ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಇಬ್ಭಾಗ-ಬೊಮ್ಮಾಯಿ ಭವಿಷ್ಯ

| Published : Apr 06 2024, 12:51 AM IST

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಇಬ್ಭಾಗ-ಬೊಮ್ಮಾಯಿ ಭವಿಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ನಂತರ ಕರ್ನಾಟಕದ ಕಾಂಗ್ರೆಸ್ ಇಬ್ಭಾಗವಾಗಲಿದ್ದು, ಮತ್ತೆ ರಾಜ್ಯದಲ್ಲಿ ವಿಧಾನಸಭೆಯ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹಾವೇರಿ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

ಹಾನಗಲ್ಲ: ಲೋಕಸಭೆ ಚುನಾವಣೆ ನಂತರ ಕರ್ನಾಟಕದ ಕಾಂಗ್ರೆಸ್ ಇಬ್ಭಾಗವಾಗಲಿದ್ದು, ಮತ್ತೆ ರಾಜ್ಯದಲ್ಲಿ ವಿಧಾನಸಭೆಯ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹಾವೇರಿ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.ಅಕ್ಕಿಆಲೂರಿನಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಮತ ನೀಡಿದರೆ ಕಸದ ಬುಟ್ಟಿಗೆ ಹಾಕಿದಂತೆ ಎಂಬ ಮನೋಭಾವನೆ ಜನರ ಮನಸ್ಸಿನಲ್ಲಿ ಮೂಡಿದೆ. ಭಾರತ ಸಾಕಷ್ಟು ಪ್ರಧಾನಿಗಳನ್ನು ಕಂಡಿದೆ. ಆದರೆ ನರೇಂದ್ರ ಮೋದಿಯವರಂತ ವ್ಯಕ್ತಿತ್ವ ನಮಗೆ ಸಿಕ್ಕಿರಲಿಲ್ಲ. ಪ್ರಮಾಣಿಕತೆ, ಸಮಯ ಪ್ರಜ್ಞೆ, ದೇಶಭಕ್ತಿಯ ಸಂಸ್ಕಾರ ಮೋದಿಯವರಲ್ಲಿ ಇದೆ. ದೇಶಭಕ್ತಿಗೆ ಇನ್ನೊಂದು ಹೆಸರೆ ಮೋದಿಜೀ ಎಂದರು.

ದೇಶದ ಬೆಳೆವಿಮೆ ನೇತಾರ ಸಿ.ಎಂ. ಉದಾಸಿಯವರು, ಹಾವೇರಿ ಜಿಲ್ಲೆಯಲ್ಲಿ ೪೮೦ ಕೋಟಿ ಬೆಳೆವಿಮೆ ಬಂದಿದೆ ಎಂದರೆ ಅದಕ್ಕೆ ಕಾರಣ ಸಿ.ಎಂ ಉದಾಸಿಯವರು, ಯೋಜನೆ ಘೋಷಣೆ ಮಾಡುವುದು ಮಾತ್ರವಲ್ಲ. ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯ ಮೋದಿ ಮಾಡುತ್ತಿದ್ದಾರೆ ಎಂದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಖರ್ಗೆ ಪ್ರಧಾನಿಯಾಗಬೇಕು ಎನ್ನುತ್ತಿದ್ದರೆ, ಇತ್ತ ಕರ್ನಾಟಕದ ಕಾಂಗ್ರೆಸ್‌ನವರು, ರಾಹುಲ್ ಗಾಂಧಿ ಎನ್ನುತ್ತಿದ್ದಾರೆ ಎಂದು ಬೊಮ್ಮಾಯಿ ಲೇವಡಿ ಮಾಡಿದರು. ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ತನ್ನ ದಕ್ಷ ಮತ್ತು ಪ್ರಾಮಾಣಿಕ ಆಡಳಿತದ ಮೂಲಕ ದೇಶದ ಗಮನ ಸೆಳೆದಿರುವ ಬಸವರಾಜ ಬೊಮ್ಮಾಯಿಯವರ ಶಕ್ತಿ ಸಾಮರ್ಥ್ಯ ಗಮನಿಸಿರುವ ಹೈಕಮಾಂಡ್, ಕೇಂದ್ರಕ್ಕೆ ಆಹ್ವಾನಿಸಿದ್ದಾರೆ. ಜೀವನದ ಪ್ರತಿ ಹೆಜ್ಜೆ ಯಶಸ್ವಿಯ ಹಾದಿಯಲ್ಲಿರುವ ಬೊಮ್ಮಾಯಿಯವರು ಹಾವೇರಿಯಿಂದ ಲೋಕಸಭೆಗೆ ಪ್ರತಿನಿಧಿಸಿದರೆ ನಮ್ಮ ಪೀಳಿಗೆಯ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಕಾಂಗ್ರೆಸ್ ಮುಖಂಡರಾದ ಶಿವಯೋಗಿ ಹಿರೇಮಠ ಮತ್ತು ನಾಗೇಶ ಪಡೆಪ್ಪನವರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜಶೇಖರ ಕಟ್ಟೆಗೌಡರ, ಮಹೇಶ ಕಮಡೊಳ್ಳಿ, ಎಸ್. ಪಿ. ಪಾವಲಿ, ಬೋಜರಾಜ ಕರೂದಿ, ಉದಯ ವಿರೂಪ್ಪಣ್ಣನವರ, ಶಿವಕುಮಾರ ದೇಶಮುಖ, ಮಲ್ಲಿಕಾರ್ಜುನ ಅಗಡಿ, ಮಾಲತೇಶ ಸೊಪ್ಪಿನ, ಬಸವರಾಜ ಹಾದಿಮನಿ, ಕೃಷ್ಣ ಈಳಿಗೇರ, ಆರ್. ಬಿ. ಪಾಟೀಲ ವೇದಿಕೆಯಲ್ಲಿದ್ದರು.