ರಾಜ್ಯ ಮಟ್ಟದ ಕಬಡ್ಡಿ: ಜೀವನ್ ತಂಡ ಪ್ರಥಮ

| Published : Jan 20 2025, 01:31 AM IST

ಸಾರಾಂಶ

ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಜೀವನ್‌ ತಂಡ ಪ್ರಥಮ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸಾಕಮ್ಮನ ಬಂಗಲೆಯ ಎದುರಿನ ಮೈದಾನದಲ್ಲಿ ಶನಿವಾರ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ನಡೆದ ೩೮ನೇ ವರ್ಷದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಜೀವನ್ ತಂಡ ಪ್ರಥಮ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು.

ದ್ವಿತೀಯ ಸ್ಥಾನವನ್ನು ಕುಶಾಲನಗರದ ಜೆಬಿಎಸ್‌ಸಿ ತಂಡ ಪಡೆದರೆ, ತೃತೀಯ ಸ್ಥಾನವನ್ನು ಸೋಮವಾರಪೇಟೆಯ ಸತ್ಯ ಸ್ಪೋರ್ಟ್ಸ್ ತಂಡ ಗಳಿಸಿ, ನಗದು ಬಹುಮಾನದೊಂದಿಗೆ ಟ್ರೋಫಿ ಪಡೆದವು.

೨೦ ವಯೋಮಾನದವರಿಗೆ ನಡೆದ ಪಂದ್ಯಾಟದಲ್ಲಿ ಸೋಮವಾರಪೇಟೆಯ ರಾಮದೂತ್ ತಂಡ ಪ್ರಥಮ ಬಹುಮಾನ, ತೇಜ ಬ್ರದರ್ಸ್‌ ದ್ವಿತೀಯ ಹಾಗೂ ಕುಶಾಲನಗರದ ಜೈ ಮಾರುತಿ ತಂಡ ತೃತೀಯ ಸ್ಥಾನವನ್ನು ಪಡೆದವರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಪಂದ್ಯದಲ್ಲಿ ಸ್ಥಳೀಯ ಜಿಎಂಪಿ ಶಾಲಾ ತಂಡ ಪ್ರಥಮ ಹಾಗೂ ಓಎಲ್‌ವಿ ಶಾಲಾ ತಂಡ ದ್ವಿತೀಯ ಸ್ಥಾನ ಪಡೆದವು.

ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು ವಹಿಸಿದ್ದರು. ಪ್ರಮುಖರಾದ ಮಧುಸೂದನ್, ಪಟ್ಟಣ ಪಂಚಾಯಿತಿ ಜೀವನ್‌ಕುಮಾರ್, ಗುತ್ತಿಗೆದಾರ ರವಿ ತಲ್ತಾರೆ, ಎಚ್.ಪಿ. ರಾಜಪ್ಪ, ರವೀಂದ್ರ, ಗಿರೀಶ್, ಅಜಯ್, ನಾಗಪ್ಪ, ಮಣಿ ಇದ್ದರು.

ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್, ಸತೀಶ್, ಮಧುಸೂದನ್, ಸುನೀಲ್, ಕರ್ಕಳ್ಳಿ ಇಸಾಕ್ ಕಾರ್ಯನಿರ್ವಹಿಸಿದರು.