ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ದ.ಕ.ಜಿಲ್ಲೆ ಸಮಗ್ರ ಟೀಂ ಚಾಂಪಿಯನ್

| Published : Dec 05 2023, 01:30 AM IST

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ದ.ಕ.ಜಿಲ್ಲೆ ಸಮಗ್ರ ಟೀಂ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ೧೭ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆ ೬೧ ಅಂಕಗಳೊಂದಿಗೆ ಸಮಗ್ರ ಟೀಂ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಸ್ಪೋರ್ಟ್ಸ್‌ ಸ್ಕೂಲ್ ಮತ್ತು ಬಾಲಕಿಯರ ವಿಭಾಗದಲ್ಲಿ ದ.ಕ. ಜಿಲ್ಲೆ ತಂಡ ಚಾಂಪಿಯನ್ ಶಿಪ್‌ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಪುತ್ತೂರುಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ೧೭ವರ್ಷದೊಳಗಿನ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆ ೬೧ ಅಂಕಗಳೊಂದಿಗೆ ಸಮಗ್ರ ಟೀಂ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಸ್ಪೋರ್ಟ್ಸ್‌ ಸ್ಕೂಲ್ ಮತ್ತು ಬಾಲಕಿಯರ ವಿಭಾಗದಲ್ಲಿ ದ.ಕ. ಜಿಲ್ಲೆ ತಂಡ ಚಾಂಪಿಯನ್ ಶಿಪ್‌ ಪಡೆದುಕೊಂಡಿದೆ.

೧೦೦ ಮೀಟರ್‌ ಓಟದಲ್ಲಿ ಬಾಲಕಿಯರ ವಿಭಾಗದಲ್ಲಿ ದ.ಕ. ಜಿಲ್ಲೆಯ ಗೋಪಿಕಾ ಜಿ. ಅವರು ೧೨ನಿಮಿಷ ೮೭ ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ಚಿನ್ನದ ಪದಕ ಪಡೆಯುವುದರೊಂದಿಗೆ ಕೂಟದ ವೇಗದ ಓಟಗಾರ್ತಿಯಾದರು. ಜತೆಗೆ ೧೦೦ಮೀಟರ್ಸ್ ಓಟದಲ್ಲಿ ೮೬೫ ಅಂಕಗಳನ್ನು ಗಳಿಸಿ ಬಾಲಕಿಯರ ವಿಭಾಗದಲ್ಲಿ ಕೂಟದ ಬೆಸ್ಟ್ ಅಥ್ಲೀಟ್‌ ಆಗಿ ಮೂಡಿಬಂದರು. ಬೆಂಗಳೂರಿನ ವಿದ್ಯಾನಗರ ಸ್ಪೋರ್ಟ್ಸ್‌ ಸ್ಕೂಲ್‌ನ ಎ.ಅಬೂಬಕ್ಕರ್ ೧೦೦ ಮೀಟರ್ಸ್ ಓಟದಲ್ಲಿ ೧೧ನಿಮಿಷ ೦೧ ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ವೇಗದ ಓಟಗಾರರಾದರು.

ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಸ್ಪೋರ್ಟ್ಸ್‌ ಸ್ಕೂಲ್ ೨೧ ಅಂಕಗಳೊಂದಿಗೆ ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ೧೭ ಅಂಕಗಳನ್ನು ಪಡೆದ ದ.ಕ.ಜಿಲ್ಲೆ ದ್ವಿತೀಯ ತಂಡ ಚಾಂಪಿಯನ್ ಗರಿಮೆಗೆ ಪಾತ್ರವಾಗಿದೆ. ಬಾಲಕಿಯರ ವಿಭಾಗದಲ್ಲಿ ೪೪ ಅಂಕಗಳನ್ನು ಪಡೆದ ದ.ಕ. ಜಿಲ್ಲೆ ತಂಡ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದು, ೨೧ ಅಂಕಗಳನ್ನು ಪಡೆದ ಶಿರಸಿ ಜಿಲ್ಲೆ ದ್ವಿತೀಯ ತಂಡ ಚಾಂಪಿಯನ್ ಮನ್ನಣೆಗೆ ಪಾತ್ರವಾಗಿದೆ.

ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಸ್ಪೋರ್ಟ್ಸ್‌ ಸ್ಕೂಲ್‌ನ ಸಯ್ಯದ್ ಸಬೀರ್ ೪೦೦ ಮೀಟರ್ಸ್ ಓಟದಲ್ಲಿ ೮೮೫ ಅಂಕಗನ್ನು ಪಡೆದು ಬೆಸ್ಟ್ ಅಥ್ಲೀಟ್‌ ಆಗಿ ಮೂಡಿಬಂದಿದ್ದಾರೆ. ಹಾಸನದ ಸುಮಂತ್ ಬಿ.ಎಸ್. ಅವರು ೧೦ ಅಂಕಗಳೊಂದಿಗೆ ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಹಾಗೂ ಬಾಲಕಿಯರ ವಿಭಾಗದಲ್ಲಿ ೧೫ ಅಂಕಗಳನ್ನು ಪಡೆದ ಬೆಂಗಳೂರು ಉತ್ತರದ ಹರ್ಷಿತಾ ಪಿ. ವೈಯಕ್ತಿಕ ಚಾಂಪಿಯನ್ ಪಡೆದಿದ್ದಾರೆ.

* ದ.ಕ.ಜಿಲ್ಲೆಯ ಕರಿಷ್ಮಾ ನೂತನ ದಾಖಲೆ:

ಬಾಲಕಿಯರ ವಿಭಾಗದ ೧೫೦೦ ಮೀಟರ್ಸ್ ಓಟದಲ್ಲಿ ದ.ಕ. ಜಿಲ್ಲಾ ತಂಡವನ್ನು ಪ್ರತಿನಿಧಿಸಿರುವ ಕಡಬದ ಸರ್ಕಾರಿ ಪ್ರೌಢ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿನಿ ಚರಿಷ್ಮಾ ಅವರು ದಾಖಲೆ ಬರೆದಿದ್ದಾರೆ. ೪ನಿಮಿಷ ೫೫.೧ ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ ಅವರು ಈ ಹಿಂದೆ ೨೦೧೭-೧೮ನೇ ಸಾಲಿನಲ್ಲಿ ಬೆಂಗಳೂರು ಉತ್ತರದ ಹರ್ಪಿತಾ ಎಚ್.ವಿ. ( ೪ನಿ. ೫೮.೧೯ ಸೆ.) ಮಾಡಿದ್ದ ದಾಖಲೆ ಮುರಿದರು. ಇದಲ್ಲದೆ ೩೦೦೦ ಮೀಟರ್ಸ್ ಓಟದಲ್ಲಿ ಚಿನ್ನ ಮತ್ತು ೮೦೦ ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಅದ್ವಿತೀಯ ಸಾಧನೆ ತೋರಿದರು.

* ಇಂದಿನ ಫಲಿತಾಂಶ

ಬಾಲಕರ ವಿಭಾಗದ ೧೦೦ ಮೀ. ಓಟದಲ್ಲಿ ಎ. ಅಬೂಬಕ್ಕರ್(ವಿದ್ಯಾನಗರ), ೧೧ನಿ. ೦೧ ಸೆ-ಪ್ರಥಮ, ಮೋನಿಷ್ ಚಂದ್ರಶೇಖರ್(ಬೆಂಗಳೂರು ದಕ್ಷಿಣ) ೧೧.೦೭ಸೆ-ದ್ವಿತೀಯ, ತರುಣ್ ವಿ. (ಬೆಂಗಳೂರು ದಕ್ಷಿಣ)೧೧.೩೭ಸೆ.-ತೃತೀಯ, ೪೦೦ ಮೀ. ಓಟದಲ್ಲಿ ಸೆಯ್ಯಿದ್ ಶಬ್ಬೀರ್(ವಿದ್ಯಾನಗರ) ೪೯.೭೯ಸೆ- ಪ್ರಥಮ, ನಿತಿನ್ ಗೌಡ ಎಂ(ಬೆಂಗಳೂರು ಗ್ರಾಮಾಂತರ) ೫೧.೦೭ಸೆ-ದ್ವಿತೀಯ, ಆಯುಷ್ ಪ್ರಾಂಜಲ್ (ದಕ್ಷಿಣ ಕನ್ನಡ) ೫೧.೬೦ಸೆ-ತೃತೀಯ, ೧೫೦೦ ಮೀ. ಓಟದಲ್ಲಿ ದಕ್ಷ್ ಪಾಟೀಲ್ (ಬೆಳಗಾವಿ) ೪ನಿ. ೨೧ಸೆ-ಪ್ರಥಮ, ಪ್ರಕಾಶ್ ಬಡಗಿ (ಧಾರವಾಡ) ೪ನಿ.೨೨ಸೆ.-ದ್ವಿತೀಯ, ಧನುಷ್ ಮೋಹನ್ ನಾಯ್ಕ್(ಉತ್ತರ ಕನ್ನಡ) ೪ನಿ. ೨೩.೭ಸೆ-ತೃತೀಯ, ೫೦೦೦ ಮಿ. ನಡಿಗೆಯಲ್ಲಿ ವಿಕಾಸ್ ಗೌಡ (ದ.ಕ.) ೨೪ನಿ.೫೭.೫ಸೆ-ಪ್ರಥಮ, ಬಸವರಾಜ ಮಂಜಪ್ಪ ಹೂಗಾರ್(ತುಮಕೂರು) ೨೫ನಿ.೦೦.೮ಸೆ-ದ್ವಿತೀಯ, ಮಡಿವಾಳ ಸಿದ್ದೇಶ(ಮಂಡ್ಯ) ೨೫ನಿ. ೪೭.೯ ಸೆ,-ತೃತೀಯ, ಟ್ರಿಪ್ಪಲ್ ಜಂಪ್‌ನಲ್ಲಿ ಸುಮಂತ ಕೆ.ಎಸ್(ಹಾಸನ) ೧೩.೨೦ ಮೀ-ಪ್ರಥಮ, ಧರ್ಮೇಂದ್ರ ಸುಬ್ರಾಯ ಗೌಡ(ಉತ್ತರ ಕನ್ನಡ)೧೨.೭೫ ಮೀ-ದ್ವಿತೀಯ, ಮನೀಶ್ (ಉಡುಪಿ) ೧೨.೭೧ ಮೀ-ತೃತೀಯ.

ಪೋಲ್ ವೋಲ್ಟ್‌ನಲ್ಲಿ ಪ್ರಜ್ವಲ್(ದ.ಕ) ೨.೯೦ ಮೀ-ಪ್ರಥಮ, ನರಸಿಂಹ(ಬಳ್ಳಾರಿ)೨.೮೫ಮೀ-ದ್ವಿತೀಯ, ಐಯಾನ್ ರಝಾ(ಶಿವಮೊಗ್ಗ) ೨.೮೦ ಮೀ.-ತೃತೀಯ, ಡಿಸ್ಕಸ್ ತ್ರೋ ಅವಿನಾಶ್ ತಳಕೇರಿ(ವಿಜಯಪುರ) ೪೧.೪೭ ಮೀ.-ಪ್ರಥಮ, ಲೋಹಿತ್ ಕುಮಾರ್ ಎಚ್(ಬೆಂಗಳೂರು ದಕ್ಷಿಣ)೩೯.೧೩ಮೀ-ದ್ವಿತೀಯ, ಖಾದರ್ ವೇಲು ಎಸ್(ಚಾಮರಾಜನಗರ) ೩೭.೫೭ ಮೀ-ತೃತೀಯ, ಹ್ಯಾಮರ್ ತ್ರೋದಲ್ಲಿ ಆದಿತ್ಯ(ಉಡುಪಿ)೫೧.೮೦ ಮೀ-ಪ್ರಥಮ, ಸಲೀಂ(ಚಿಕ್ಕಮಗಳೂರು)೫೦.೪೬ ಮೀ-೨ ದ್ವಿತೀಯ, ಇಶಾನ್ ಕಾರ್ಯಪ್ಪ ಸೆರಾಜೆ(ದ.ಕ)೪೯.೫೧ ಮೀ-ತೃತೀಯ, ೪*೧೦೦ ಮೀ. ರಿಲೇಯಲ್ಲಿ ಪ್ರಥ್ವಿರಾಜ್, ಆರ್.ಜೆ, ಶಹೀಲ್, ರೆನಿಶ್ ಎಂ ಕುಲಾಲ್, ಆಯುಷ್ ಪ್ರಜ್ವಲ್(ದ.ಕ) ೪೫.೨೮ಸೆ-ಪ್ರಥಮ, ಸಯ್ಯಿದ್ ಶಬ್ಬೀರ್, ಎ.ಅಬೂಬಕ್ಕರ್, ಬಸವರಾಜ್ ಡಿ ಗುಲೆದ್, ಸೇರಿದಾರ್ ದೇಸಾಯಿ(ವಿದ್ಯಾನಗರ) ೪೫.೪೫ಸೆ-ದ್ವಿತೀಯ ಮತ್ತು ತರುಣ್ ವಿ., ಮೋನಿಸ್ ಚಂದ್ರಶೇಖರ್, ದಿನೇಶ್ ರಾಜನ್, ಇಸಾಕ್ ಆರ್(ಬೆಂಗಳೂರು ದಕ್ಷಿಣ)೪೬.೩೪ಸೆ.-ತೃತೀಯ ಸ್ಥಾನ ಪಡೆದುಕೊಂಡರು.

* ಬಾಲಕಿಯರ ವಿಭಾಗ

ಬಾಲಕಿಯರ ವಿಭಾಗದ ೪೦೦ ಮೀ. ಓಟದಲ್ಲಿ ರಶ್ಮಿತಾ ಗೌಡ(ರಾಮನಗರ) ೧ನಿ.೦೦.೮೯೯ಸೆ-ಪ್ರಥಮ, ಸುಪ್ರಿಯಾ ಗೌಡ (ಉತ್ತರ ಕನ್ನಡ) ೧ನಿ. ೦೨.೩೪೪ಸೆ-ದ್ವಿತೀಯ, ನಿಖಿತಾ ಜಿ(ಶಿವಮೊಗ್ಗ) ೧ನಿ. ೦೩.೨೧೧ಸೆ-ತೃತೀಯ, ೧೫೦೦ ಮೀ, ಓಟದಲ್ಲಿ ಚರಿಷ್ಮಾ(ದ.ಕ) ೪ನಿ.೫೫.೧ಸೆ-ಪ್ರಥಮ(ಹೊಸ ದಾಖಲೆ), ವೀಕ್ಷಿತ ಬಿ.ಎಸ್. (ಚಿಕ್ಕಮಗಳೂರು)೫ನಿ. ೦೩.೯ಸೆ-ದ್ವಿತೀಯ, ಶಿವಕ್ಕ ಹೆಗಡೆ(ಚಿಕ್ಕೋಡಿ) ೫ನಿ. ೦೪.೨ಸೆ-ತೃತೀಯ, ೩೦೦೦ ಮೀ ನಡಿಗೆಯಲ್ಲಿ ಚೈತನ್ಯ(ದ.ಕ)೧೬ನಿ. ೪೦ಸೆ-ಪ್ರಥಮ, ಶೋಭಾ ಪುಂಜಿ(ಬೆಳಗಾವಿ)೧೬ನಿ.೪೮.೭ಸೆ-ದ್ವಿತೀಯ, ಶೃತಿ ಮುಡೂರು(ಹಾವೇರಿ)೧೭ನಿ.೦೧.೨ಸೆ-ತೃತೀಯ, ತ್ರಿಪಲ್ ಜಂಪ್‌ನಲ್ಲಿ ಅರ್ಶಿತಾ ಪಿ(ಬೆಂಗಳೂರು ಉತ್ತರ)೧೦.೫೮ಮೀ-ಪ್ರಥಮ, ಶ್ರೀದೇವಿ ನಾಯ್ಕ್(ಶಿರಸಿ)೧೦.೧೪ ಮೀ-ದ್ವಿತೀಯ, ಅಮೂಲ್ಯ(ಶಿವಮೊಗ್ಗ)೧೦.೦೭ಮೀ-ತೃತೀಯ, ಪೋಲ್ ವಾಲ್ವ್ನಲ್ಲಿ ಧನ್ಯ(ದ.ಕ)೨.೬೦ಮೀ-ಪ್ರಥಮ, ಪ್ರಜ್ಞಾಶ್ರೀ(ದ.ಕ) ೨.೧೦ಮೀ-ದ್ವಿತೀಯ, ದಿವ್ಯಾ ಸಿ ನಾಯ್ಕ್(ಉತ್ತರ ಕನ್ನಡ)೨.೧೦ಮೀ-ತೃತೀಯ, ಗುಂಡು ಎಸೆತದಲ್ಲಿ ತನುಶ್ರೀ ರೈ(ದ.ಕ-ಪಟ್ಟೆ ಪ್ರತಿಭಾ ಪ್ರೌಢಶಾಲೆ)೧೧.೧೬ಮೀ-ಪ್ರಥಮ, ಹರ್ಷಿತಾ ಎ. ಸರ್ಗಾಪುರ್(ಬೆಂಗಳೂರು ದಕ್ಷಿಣ) ೧೦.೬೩ಮೀ-ದ್ವಿತೀಯ, ಕೀರ್ತನಾ ಜಿ.ಎಸ್(ಮಂಡ್ಯ) ೯.೯೫ಮೀ-ತೃತೀಯ, ಜಾವೆಲಿನ್ ತ್ರೋದಲ್ಲಿ ಭವ್ಯ(ಹಾಸನ)೩೩.೯೧ಮೀ-ಪ್ರಥಮ, ಶ್ರೀದೇವಿ ನಾಯಕ್(ಶಿರಸಿ)೩೨.೯೧ಮೀ-ದ್ವಿತೀಯ, ಸಿಂಪನಾ(ಹಾಸನ)೨೯.೫೦,ಮೀ-ತೃತೀಯ, ೪*೪೦೦ ಮೀ. ರಿಲೇಯಲ್ಲಿ ಸುಸ್ಮಿತಾ ಸಿದ್ದಿ, ಮೀನಾಕ್ಷಿ ನಾಯ್ಕ್, ಅಕ್ಕಮ್ಮ ಕೋಕರೆ, ಅಮಿನಾ ಮುಳ್ಳ(ಶಿರಸಿ)೫೪.೦೦೯ಸೆ-ಪ್ರಥಮ, ಗೋಪಿಕಾ ಜಿ, ನಯೋನಿಕಾ, ಬೆಲ್ಸಿಟಾ ಜಸ್ಮಿನ್, ಚಿನ್ಮಯ್(ದ.ಕ)೫೪.೧೭೯ಸೆ-ದ್ವಿತೀಯ, ಅವನಿ, ಅನ್ವಿ ಎ ಶೆಟ್ಟಿ, ಧನ್ಯ, ಅಹೈನಾ ಶೇಖ್(ಉಡುಪಿ)೫೪.೩೭೦ಸೆ-ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.