ಶಿರಸಿ, ಸಿದ್ದಾಪುರ, ಯಲ್ಲಾಪುರ ಈ ಪ್ರದೇಶಗಳಲ್ಲಿ ಶೇ. ೮೦ರಷ್ಟು ಅತಿಕ್ರಮಣದಲ್ಲೇ ಮನೆಯಿದೆ. ಅವರಿಂದ ತೆರಿಗೆ ಪಡೆಯದಿದ್ದರೆ ಅವರ ಹಕ್ಕನ್ನು ಕಸಿದಂತಾಗುತ್ತದೆ.

ಯಲ್ಲಾಪುರ: ರಾಜ್ಯ ಸರ್ಕಾರ ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿರುವುದು, ಮನೆಯ ಹಕ್ಕನ್ನು ಕಸಿಯುತ್ತಿರುವುದು ಹೀಗೆ ವಿವಿಧ ರೀತಿಯ ತುಗಲಕ್ ದರ್ಬಾರ್ ಮಾಡುತ್ತಿದೆ. ಜಿಲ್ಲೆಯ ಘಟ್ಟದ ಮೇಲಿನ ಪ್ರದೇಶದಲ್ಲಿ ಶೇ. ೮೦ರಷ್ಟು ಅತಿಕ್ರಮಣದಲ್ಲೇ ಮನೆ ಕಟ್ಟಿಕೊಂಡು ಅನೇಕ ವರ್ಷಗಳಿಂದ ಬಂದಿದ್ದಾರೆ. ಅವರನ್ನು ಮನೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಇದು ಅತ್ಯಂತ ಆತಂಕದ ವಿಷಯ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಸಿ, ಸಿದ್ದಾಪುರ, ಯಲ್ಲಾಪುರ ಈ ಪ್ರದೇಶಗಳಲ್ಲಿ ಶೇ. ೮೦ರಷ್ಟು ಅತಿಕ್ರಮಣದಲ್ಲೇ ಮನೆಯಿದೆ. ಅವರಿಂದ ತೆರಿಗೆ ಪಡೆಯದಿದ್ದರೆ ಅವರ ಹಕ್ಕನ್ನು ಕಸಿದಂತಾಗುತ್ತದೆ. ಮುಂದೆ ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆಯೇ? ಇದು ಬಡವರ, ಹಿಂದುಳಿದವರ ಮೇಲೆ ಮಾಡಿದ ತುಗಲಕ್ ದರ್ಬಾರ್ ಅಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ರಾಘವೇಂದ್ರ ಭಟ್ಟ, ತಾಲೂಕು ಮಾಧ್ಯಮ ವಕ್ತಾರ ಕೆ.ಟಿ. ಹೆಗಡೆ ಮಾತನಾಡಿದರು. ಮಂಡಳಾದ್ಯಕ್ಷ ಪ್ರಸಾದ ಹೆಗಡೆ, ಜಿಲ್ಲಾ ಪ್ರಮುಖರದ ಉಮೇಶ ಭಾಗ್ವತ, ವೆಂಕಟ್ರಮಣ ಬೆಳ್ಳಿ ಮತ್ತು ವಿವಿಧ ಸಂಘಟನೆಗಲ ಪದಾಧಿಕಾರಿಗಳಾದ ರಾಜು ಗೌಡರ್, ವಿಶ್ವನಾಥ ಹಳೆಮನೆ, ಮಹೇಶ ದೇಸಾಯಿ, ಸುಬ್ಬಣ್ಣ ಉದ್ದಾಬೈಲ್, ಪುರಂದರ ನಾಯ್ಕ, ಕೆ.ಆರ್. ಕೃಷ್ಣಮೂರ್ತಿ, ಪವನ ಕೇಸರಕರ್ ಮತ್ತಿತರರು ಉಪಸ್ಥಿತರಿದ್ದರು. ಇಂದು, ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಯಲ್ಲಾಪುರ: ಉಮ್ಮಚಗಿಯಲ್ಲಿ ಶಕ್ತಿ ಪರಿವರ್ತಕದ ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ ಸೆ. ೯ರಂದು ಬೆಳಗ್ಗೆ ೧೦ರಿಂದ ಸಂಜೆ ೫ರ ವರೆಗೆ ಹಿತ್ಲಳ್ಳಿ, ಬಿಳ್ಕಿ, ಉಮ್ಮಚಗಿ ಹಾಗೂ ಮಾವಿನಕಟ್ಟಾ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಕಿರವತ್ತಿಯಲ್ಲಿ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ಹೊಸಳ್ಳಿ, ಮದನೂರು, ಸೋಮಾಪುರ, ಕಿರವತ್ತಿ, ಶ್ರೀಕೃಷ್ಣ ಡೈರಿ ಮಾರ್ಗಗಳು ಹಾಗೂ ಯಲ್ಲಾಪುರ ಪಟ್ಟಣ, ಇಡಗುಂದಿ, ವಜ್ರಳ್ಳಿ, ಬಿಸಗೋಡು, ಆನಗೋಡ, ದೇಹಳ್ಳಿ, ಮಾಗೋಡ, ಉಪಳೇಶ್ವರ (ಚಂದಗುಳಿ) ಹಾಗೂ ಕಣ್ಣೀಗೇರಿ ಮಾರ್ಗಗಳಲ್ಲಿ ಸೆ. ೧೦ರಂದು ಬೆಳಗ್ಗೆ ೯ರಿಂದ ಸಂಜೆ ೬ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆ ತಿಳಿಸಿದೆ.