ಮಾ.2, 3ರಂದು ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ -3

| Published : Feb 24 2024, 02:33 AM IST

ಮಾ.2, 3ರಂದು ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ -3
Share this Article
  • FB
  • TW
  • Linkdin
  • Email

ಸಾರಾಂಶ

ಪಂದ್ಯಾಕೂಟದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಅರಸೀಕೆರೆ, ದ.ಕ. ಜಿಲ್ಲೆ, ಉಡುಪಿ ಜಿಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ. ವಿಜೇತ ತಂಡಕ್ಕೆ ಟ್ರೋಫಿಯೊಂದಿಗೆ 1,00,000 ನಗದು, ದ್ವಿತೀಯ ಸ್ಥಾನಿ ತಂಡಕ್ಕೆ ಟ್ರೋಫಿಯೊಂದಿಗೆ 50,005 ನಗದು ಹಾಗೂ ಸೆಮಿಫೈನಲ್ ಪರಾಜಿತ ತಂಡಕ್ಕೆ ಟ್ರೋಫಿಯೊಂದಿಗೆ ಗೌರವಧನ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸುರತ್ಕಲ್‌ ಸ್ಪೋರ್ಟ್ಸ್‌ ಕಲ್ಚರಲ್ ಕ್ಲಬ್‌ನ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ತಂಡಗಳ ಓವರ್ ಆರ್ಮ್‌ ಹಿರಿಯರ ಕ್ರಿಕೆಟ್ ಪಂದ್ಯಾಟ ಸೀಸನ್ 3ರ ಪಂದ್ಯಾಕೂಟ ಮಾರ್ಚ್‌ 2, 3ರಂದು ಸುರತ್ಕಲ್‌ ಗೋವಿಂದ ದಾಸ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಪಂದ್ಯಾಕೂಟದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಅರಸೀಕೆರೆ, ದ.ಕ. ಜಿಲ್ಲೆ, ಉಡುಪಿ ಜಿಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ. ವಿಜೇತ ತಂಡಕ್ಕೆ ಟ್ರೋಫಿಯೊಂದಿಗೆ 1,00,000 ನಗದು, ದ್ವಿತೀಯ ಸ್ಥಾನಿ ತಂಡಕ್ಕೆ ಟ್ರೋಫಿಯೊಂದಿಗೆ 50,005 ನಗದು ಹಾಗೂ ಸೆಮಿಫೈನಲ್ ಪರಾಜಿತ ತಂಡಕ್ಕೆ ಟ್ರೋಫಿಯೊಂದಿಗೆ ಗೌರವಧನ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಸುರತ್ಕಲ್ ಸ್ಪೋರ್ಟ್ಸ್‌ ಕಲ್ಚರಲ್ ಕ್ಲಬ್ ತೃತೀಯ ವಾರ್ಷಿಕೋತ್ಸವ ಮಾ.4 ರಂದು ಸಂಜೆ 6 ಗಂಟೆಗೆ ಗೋವಿಂದ ದಾಸ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಸಂಜೆ 6 ರಿಂದ ಸಭಾ ಕಾರ್ಯಕ್ರಮ, ಸನ್ಮಾನ , ಬಳಿಕ ಕಲಾ ಸಂಗಮ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಶಿವದೂತೆ ಗುಳಿಗೆ ನಾಟಕದ ಪ್ರದರ್ಶನವೂ ನಡೆಯಲಿದೆ ಎಂದು ಸು ರತ್ಕಲ್‌ ಸ್ಪೋರ್ಟ್ಸ್‌ ಕಲ್ಚರಲ್ ಕ್ಲಬ್‌ನ ಪ್ರಕಟಣೆ ತಿಳಿಸಿದೆ.

ಕಮ್ಮಜೆ: ಇಂದು ಭಜನಾ ಮಂಗಲೋತ್ಸವ

ಮೂಲ್ಕಿ: ಮೂರು ಕಾವೇರಿ ಸಮೀಪದ ಕಮ್ಮಜೆ ನೇಕಾರ ಕಾಲೋನಿಯ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಫೆ.24ರಂದು ಶನಿವಾರ ಭಜನಾ ಮಂಗಲೋತ್ಸವ ನಡೆಯಲಿದೆ. ಬೆಳಗ್ಗೆ 6.51ರಿಂದ ಭಾನುವಾರ ಬೆಳಗ್ಗೆ 6.37ರ ವರೆಗೆ ಅಹೋರಾತ್ರಿ ಭಜನೆ ಹಾಗೂ 9ನೇ ವರ್ಷದ ಭಜನಾ ಮಂಗಲೋತ್ಸವ ಜರುಗಲಿದೆ. ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ದುರ್ಗಾ ಭಜನಾ ಮಂದಿರ ಹಾಗೂ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ: ಫೆ.28 ರಂದು ಫಲಾನುಭವಿಗಳ ಸಭೆ

ಮಂಗಳೂರು: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸಿ ವಸತಿ ವಿತರಿಸುವ ಸಲುವಾಗಿ ಫಲಾನುಭವಿಗಳಿಗೆ ಫೆ.28 ರಂದು ನಗರದ ಕುದ್ಮಲ್ ರಂಗರಾವ್ ಮಿನಿ ಪುರಭವನದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಇಡ್ಯಾ ಗ್ರಾಮದ ಸರ್ವೆ ನಂ 16 ಪಿ 1 ರಲ್ಲಿ 600 ಮನೆಗಳನ್ನು ಜಿ+3 ಮಾದರಿಯಲ್ಲಿ ನಿರ್ಮಿಸಿ ವಿತರಿಸುವ ಯೋಜನೆಗೆ ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಂದ ವಂತಿಕೆ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ 600 ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಿದ್ದು 390 ಫಲಾನುಭವಿಗಳು ವಂತಿಕೆಯನ್ನು ನೀಡಿದ್ದು ಉಳಿಕೆ 210 ಫಲಾನುಭವಿಗಳು ವಂತಿಕೆ ಪಾವತಿಸಬೇಕಾಗಿರುತ್ತದೆ.

ಈ ಯೋಜನೆಗೆ 40 ಕೋಟಿ ರು. ಯೋಜನಾ ವೆಚ್ಚದಲ್ಲಿ ಫಲಾನುಭವಿಗಳಿಂದ ಒಟ್ಟು 1,143.20 ಲಕ್ಷ ರು. ವಂತಿಕೆ ಸಂಗ್ರಹಿಸಬೇಕಾಗಿರುತ್ತದೆ. ಪ್ರಸ್ತುತ ಫಲಾನುಭವಿಗಳ ವಂತಿಕೆ 1 ಕೋಟಿ ರು. ಸಂಗ್ರಹವಾಗಿದ್ದು,ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಬಾಕಿ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಸಾಲದ ಮೂಲಕ ಮತ್ತು ಉಳಿದ ಫಲಾನುಭವಿಗಳ ವಂತಿಕೆಯಿಂದ ಪಾವತಿಸಬೇಕಾದಿದೆ. ಫಲಾನುಭವಿಯು ಬ್ಯಾಂಕ್ ಸಾಲ ಪಡೆಯಲು ಅವಶ್ಯಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.