ರಾಜ್ಯಮಟ್ಟದ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ ಆರಂಭ

| Published : Feb 09 2024, 01:46 AM IST

ರಾಜ್ಯಮಟ್ಟದ ಬಾಸ್ಕೆಟ್‌ ಬಾಲ್‌ ಪಂದ್ಯಾವಳಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಕೆಟ್-ಕಬಡ್ಡಿಗೆ ಸಿಗುವ ಪ್ರೋತ್ಸಾಹ, ಉಳಿದ ಕ್ರೀಡೆಗೆ ಸಿಗುತ್ತಿಲ್ಲ. ಉಳಿದ ಕ್ರೀಡೆಗಳಿಗೂ ಕೂಡ ಉತ್ತೇಜನ ನೀಡಬೇಕು. ಅಲ್ಲದೇ, ಬಾಸ್ಕೆಟ್ ಬಾಲ್ ಕ್ರೀಡೆ ಹೆಚ್ಚೆಚ್ಚು ಆಯೋಜಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಅನುದಾನ ಮೀಸಲಿಡಬೇಕು

ಧಾರವಾಡ: ರೋವರ್ಸ ಕ್ಲಬ್ ನಾಗರದ ಬಾಸ್ಕೆಟ್ ಬಾಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಗುರುವಾರ ಚಾಲನೆ ದೊರೆಯಿತು.

ಪಂದ್ಯಾವಳಿಗೆ ಚಾಲನೆ ನೀಡಿದ ಮಹಾನಗರ ಪಾಲಿಕೆ ಮೇಯರ್ ವೀಣಾ ಭರದ್ವಾಡ, ಯಾವುದೇ ಪಂದ್ಯದಲ್ಲಿ ಗೆಲ್ಲುವ ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂಬುದು ಅರಿತು ಪಾಲ್ಗೊಳ್ಳಬೇಕು ಎಂದರು.

ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾರಕ ಶೆಟ್ಟಿ ಮಾತನಾಡಿ, ಕ್ರಿಕೆಟ್-ಕಬಡ್ಡಿಗೆ ಸಿಗುವ ಪ್ರೋತ್ಸಾಹ, ಉಳಿದ ಕ್ರೀಡೆಗೆ ಸಿಗುತ್ತಿಲ್ಲ. ಉಳಿದ ಕ್ರೀಡೆಗಳಿಗೂ ಕೂಡ ಉತ್ತೇಜನ ನೀಡಬೇಕು. ಅಲ್ಲದೇ, ಬಾಸ್ಕೆಟ್ ಬಾಲ್ ಕ್ರೀಡೆ ಹೆಚ್ಚೆಚ್ಚು ಆಯೋಜಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಮಾತನಾಡಿದರು. ಇದಕ್ಕೂ ಮೊದಲ ನಗರದ ಕಡಪಾ ಮೈದಾನದಿಂದ ಬಾಸ್ಕೆಟ್ ಬಾಲ್ ಮೈದಾನದವರೆಗೆ ಬಾಸ್ಕೆಟ್ ಬಾಲ್ ಕ್ರೀಡಾಪಟುಗಳ ಮ್ಯಾರಾಥಾನ್ ಗೆ ಜಗ್ಗಲಿಗೆ ಮೇಳ, ಕರಾವಳಿಯ ಚೆಂಡೆ ಮೇಳ ಮೆರಗು ತಂದಿತು. ರೋವರ್ಸ್ ಬಾಸ್ಕೆಟ್ ಬಾಲ್ ಸಂಘದ ಅಧ್ಯಕ್ಷ ರಾಮ ದಾಸಣ್ಣವರ, ಉಪಾಧ್ಯಕ್ಷ ವಿಜಯ ಬಳ್ಳಾರಿ, ಶಿವಯೋಗಿ ಅಮಿನಗಡ, ಶ್ರೀಕಾಂತ ಕಂಚಿಬೈಲ್, ರಾಮ ನಾಯಕ, ನವೀನ ಶಿರಹಟ್ಟಿ, ಶಿವಯೋಗಿ ಬಳ್ಳಾರಿ, ಮಹಾಂತೇಶ ಬೆಲ್ಲದ, ವೈಷ್ಣವಿ ಇದ್ದರು. ಮೊದಲ ದಿನ ಅರ್ಹತಾ ಸುತ್ತಿನ ಪಂದ್ಯಗಳು ಜರುಗಿದವು..