ಕನ್ನಡಪ್ರಭ ವಾರ್ತೆ ಬೆಳಗಾವಿ

21ನೇ ರಾಜ್ಯಮಟ್ಟದ ಮೌಂಟೆನ್‌ ಸೈಕ್ಲಿಂಗ್ ಚಾಂಪಿಯನಶಿಪನ್ನು ಗದಗ ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಸಿಯೇಶನ ಹಾಗೂ ಕರ್ನಾಟಕ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೇಶನ ಸಹಯೋಗದೊಂದಿಗೆ ಆ.7 ರಿಂದ ಆ.9 ರವರೆಗೆ ಗದಗ ಜಿಲ್ಲೆಯ ಮುಳಗುಂದದಲ್ಲಿ ಹಮ್ಮಿಕೊಳ್ಳಲಾಗಿದೆ.

14, 16 ಮತ್ತು 18 ವಯೋಮಾನದ ಬಾಲಕ-ಬಾಲಕಿಯರಿಗೆ, 23 ವರ್ಷ ವಯೋಮಾನದ ಪುರುಷರಿಗಾಗಿ ಮತ್ತು ಮುಕ್ತ ಪುರುಷ-ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಇದೇ ಸಂದರ್ಭದಲ್ಲಿ ಮುಂಬರುವ ರಾಷ್ಟ್ರೀಯ ಮೌಂಟೆನ್‌ ಬೈಕ್‌ ಸೈಕ್ಲಿಂಗ್ ಚಾಂಪಿಯನಶಿಪಗಾಗಿ ರಾಜ್ಯ ತಂಡ ಆಯ್ಕೆ ಮಾಡಲಾಗುವುದು. ಬೆಳಗಾವಿ ಜಿಲ್ಲಾ ಆಸಕ್ತ ಸೈಕ್ಲಿಂಗ್ ಕ್ರೀಡಾಪಟುಗಳು ಜು.27 ರೊಳಗಾಗಿ ಹೆಸರುಗಳನ್ನು ತಲುಪಿಸಲು ಕೋರಲಾಗಿದೆ. ಈ ರೇಸ್‌ನಲ್ಲಿ ಮೌಂಟೆನ್‌ ರೇಸಿನ ಬೈಕ್‌ಗಳನ್ನು ಹಾಗೂ ಹೆಲ್ಮೆಟ್‌ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ ಪ್ರಧಾನ ಕಾರ್ಯದರ್ಶಿ ಆರ್.ಎಚ್.ಪೂಜಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9945949600 ಸಂಪರ್ಕಿಸಿ.