ಸಾರಾಂಶ
ರಾಜ್ಯದ ಹಲವೆಡೆ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವ ಇರಾದೆ ಇದೆ.
ಕೊಟ್ಟೂರು: ರಾಜ್ಯ ಕೈಗಾರಿಕಾ ಸ್ನೇಹಿಯಾಗುವ ನಿಟ್ಟಿನಲ್ಲಿ ಅಲ್ಲಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು ಸೇರಿದಂತೆ ಹೊಸ ಬಗೆಯ ಉದ್ಯಮಗಳ ಸ್ಥಾಪನೆಗೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ತಡವಿಲ್ಲದೇ ಒದಗಿಸಿ ಕೊಡುವತ್ತ ಸರ್ಕಾರ ಮತ್ತು ಕೆಎಸ್‌ಐಐಡಿಸಿ ನಿಗಮ ಮುಂದಾಗಿದೆ ಎಂದು ನಿಗಮದ ನಿಯೋಜಿತ ಅಧ್ಯಕ್ಷ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.
ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ ನಂಜಯ್ಯನಮಠ ಅವರನ್ನು ಇಲ್ಲಿನ ರೇಣುಕಾ ಸಭಾಂಗಣದ ಕಾರ್ಯಾಲಯದಲ್ಲಿ ತಾಲೂಕು ಬೇಡ ಜಂಗಮ, ಇತರರು ನೀಡಿದ ಸನ್ಮಾನ ಸ್ವೀಕರಿಸಿದ ಅವರು ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.ಕೆಎಸ್ಐಐಡಿಸಿಗೆ ನೂತನ ಅಧ್ಯಕ್ಷರಾಗಿ ತಮ್ಮನ್ನು ಸರ್ಕಾರ ಮತ್ತು ಕಾಂಗ್ರೆಸ್ ವರಿಷ್ಠರು ನೇಮಕ ಮಾಡಿದ್ದು ಬರುವ ಸೋಮವಾರ ಅ.6ರಂದು ಬೆಂಗಳೂರಿನ ಖನಿಜ ಭವನದಲ್ಲಿನ ಕಚೇರಿಯಲ್ಲಿ ಅಧಿಕಾರವನ್ನು ಸ್ವೀಕರಿಸಲಿದ್ದೇನೆ ಎಂದು ಅವರು ಹೇಳಿದರು.
ರಾಜ್ಯದ ಹಲವೆಡೆ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವ ಇರಾದೆ ಇದೆ. ಸ್ಥಾಪನೆಗೆ ಬೇಕಿರುವ ವಿಶಾಲ ಜಮೀನು, ಮತ್ತಿತರ ಪೂರಕ ಮಾಹಿತಿ ಕಲೆ ಹಾಕುವ ಪ್ರಯತ್ನವನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು ಎಂದರು.ಮುಖಂಡ ಎಂಎಂಜೆ ಸತ್ಯಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ದಾರುಕೇಶ್, ಡಿಸಿಸಿ ಕಾರ್ಯದರ್ಶಿ ಅಡಿಕಿ ಮಂಜುನಾಥ, ಎಂಎಂಜೆ ಮಂಜುನಾಥ, ಮೂಗಣ್ಣ, ಸ್ವತಂತ್ರ, ಎನ್.ಬಿ. ಕೊಟ್ರೇಶ್, ಎಸ್.ಎಸ್.ಅಶೋಕ, ಕೆ.ನಾಗಪ್ಪ, ಪ್ರಕಾಶ್ ಅಂಗಡಿ ಮತ್ತಿಹಳ್ಳಿ, ಅಟವಾಳ್ಗಿ ಶ್ರೀಧರ, ಟಿ.ಎಂ. ಸಣ್ಣ ಕೊಟ್ರಯ್ಯ ಇದ್ದರು.