ಅ.4ರಂದು ಮಹದಾಯಿ ಜಾರಿಗೆ ರಾಜ್ಯ ರೈತ ಸಮಾವೇಶ

| Published : Sep 21 2024, 01:48 AM IST

ಸಾರಾಂಶ

ರಾಜ್ಯ ರೈತ ಸಮಾವೇಶದಲ್ಲಿ ರಾಜ್ಯದ 30 ರೈತ ಸಂಘಟನೆ ಸಹಯೋಗದಲ್ಲಿ ಸಮಾವೇಶ ಆಯೋಜಿಸಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಸರ್ಕಾರಗಳ ಮೇಲೆ ಒತ್ತಡ ಹಾಕಲಾಗುವುದು

ನರಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಅ.4ರಂದು ಬಂಡಾಯ ನೆಲದಲ್ಲಿ ರಾಜ್ಯ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸೇನಾ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಮಹದಾಯಿ ಹೋರಾಟ ವೇದಿಕೆಯಲ್ಲಿ ಅ. 4ರಂದು ನಡೆಯುವ ರಾಜ್ಯ ರೈತ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಕಳೆದ 9 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಬಂಡಾಯ ನೆಲದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ನಿರಂತರ ಧರಣಿ ಮಾಡಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಸರ್ಕಾರಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅ.4ರಂದು ನರಗುಂದದಲ್ಲಿ ರೈತ ಸೇನಾ ಸಂಘಟನೆ ನೇತೃತ್ವದಲ್ಲಿ ನಡೆಯುವ ರಾಜ್ಯ ರೈತ ಸಮಾವೇಶದಲ್ಲಿ ರಾಜ್ಯದ 30 ರೈತ ಸಂಘಟನೆ ಸಹಯೋಗದಲ್ಲಿ ಸಮಾವೇಶ ಆಯೋಜಿಸಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಸರ್ಕಾರಗಳ ಮೇಲೆ ಒತ್ತಡ ಹಾಕಲಾಗುವುದು. ರೈತ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನಿಗದಿ, ರಾಜ್ಯದ ಎಲ್ಲ ತಾಲೂಕುಗಳಲ್ಲಿ ಶಾಶ್ವತ ಬೆಂಬಲ ಬೆಲೆ ಕೇಂದ್ರ ತೆರೆಯುವುದು, ಜಲಾಶಯಗಳ ಹೂಳು ತೆಗೆಯುವುದು. ಜಲಾಶಯ ಮೂಲಕ ನೀರಾವರಿ ಕಾಲುವೆ ಕೆಳ ಭಾಗದ ರೈತರಿಗೆ ನೀರು ಒದಗಿಸಲು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಿವಪ್ಪ ಹೊರಕೇರಿ, ಅಶೋಕ ಸಾತಣ್ಣವರ, ಹನಮಂತ ಮಡಿವಾಳರ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸಿ.ಎಸ್. ಪಾಟೀಲ, ರಾಘವೇಂದ್ರ ಗುಜಮಾಗಡಿ, ಸುಭಾಸ ಗಿರಿಯಣ್ಣವರ, ಮಲ್ಲಣ್ಣ ಅಲೇಕಾರ, ತಿಪ್ಪಣ್ಣ ಮೇಟಿ, ಈರಣ್ಣ ಚಿಕ್ಕಮಠ, ಚನ್ನಬಸಪ್ಪ ಅನವಾಲ, ಗುರು ರಾಯಣ್ಣಗೌಡ್ರ, ಮಹೇಶ ನವಳ್ಳಿ, ಮುತ್ತು ಪಾಟೀಲ, ವೆಂಕನಗೌಡ ಗಡ್ಡಣ್ಣವರ, ಯಲ್ಲಪ್ಪ ಸಿನಪ್ಪನವರ, ಬಸವರಾಜ ಮೆಣಸಗಿ, ಹೇಮಕ್ಕ ಘಾಳಿ, ನೀಲಕ್ಕ ಹಸಬಿ, ಅನಸವ್ವ ಶಿಂದೆ, ನಾಗರತ್ನ ಸವಳಬಾವಿ, ಯಲ್ಲಪ್ಪ ಚಲವಣ್ಣವರ, ಚನ್ನಬಸಪ್ಪ ಆಯಿಟ್ಟಿ, ಅರ್ಜುನ ಮಾನೆ, ಹನಮಂತ ಸರನಾಯ್ಕರ, ಶಂಕ್ರಪ್ಪ ಜಾಧವ, ಮಲ್ಲೇಶ ಅಣ್ಣಿಗೇರ, ವಿಜಯಕುಮಾರ ಹೂಗಾರ, ವಾಸು ಚವ್ಹಾಣ ಸೇರಿದಂತೆ ಮುಂತಾದವರು ಇದ್ದರು.