ರಾಜ್ಯ ಮಂಡಳಿ ಸಭೆಯ ನಿರ್ಣಯ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ: ಸಿದ್ದನಗೌಡ ಪಾಟೀಲ್‌

| Published : Feb 20 2024, 01:47 AM IST

ರಾಜ್ಯ ಮಂಡಳಿ ಸಭೆಯ ನಿರ್ಣಯ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ: ಸಿದ್ದನಗೌಡ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಪಾರ್ಲಿಮೆಂಟ್ ಚುನಾವಣೆ ಸಮೀಪಿಸುತ್ತಿರುವ ಈ ಸಂಬಂಧದಲ್ಲಿ ನಡೆಯುತ್ತಿರುವ ಈ ಸಭೆಯ ನಿರ್ಣಯಗಳು ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ ರೂಪಿಸಲಿದೆ ಎಂದು ಹೊಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಪಾರ್ಲಿಮೆಂಟ್ ಚುನಾವಣೆ ಸಮೀಪಿಸುತ್ತಿರುವ ಈ ಸಂಬಂಧದಲ್ಲಿ ನಡೆಯುತ್ತಿರುವ ಈ ಸಭೆಯ ನಿರ್ಣಯಗಳು ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಸೂಚಿ ರೂಪಿಸಲಿದೆ ಎಂದು ಹೊಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ್ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಸಿಪಿಐ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಂಡಳಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಿಂದ ಈ ಚುನಾವಣೆಯವರೆಗೆ ತುಮಕೂರು ಚರ್ಚೆಯಲ್ಲಿದೆ. ಕಳೆದ ಚುನಾವಣೆಯಲ್ಲಿ 17 ಸಾವಿರ ಮತಗಳನ್ನು ಪಡೆದ ಪರಿಣಾಮ ಮಾಜಿ ಪ್ರಧಾನಿಯೊಬ್ಬರು ಸೋಲನ್ನು ಕಂಡರು. ಹಾಗಾಗಿ ಸಿಪಿಐಗೆ ಒಬ್ಬರನ್ನು ಗೆಲ್ಲಿಸುವ, ಸೋಲಿಸುವ ಶಕ್ತಿ ಇದೆ. ಎಲ್ಲಾ ಚುನಾವಣೆಯಲ್ಲಿಯೂ ಸಕ್ರಿಯವಾಗಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯನ್ನು ಸೊಲಿಸಬೇಕು ಎಂಬುದು ಕಾಂಗ್ರೆಸ್ ಮತ್ತು ನಮ್ಮದು ಹೋರಾಟವಾಗಿದೆ. ಮೋದಿ ಅವರ ಬಗ್ಗೆ ನಮಗೆ ದ್ವೇಷವಿಲ್ಲ. ಆದರೆ ಅವರು ನುಡಿದಂತೆ ನಡೆದಿಲ್ಲ. 2014 ರಲ್ಲಿ ರೈತರ ಆದಾಯ ದ್ವಿಗುಣ ಎಂಬುದು ಮರೀಚಕೆಯಾಗಿದೆ. ದೆಹಲಿಯ ಒಳಗೆ ಬರದಂತೆ ತಡೆಯಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ವಿರೋಧಿ, ಸರ್ವಾಧಿಕಾರ ಅಲ್ಲವೇ ಎಂದು ಪ್ರಶ್ನಿಸಿದರು.

ಸ್ವಾಮಿನಾಥ್‌ನ ಆಯೋಗದ ವರದಿಯಂತೆ ಉತ್ಪಾದನಾ ವೆಚ್ಚ ಮತ್ತು ಶೇ. 50ರ ಲಾಭ ಕೊಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಪ್ರತಿವರ್ಷ ರೈತ ಕೃಷಿ ಬಂಡವಾಳ ಹೆಚ್ಚಾದಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಇದನ್ನು ತಪ್ಪಿಸಬೇ ಕೆಂಬುದು ರೈತರ ಮೊದಲ ಮನವಿಯಾಗಿದೆ. ಆದರೆ ರೈತರನ್ನು ದೆಹಲಿಯ ಒಳಗ ಬಿಟ್ಟುಕೊಳ್ಳದೆ ತಡೆಗೋಡೆ ನಿರ್ಮಿಸಿ ತಡೆಯುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಸಿದ್ದನಗೌಡ ಪಾಟೀಲ್ ನುಡಿದರು.

ನಗರದ ಟೌನ್‌ಹಾಲ್ ವೃತ್ತದಿಂದ ಕನ್ನಡಭವನದವರೆಗೂ ನಡೆದ ಮೆರವಣಿಗೆಯನ್ನು ಉದ್ಘಾಟಿಸಿದ ಸಾತಿ ಸುಂದರೇಶ್ ಮಾತನಾಡಿ, ಅಪಾಯದಲ್ಲಿರುವ ಸಂವಿಧಾನ ಮತ್ತು ಪ್ರಜಾಸತ್ತತೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಕ ವರ್ಗದ ಮುಂದಿರುವ ಸವಾಲುಗಳನ್ನು ಕುರಿತು ಭಾರತ್ ಕಮ್ಯುನಿಷ್ಟ್ ಪಕ್ಷ ಎರಡು ದಿನಗಳ ರಾಜ್ಯ ಮಂಡಳಿ ಸಭೆಯಲ್ಲಿ ವಿಸ್ಕೃತವಾಗಿ ಚರ್ಚೆ ನಡೆಸಲಿದೆ. ಜನರ ಮೂಲಭೂತ ಸಮಸ್ಯೆಗಳನ್ನು ಬದಿಗಿರಿಸಿ, ದೇವರು, ಧರ್ಮದ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿರುವ ಫ್ಯಾಸಿಸ್ಟ್ ಸಂಸ್ಕೃತಿಯ ವಿರುದ್ಧ ದ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ ಎಂದರು.

ಕರ್ನಾಟಕದಲ್ಲಿ ವಿವಿಧ ಎಡಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯ ರೀತಿಯಲ್ಲಿಯೇ ದೆಹಲಿಯ ಗಡಿಗಳಲ್ಲಿ ಲಕ್ಷಾಂತರ ಜನರ ರೈತರು ಹೋರಾಟದಲ್ಲಿ ತೊಡಗಿದ್ದಾರೆ. ಅವರ ಮೇಲೆ ನಿರಂತರ ದೌರ್ಜನ್ಯ ನಡೆಸಲಾಗುತ್ತಿದೆ. ಆಶ್ರವಾಯು, ಜಲಪಿರಂಗಿಯ ಜೊತೆಗೆ, ಮುಳ್ಳುತಂತಿ, ಸಿಮೆಂಟ್ ಬ್ಲಾಕ್‌ಗಳ ಮೂಲಕ ತಡೆಗೋಡೆ ನಿರ್ಮಿಸಿ, ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದು, ಇದರ ವಿರುದ್ಧ ದೇಶದ ಜನರು ಸಿಡಿದೇಳಬೇಕಾಗಿದೆ. ಇಂತಹ ಸರ್ವಾಧಿಕಾರಿ ಧೋರಣೆಯ ವಿರುದ್ಧ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸ್ವಾತಂತ್ರ ಹೋರಾಟಗಾರ ಟಿ.ಆರ್‌. ರೇವಣ್ಣ, ಇಂದು ಕೇಂದ್ರದ ಫ್ಯಾಸಿಸ್ಟ್ ಸಂಸ್ಕೃತಿಯ ವಿರುದ್ಧ ಎಡ ಪಕ್ಷಗಳು ನೈತಿಕ ಹೋರಾಟ ನಡೆಸಬೇಕಾಗಿದೆ. ಭ್ರಷ್ಟಾಚಾರದ ಮೂಲಕವೇ ಅಧಿಕಾರವನ್ನು ಉಳಿಸಿಕೊಳ್ಳಲು ಹೊರಟಿರುವ ಕೇಂದ್ರದ ವಿರುದ್ಧ ನಮ್ಮ ಹೋರಾಟ ಮತ್ತಷ್ಟು ತೀವ್ರವಗೊಳ್ಳಬೇಕಿದೆ ಎಂದರು.

ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿದರು. ವೇದಿಕೆಯಲ್ಲಿ ಕಂಬೇಗೌಡ, ಸಾತಿ ಸುಂದರೇಶ್, ಟಿ.ಅರ್‌. ರೇವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ನೂರಾರು ಸಿಪಿಐ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಪಾಲ್ಗೊಂಡಿದ್ದರು.