ಸಾರಾಂಶ
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ಸ್ಪ್ಲೆಂಡರ್ ಪ್ಲಸ್ ಬೈಕ್, ದ್ವಿತೀಯ ಫ್ಯಾಶನ್ ಪ್ಲಸ್ ಬೈಕ್, ತೃತೀಯ ಹೊಂಡಾ ಶೈನ್ ಹಾಗೂ 11 ನೇ ಲಕ್ಕಿ ಬಹುಮಾನವಾಗಿ ಎಚ್.ಎಫ್ 100 ಬೈಕ್ ವಿತರಣೆ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ತಾಲೂಕಿನ ಉಣಕಲ್ ಗ್ರಾಮದ ಸಿದ್ದಪ್ಪಜ್ಜ ಸದ್ಭಕ್ತ ಗೆಳೆಯರ ಬಳಗ ಹಾಗೂ ದುರ್ಗಾ ಡೆವಲಪರ್ ಹಾಗೂ ಪ್ರೊಮೊಟರ್ಸ್ ಸಂಯುಕ್ತ ಆಶ್ರಯದಲ್ಲಿ ಮೇ ೧ ರಂದು ಬೆಳಗ್ಗೆ 8 ಗಂಟೆಗೆ ಹೆಬ್ಬಳ್ಳಿ ರಸ್ತೆಯ ಸಾಂಗ್ಲಿ ಗಣೇಶ ದೇವಸ್ಥಾನದ ಹತ್ತಿರದ ಕಳಕವ್ವ ಸಜ್ಜನರ, ಯಲ್ಲಪ್ಪ ಕಡಪಟ್ಟಿ ಹೊಲದಲ್ಲಿ ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಕಲ್ಲಪ್ಪ ವಾಲಿಕಾರ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧೆಯ ಒಂದು ನಿಮಿಷ ಅವಧಿ ಇರಲಿದ್ದು, ಅದಲು- ಬದಲು ಎತ್ತುಗಳನ್ನು ಹೂಡಲು ಅವಕಾಶ ಇರುತ್ತದೆ ಎಂದರು.
ಸೋಮಶೇಖರ ಗುರುಸಿದ್ದಯ್ಯ ಹಿರೇಮಠ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಗತಿಪರ ರೈತ ಕಲ್ಲಪ್ಪ ವಾಲಿಕಾರ ಅಧ್ಯಕ್ಷತೆ ವಹಿಸುವರು. ದೇವಿ ಕರಿಯಮ್ಮ ದೇವಸ್ಥಾನ ಅಧ್ಯಕ್ಷ ವಿರೇಶ ಉಂಡಿ ಉಪಸ್ಥಿತಿ ಇರಲಿದ್ದು, ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಬಸವರಾಜ್ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ ಎಂದರು.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ಸ್ಪ್ಲೆಂಡರ್ ಪ್ಲಸ್ ಬೈಕ್, ದ್ವಿತೀಯ ಫ್ಯಾಶನ್ ಪ್ಲಸ್ ಬೈಕ್, ತೃತೀಯ ಹೊಂಡಾ ಶೈನ್ ಹಾಗೂ 11 ನೇ ಲಕ್ಕಿ ಬಹುಮಾನವಾಗಿ ಎಚ್.ಎಫ್ 100 ಬೈಕ್ ವಿತರಣೆ ಮಾಡಲಾಗುವುದು ಎಂದ ಅವರು ಒಟ್ಟು 25 ನಗದು ಬಹುಮಾನಗಳನ್ನು ವಿತರಣೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಈಶ್ವರ ಬೆಂಗೇರಿ, ಮಹಾದೇವ ಕಡಪಟ್ಟಿ, ಪ್ರಶಾಂತ ನವಲಗುಂದ, ಪರಶುರಾಮ ಕೊಕಾಟಿ, ಉಪಸ್ಥಿತರಿದ್ದರು.