾಣ ಬೆಳೆಸುವುದು ತಪ್ಪುತ್ತದೆ. ಸಮಯ, ಹಣ ಉಳಿತಾಯವಾಗುತ್ತದೆ. ಧಾರವಾಡದಲ್ಲಿ ಜಿಎಸ್‌ಟಿ ಮೇಲ್ಮನವಿಯ ನ್ಯಾಯಮಂಡಳಿ ಪೀಠ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಸಚಿವರು, ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ಮನವಿ ಸಲ್ಲಿಸುವ ವೇಳೆ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ತೆರಿಗೆ ಸಮಿತಿ ಚೇರಮನ್ ಕಾರ್ತಿಕ ಶೆಟ್ಟಿ, ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಸಮಿತಿ ಚೇರಮನ್ ಸಿದ್ದೇಶ್ವರ ಕಮ್ಮಾರ, ಸದಸ್ಯರಾದ ಪರಶುರಾಮ ಮಿಸ್ಕಿನ್, ಬ್ರಹ್ಮಕುಮಾರ ಬೀಳಗಿ, ಅಶೋಕ ಲದವಾ, ಸಿಎ ಚನ್ನವೀರ ಮುಂಗರವಾಡಿ, ಸಿಎ ಶೇಷಗಿರಿ ಕುಲಕರ್ಣಿ, ಬಾಬಾ ಭೂಸದ, ಟ್ಯಾಕ್ಸ ಪ್ರ್ಯಾಕ್ಟೀಶನರ ಅಸೋಸಿಯೇಶನ್‌ದ ಪದಾಧಿಕಾರಿಗಳು ಉಪಸ್ಥಿತರಿದ್ದರು.