ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮಧ್ಯೆ ಇನ್‌ ಫೈಟ್ ಜೋರಾಗಿದೆ. ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆಂದು ಸಿದ್ದರಾಮಯ್ಯ. ಸಿಎಂ ಸ್ಥಾನ ಬೇಕೆಂದು ಡಿ.ಕೆ. ಶಿವಕುಮಾರ್‌ ಹಠದ ಈ ಇನ್ ಫೈಟ್ ನಿಂದ ಇಡೀ ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮಧ್ಯೆ ಇನ್‌ ಫೈಟ್ ಜೋರಾಗಿದೆ. ಮುಖ್ಯಮಂತ್ರಿಯಾಗಿ ನಾನೇ ಮುಂದುವರೆಯುತ್ತೇನೆಂದು ಸಿದ್ದರಾಮಯ್ಯ. ಸಿಎಂ ಸ್ಥಾನ ಬೇಕೆಂದು ಡಿ.ಕೆ. ಶಿವಕುಮಾರ್‌ ಹಠದ ಈ ಇನ್ ಫೈಟ್ ನಿಂದ ಇಡೀ ರಾಜ್ಯದ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಆರೋಪಿಸಿದರು.

ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಮುಖಾಂತರ ಪ್ರತಿವರ್ಷ ₹50 ಸಾವಿರ ಕೋಟಿ ಹೋಗುತ್ತಿದೆ. ಆಲಮಟ್ಟಿ ಯೋಜನೆಗೆ ಈ ಭಾಗದ ಜನರು ಎಷ್ಟು ಹೋರಾಟ ಮಾಡಿದರೂ ಅನುದಾನ ಕೊಡ್ತಿಲ್ಲ. ಯುಕೆಪಿಗೆ ಕನಿಷ್ಟ ಅಂದ್ರೂ ₹70 ಸಾವಿರ ಕೋಟಿ ಬೇಕು. ಎಲ್ಲಿದೆ ಹಣ, ಬೋಗಸ್ ಹೇಳಿಕೆ ಕೊಡಬೇಡಿ, ನಿಮ್ಮ ಬಳಿ ಹಣವಿಲ್ಲ, ಖಜಾನೆ ಖಾಲಿ ಆಗಿದೆ ಎಂದು ಹರಿಹಾಯ್ದರು.ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಿ ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಲಾಗಿದೆ. ಯಲ್ಲಾಪುರದಲ್ಲಿ ಹಿಂದು ಸಮುದಾಯದ ವಿಧವೆ ಮಹಿಳೆಯ ಹತ್ಯೆಯ ಜಿಹಾದಿ ಕೃತ್ಯ. ಬಳ್ಳಾರಿ ಗಲಾಟಯಲ್ಲಿ ಕಾಂಗ್ರೆಸ್ ಶಾಸಕ ಭರತರೆಡ್ಡಿ ಶಾಮೀಲಿದ್ದಾರೆ. ತಮ್ಮ ಶಾಸಕರ ರಕ್ಷಣೆಗೆ ಅನುಕೂಲಕರ ವರದಿಯನ್ನು ಕಾಂಗ್ರೆಸ್ ನ ಸತ್ಯಶೋಧನ ತಂಡ ಕೊಟ್ಟಿದೆ. ಸಿಐಡಿ ತನಿಖೆ ಕೊಡೋದಾಗಿ ಗೃಹಸಚಿವ ಪರಮೇಶ್ವರ್‌ ಹೇಳಿದ್ದಾರೆ. ಸಿಬಿಐ ವಹಿಸಿ ಎಂಬುವುದು ನಮ್ಮ ಆಗ್ರಹ. ಭರತರೆಡ್ಡಿ ಕುತಂತ್ರದಿಂದ, ಅವರ ಪೊಲಿಟಿಕಲ್ ಮೊಟಿವೇಶನ್ ನಿಂದ ಈ ಗಲಾಟೆ ನಡೆದು ಜನಾರ್ದನರೆಡ್ಡಿ ಅವರನ್ನು ಟಾರ್ಗೆಟ್‌ ಮಾಡಿ ಹತ್ಯೆ ಮಾಡುವ ಪ್ರಯತ್ನ ನಡೆಯಿತು. ಹೀಗಾಗಿ ಭರತರೆಡ್ಡಿ ಕಡೆಯವರನ್ನು ಅರೆಸ್ಟ್ ಮಾಡಿದ್ದೀರಾ. ಯಾವನೋ ಒಬ್ಬ ಗನ್ ಮ್ಯಾನ್ ನನ್ನು ಅರೆಸ್ಟ್ ಮಾಡಿದ್ದೀರಿ. ಅವರ ಕಡೆ ಏನು ಸ್ಟೇಟ್ ಮೆಂಟ್ ತೆಗೆದುಕೊಂಡು ಹೇಗೆ ಮುಚ್ಚಿ ಹಾಕ್ತಿರೋ ಗೊತ್ತಿಲ್ಲ. ಅವರ ಮನೆತನದಲ್ಲಿ ಶವ ಹೂಳಿ ಸಮಾಧಿ ಮಾಡುವ ಸಂದರ್ಭದಲ್ಲಿ. ಆ ಶವ ನೀವು ಸುಟ್ಟು ಹಾಕ್ತೀರಿ. ಸಂಫರ್ಣವಾಗಿ ಈ ಪ್ರಕರಣ ಮುಚ್ಚಿ ಹಾಕುವ ಕೆಲಸವಾಗುತ್ತಿದೆ. ಬಳ್ಳಾರಿಗೆ ಹೋಗಿ ಯಾರನ್ನೇ ಕೇಳಿದರೂ, ಇದರಲ್ಲಿ ಭರತರೆಡ್ಡಿಯದ್ದು ತಪ್ಪು ಎಂದು ಓಪನ್ ಆಗಿ ಹೇಳ್ತಾರೆ ಎಂದರು.

ಸಿಎಂ ಸಿದ್ದರಾಮಯ್ಯ ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ತಿದ್ದಾರೆ.ಅತಿ ಹೆಚ್ಚು ದಿನ ಸಿಎಂ ಅಂತಾರೆ. ದೇವರಾಜ ಅರಸು ಅವರ ಆಡಳಿತದಲ್ಲಿ ಲ್ಯಾಂಡ್ ರಿಪಾರ್ಮೇಶನ್ ಆ್ಯಕ್ಟ್ ಜಾರಿ ಮಾಡಿ ಸಾಮಾಜಿಕ ಕೆಲಸ ಮಾಡಿದ್ದರು. ಅವರ ಆಡಳಿತಕ್ಕೂ ನಿಮಗೂ ಹೋಲಿಗೆ ಮಾಡಿಕೊಳ್ಳಲಿಕ್ಕೆ ಹೋಗಬೇಡಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಲೆಳೆದರು.

ಏಳು ವರ್ಷ ಆಡಳಿತದ ಬಗ್ಗೆ ಕೊಚ್ಚಿಕೊಂಡು ಹೋಗುವಂತದ್ದೇನಲ್ಲ. ನಮ್ಮ ಶಿವರಾಜ್‌ ಸಿಂಗ್ ಚೌಹಾಣ್ 15 ವರ್ಷ ಆಡಳಿತ ಮಾಡಿದ್ದಾರೆ. ಇಲ್ಲಿಯವರೆಗೆ ಬಡವರಿಗೆ ಸೂರು ಕೊಡಲು ಆಗುತ್ತಿಲ್ಲ. ಯಾರೋ ವಿದೇಶದಿಂದ ಬಂದಂತವರಿಗೆ ಕೋಗಿಲು ಪ್ರದೇಶದಲ್ಲಿ ಸೂರು ಕೊಡಲು ಹೊರಟಿದ್ದೀರಿ. ನಿಮ್ಮಲ್ಲಿ ಎರಡ್ಮೂರು ಗುಂಪುಗಳಾಗಿ ಜನರು ಸಫರ್ ಆಗ್ತಿದ್ದಾರೆ ಎಂದು ಆರೋಪಿಸಿದರು.

ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಕುರಿತು ಸಭೆ:

ಬಾಗಲಕೋಟೆಯಲ್ಲಿನ ಇಂದಿನ ಪಕ್ಷದ ಸಭೆ ಯಾಕೆ ಎಂಬ ಪ್ರಶ್ನೆಗೆ ಸಂಸದ ಜಗದೀಶ ಶೆಟ್ಟರ ಉತ್ತರಿಸಿ ಸಂಘಟನೆ, ಚುನಾವಣೆ ಒಗ್ಗಟ್ಟಿನಿಂದ ಎದುರಿಸುವ ಕುರಿತು ಸಭೆ ನಡೆಸಿದ್ದೇವೆ. ಅಭ್ಯರ್ಥಿ ಆಯ್ಕೆಯಾಗಲಿ, ಬೇರೆ ಅಭ್ಯರ್ಥಿ ಹೆಸರು ಕೇಳುವ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದರು.

ಪಕ್ಷದಿಂದ ಹೊರ ಹೋದವ್ರನ್ನ ಪಕ್ಷಕ್ಕೆ ಸೇರಿಸಿಕೊಳ್ತೀವಿ ಎಂಬ ಮುರುಗೇಶ ನಿರಾಣಿ ಹೇಳಿಕೆ ವಿಚಾರದ ಕುರಿತು ರಾಜ್ಯದ ಮಟ್ಟದ ನಾಯಕರ ಜೊತೆಗೆ ಚರ್ಚೆ ಮಾಡಿದ್ದೇನೆ. ಈ ಪ್ರೊಸೆಸ್ ಮುಂದುವರಿಯುತ್ತದೆ. ಇದೊಂದು ರಾಜಕೀಯ ವ್ಯವಸ್ಥೆ, ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರೂ ಕೂಡಿ ಕೆಲಸ ಮಾಡಿದಾಗ ಮಾತ್ರ ಗೆಲ್ತೀವಿ. ಅಂತಹದ್ದನ್ನು ಮನದಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಕೂಡ ಕರೆದು ಮಾತನಾಡಿಸಿ ಸರಿ ಮಾಡ್ತೀವಿ. ಎಲ್ಲರೂ ಒಂದೊಂದು ಅಭಿಪ್ರಾಯ ಹೇಳುತ್ತಾರೆ. ಪಕ್ಷ ಈ ಬಗ್ಗೆ ಎಲ್ಲರ ಅಭಿಪ್ರಾಯ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಉಪಚುನಾವಣೆಯನ್ನು ಬಿಜೆಪಿ ಹೇಗೆ ಎದುರಿಸುತ್ತದೆ ಎಂಬ ಪ್ರಶ್ನೆಗೆ ಈ ಹಿಂದಿನ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಗೆದ್ದಿದ್ದೇವೆ. ಈಗಲೂ ಅಷ್ಟೇ ಅನುಕಂಪ ಎಷ್ಟರ ಮಟ್ಟಿಗೆ ಇದೆ ಎಂದು ಅಳೆಯುವವರು ಯಾರು? ಬಿಜೆಪಿಯದ್ದೂ ಒಂದು ಶಕ್ತಿಯಿದೆ. ಕಾರ್ಯಕರ್ತರ ಪಡೆ ಇದೆ. ಎಲ್ಲರೂ ಒಗ್ಗೂಡಿಸಿ ಕೆಲಸ ಮಾಡುತ್ತೇವೆ. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಘರ್ ವಾಪ್ಸಿ ರಾಜ್ಯ ಮಟ್ಟದಲ್ಲಿ ನಿರ್ಧಾರ ಆಗಬೇಕು:

ಪಕ್ಷ ಬಿಟ್ಟು ಹೋದವರ ಘರ್ ವಾಪಸಿ ವಿಚಾರದ ಕುರಿತು ಮಾತನಾಡಿ, ಇದು ರಾಜ್ಯ ಮಟ್ಟದಲ್ಲಿ ನಿರ್ಧಾರ ಆಗಬೇಕು. ನಾನು ಕೂಡ ಬೇರೆ ಬೇರೆ ಜಿಲ್ಲೆ ಪ್ರವಾಸ ಮಾಡಿದಾಗ ಅಲ್ಲಿ ಇತವರು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಬೇಕು ಎಂದೆಲ್ಲ ಹೇಳಿದ್ದಾರೆ. ಕಾಂಗ್ರೆಸ್ ನಿಂದಲೂ ಕೆಲವರು ಬರ್ತೀವಿ ಅಂತಿದ್ದಾರೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ನಿರ್ಧಾರ ಆಗುತ್ತದೆ. ಬೇಸಿಕ್ ಆಗಿ ರಾಜ್ಯದಲ್ಲಿ ಸಂಘಟನೆ ದೃಷ್ಟಿಯಿಂದ ಸಭೆಗಳು ನಡೆದಿವೆ. ಪ್ರತಿಯೊಂದು ಜಿಲ್ಲೆಯ ಸಮಸ್ಯೆ ಕೂಡ ಚರ್ಚೆಯಾಗಿವೆ. ರಾಜ್ಯದ ನಾಯಕರು ಮಾರ್ಗದರ್ಶನ ಮಾಡ್ತಿದ್ದಾರೆ. ಆ ಪ್ರಕಾರ ಪಕ್ಷ ಸಂಘಟನೆ ಮಾಡಿಕೊಂಡು ಹೋಗುತ್ತೇವೆ. ನಾನು ವೈಯಕ್ತಿಕವಾಗಿ ನಾಯಕರ ಜೊತೆ ಚರ್ಚೆ ಮಾಡ್ತಿದ್ದೀನಿ. ಏಕತೆ ಮಂತ್ರ ಇಟ್ಕೊಂಡು ಕೆಲಸ ಮಾಡುತ್ತೇವೆ. ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮಾತಾಡಿ ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಸಣ್ಣಪುಟ್ಟ ಸಮಸ್ಯೆ ಇದ್ರೂ ಬಗೆಹರಿಸಿಕೊಳ್ತೇವೆ:

ಇಂದು ಕಾರ್ಯಕರ್ತರ ಸಭೆ ಇದೆ. ಇಲ್ಲಿ ಕೂಡ ಬೈ ಎಲೆಕ್ಷನ್ ಇದೆ. ಸಂಘಟನಾತ್ಮಕ ಚಟುವಟಿಕೆ ಹಿನ್ನೆಲೆ ಸಭೆ ಇದೆ. ದಾವಣಗೆರೆ ಹಾಗೂ ಇಲ್ಲಿ ಬೈ ಎಲೆಕ್ಷನ್ ನಡೆಯುತ್ತಿದೆ. ಸಂಘಟನೆ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದೇವೆ. ಇಡೀ ದೇಶದಲ್ಲಿ ಬಿಜೆಪಿಯಲ್ಲಿ ಇದ್ದ ಒಗ್ಗಟ್ಟು ಎಲ್ಲೂ ಇಲ್ಲ. ಸಣ್ಣಪುಟ್ಟ ಸಮಸ್ಯೆ ಇದ್ದರೂ ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.