ದ್ವೇಷ ಭಾಷಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಜನತೆ ವಾಕ್‌ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದು, ಈ ವಿಧೇಯಕ ಸಂವಿಧಾನ ವಿರೋಧಿ ಎಂದು ಈ ವಿಧೇಯಕ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಹಾನಗಲ್ಲ: ದ್ವೇಷ ಭಾಷಣದ ಹೆಸರಿನಲ್ಲಿ ರಾಜ್ಯ ಸರ್ಕಾರ ಜನತೆ ವಾಕ್‌ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿದ್ದು, ಈ ವಿಧೇಯಕ ಸಂವಿಧಾನ ವಿರೋಧಿ ಎಂದು ಈ ವಿಧೇಯಕ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಬುಧವಾರ ಇಲ್ಲಿನ ತಹಸೀಲ್ದಾರ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು ತಾಲೂಕು ತಹಸೀಲ್ದಾರರಿಗೆ ಸಲ್ಲಿಸಿದಿ ಮನವಿಯಲ್ಲಿ, ಈ ದ್ವೇಷ ಭಾಷಣದ ವಿಧೇಯಕ ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಹುನ್ನಾರ, ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ವಿರೋಧಿಯಾಗಿದೆ. ಈ ವಿಧೇಯಕದ ಮೂಲಕ ರಾಜ್ಯ ಸರ್ಕಾರ ವಿರೋಧ ಪಕ್ಷಗಳು ಹಾಗೂ ಮಾಧ್ಯಮದವರ ಮೇಲೆ ನಿಯಂತ್ರಣ ಸಾಧಿಸುವ ಹುನ್ನಾರ ಹೊಂದಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಪದ್ಮನಾಭ ಕುಂದಾಪೂರ, ಕಲ್ಯಾಣಕುಮಾರ ಶೆಟ್ಟರ, ಚಂದ್ರಣ್ಣ ಕರಗುದರಿ, ಸಂತೋಷ ಭಜಂತ್ರಿ, ಸಚಿನ್ ರಾಮಣ್ಣನವರ, ಪಂಚಾಕ್ಷರಿಗೌಡ ಪಾಟೀಲ, ಸುರೇಶ ಮಡಿವಾಳರ, ವಿಜಯೇಂದ್ರ ಯತ್ತಿನಹಳ್ಳಿ, ಗಂಗನಗೌಡ ಪಾಟೀಲ, ಶೇಖಪ್ಪ ಕರಡಿ, ಅಣ್ಣಪ್ಪ ಚಾಕಾಪುರ, ಪ್ರಕಾಶ ನಂದೀಕೊಪ್ಪ, ರವಿ ಪುರದ, ರವಿಕಿರಣ ಪಾಟೀಲ, ಮಹೇಶ ಹರಿಜನ, ಮಾಲತೇಶ ಕಾಳಂಗಿ, ರಾಘವೇಂದ್ರ ತಹಶೀಲ್ದಾರ, ರುದ್ರಪ್ಪ ಅಗಸಿಬಾಗಿಲ, ಪ್ರಕಾಶ ಗುರುಸಿದ್ಧಪ್ಪನವರ ಮೊದಲಾದವರು ಇದ್ದರು.