ವಿದ್ಯುತ್‌ ಕ್ಷೇತ್ರದಲ್ಲಿ ರಾಜ್ಯ ಸ್ವಾವಲಂಬಿ

| Published : Sep 11 2024, 01:06 AM IST

ವಿದ್ಯುತ್‌ ಕ್ಷೇತ್ರದಲ್ಲಿ ರಾಜ್ಯ ಸ್ವಾವಲಂಬಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ರಾಜ್ಯ ಇಂದು ವಿದ್ಯುತ್‌ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದ್ದು, ಇತರೆ ರಾಜ್ಯಗಳಿಗೆ ವಿದ್ಯುತ್ ಕೊಡುವಷ್ಟರ ಮಟ್ಟಿಗೆ ಸಶಕ್ತವಾಗಿದೆ ಎಂದು ಶಾಸಕ ಹಾಗೂ ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದಿಂದ ತಾಲೂಕಿನ ನಾದ ಗ್ರಾಮದಲ್ಲಿ ನಿರ್ಮಿಸಿದ 110 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಇಂಧನ ಇಲಾಖೆಯು ಗ್ರಾಮೀಣ, ನಗರಗಳಿಗೆ ವಿದ್ಯುತ್‌ ಪೊರೈಸುವುದರ ಮೂಲಕ ಯಶಸ್ಸು ಕಂಡಿದೆ.

ಕನ್ನಡಪ್ರಭ ವಾರ್ತೆ ಇಂಡಿ

ರಾಜ್ಯ ಇಂದು ವಿದ್ಯುತ್‌ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದ್ದು, ಇತರೆ ರಾಜ್ಯಗಳಿಗೆ ವಿದ್ಯುತ್ ಕೊಡುವಷ್ಟರ ಮಟ್ಟಿಗೆ ಸಶಕ್ತವಾಗಿದೆ ಎಂದು ಶಾಸಕ ಹಾಗೂ ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದಿಂದ ತಾಲೂಕಿನ ನಾದ ಗ್ರಾಮದಲ್ಲಿ ನಿರ್ಮಿಸಿದ 110 ಕೆವಿ ವಿದ್ಯುತ್‌ ವಿತರಣಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಇಂಧನ ಇಲಾಖೆಯು ಗ್ರಾಮೀಣ, ನಗರಗಳಿಗೆ ವಿದ್ಯುತ್‌ ಪೊರೈಸುವುದರ ಮೂಲಕ ಯಶಸ್ಸು ಕಂಡಿದೆ. ಹಿಂದಿನ ಕೇಂದ್ರ ಸಚಿವ ಸುಶೀಲಕುಮಾರ ಶಿಂಧೆ ಕಾಲದಲ್ಲಿ ವಿದ್ಯುತ್‌ ಸಮಸ್ಯೆ ನಿವಾರಿಸಲು ಸಹಕಾರ ನೀಡಿದ್ದಾರೆ. ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳ ಮೂಲಕ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ರೈತರ ಪಂಪ್‌ಸೆಟ್‌ಗಳಿಗೆ ರಾಜ್ಯ ಸರ್ಕಾರ ಪ್ರತಿನಿತ್ಯ ಹಗಲಿನಲ್ಲಿ 7 ಗಂಟೆ ವಿದ್ಯುತ್‌ ನೀಡುವ ಗುರಿ ಹೊಂದಲಾಗಿದೆ. ನಾನು ಶಾಸಕನಾಗುವುದಕ್ಕಿಂತ ಮುಂಚೆ ಇಂಡಿಯಲ್ಲಿ ಅಪರಾಧ ವ್ಯವಸ್ಥೆ ತುಂಬಿತ್ತು. ನಾನು ಶಾಸಕನಾದ ಮೇಲೆ ನ್ಯಾಯ, ನೀತಿ, ಧರ್ಮವನ್ನು ಕಾಪಾಡಿದ್ದೇನೆ. ಅಪರಾಧಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಶ್ರಮಿಸಿದ್ದೇನೆ. ತಾಲೂಕಿನ ಬೈರುಣಗಿ, ನಿಂಬಾಳ, ಹಡಲಸಂಗ, ಶಿರುಗೂರ ಇನಾಮ, ಅಗಸನಾಳ ಗ್ರಾಮಗಳಲ್ಲಿ ವಿದ್ಯುತ ವಿತರಣಾ ಕೇಂದ್ರ ಸ್ಥಾಪಿಸಲಾಗುವುದು ಎಂ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಸಂಸದರ ಬಗ್ಗೆ ಟೀಕೆ:

ಸಂಸದರು ಮುರುಮದಿಂದ ವಿಜಯಪೂರವರೆಗ ₹984 ಕೋಟಿ ವೆಚ್ಚದ ಕಾಮಗಾರಿ ಭೂಮಿಪೂಜೆ ಮಾಡಿದ್ದಾರೆ. ಇದಕ್ಕೆ ಫೆ.24ರಂದೇ ಬೆಳಗಾವಿಯಲ್ಲಿ ಕೇಂದ್ರ ಸಚಿವ ನೀತಿನ ಗಡ್ಕರಿ ಭೂಮಿಪೂಜೆ ಮಾಡಿದ್ದರು. ಈಗ ಮತ್ತೆ ರಮೇಶ ಜಿಗಜಿಣಗಿ ಭೂಮಿಪೂಜೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಅನುದಾನದ ಬಗ್ಗೆ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.

ಕೆಪಿಟಿಸಿಎಲ್‌ ಮುಖ್ಯ ಅಭಿಯಂತರ ಗುರುನಾಥ ಗೋಟ್ಯಾಳ ಪ್ರಸ್ತಾವಿಕ ಮಾತನಾಡಿದರು. ಮದ್ದಾನಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಕೆಪಿಟಿಸಿಎಲ್‌ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್‌ ಬಿ.ಎಸ್‌.ಕಡಕಬಾವಿ, ಗ್ರಾಪಂ ಅಧ್ಯಕ್ಷ ಸಿದ್ದರಾಯ ಐರೋಡಗಿ, ದಾನಮ್ಮ ಕುಂಬಾರ, ಅಭಿಯಂತರರಾದ ರಮೇಶ ಪವಾರ, ಜಗದೀಶ ಜಾಧವ, ಕಾಶೀನಾಥ ಹಿರೇಮಠ, ಸುನಂದಾ ಜಂಬಗಿ, ಹೆಸ್ಕಾಂ ಎಇಇ ಎಸ್.ಆರ್ ಮೆಡೇದಾರ, ರಾಜೇಶ ಪಾಟೀಲ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೊಡ, ಉಪಾಧ್ಯಕ್ಷ ಜಹಾಂಗೀರ, ತಾಪಂ ಇಒ ಬಾಬು ರಾಠೋಡ ಗುತ್ತಿಗೆದಾರ ಮಹಾದೇವ ಗಚ್ಚಿನಮಠ, ನಿವೇಶನ ದಾನಿ ದಯಾನಂದ ಅವಟಿ, ಶೇಖರ ನಾಯಕ, ಸೋಮಶೇಖರ ಮ್ಯಾಕೇರಿ, ಮಂಜುನಾಥ ಕಾಮಗೊಂಡ, ಸುಧೀರ ಕರಕಟ್ಟಿ, ಜಾವೀದ ಮೋಮಿನ್, ಸುಭಾಷ ಬಾಬರ್, ಇಲಿಯಾಸ ಬೋರಾಮಣಿ, ಬಸವರಾಜ ಗೋರನಾಳ, ಶಾಸಕರ ಅಪ್ತ ಕಾರ್ಯದರ್ಶಿ ತಮ್ಮಣ್ಣ ಖಟ್ಟೆ, ಸಂತೋಷ ವಾಲೀಕಾರ ಇದ್ದರು.-------

ಕೋಟ್‌........

ಗೆರೆ ಹೊಡೆದು ರಾಜರಾರಣ ಮಾಡುವವರು ನಾವು. ಪುರಸಭೆಯಲ್ಲಿ ಬಿಜೆಪಿ 11, ಸಂಸದರು 1, ಜೆಡಿಎಸ್ 2 ಸೇರಿ 14 ಸಂಖ್ಯಾಬಲವಿದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ. ಕಾಂಗ್ರೆಸ್ ಕೇವಲ 8 ಸದಸ್ಯರಿದ್ದರೂ ಅಧಿಕಾರ ಹಿಡಿದಿದ್ದೇವೆ. ಚುನಾವಣೆ ಹೇಗೆ ಗೆಲ್ಲಬೇಕು ಎಂದು ನೀವು ಇನ್ನೂ ಕಲಿಯಬೇಕು. ಚಕ್ರವ್ಯೂಹ ಹೇಗೆ ಬೇಧಿಸಬೇಕು ಎಂದು ನನಗೆ ಗೊತ್ತು.

- ಯಶವಂತರಾಯಗೌಡ ಪಾಟೀಲ, ಶಾಸಕರು ಇಂಡಿ.