ರಾಜ್ಯಮಟ್ಟದ ಫೋಟೋಗ್ರಫಿ ಸ್ಪರ್ಧೆ: ಬಹುಮಾನ ವಿತರಣೆ

| Published : May 24 2024, 12:52 AM IST

ರಾಜ್ಯಮಟ್ಟದ ಫೋಟೋಗ್ರಫಿ ಸ್ಪರ್ಧೆ: ಬಹುಮಾನ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸೌತ್ ಕೆನರಾ ಫೋಟೋಗ್ರಫರ್ ಅಸೋಸಿಯೇಷನ್ ಹಾಗೂ ಫೋಟೋ ಕಾಡ್ತಾ ಸಂಸ್ಥೆ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಇತ್ತೀಚೆಗೆ ಜಗನ್ನಾಥ ಸಭಾಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸೌತ್ ಕೆನರಾ ಫೋಟೋಗ್ರಫರ್ ಅಸೋಸಿಯೇಷನ್ ಹಾಗೂ ಫೋಟೋ ಕಾಡ್ತಾ ಸಂಸ್ಥೆ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಪರ್ಯಾಯೋತ್ಸವ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಇತ್ತೀಚೆಗೆ ಜಗನ್ನಾಥ ಸಭಾಭವನದಲ್ಲಿ ನಡೆಯಿತು.

ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಸಹಾಯಕ ಮಹಾಪ್ರಬಂಧಕ ಪ್ರವೀಣ್ ಕೊರಂಗ್ರಪಾಡಿ ಬಹುಮಾನ ವಿತರಿಸಿ, ಯಾವುದೇ ಕಾರಣವಿಲ್ಲದೆ ಮುಖದಲ್ಲಿ ನಗುವನ್ನು ತರಿಸಲು ಒಬ್ಬ ಛಾಯಾಗ್ರಹಕನಿಗೆ ಮಾತ್ರ ಸಾಧ್ಯ. ಯಾವುದೇ ಸಮಾರಂಭಗಳಲ್ಲಿ ಛಾಯಾಗ್ರಹಕರು ನಮ್ಮ ಮುಖದಲ್ಲಿ ನಗುವನ್ನು ತರಿಸಿ ಛಾಯಾಚಿತ್ರವನ್ನು ಕ್ಲಿಕ್ಕಿಸುತ್ತಾರೆ. ಇಂತಹ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯ. ಕಳೆದ 30 ದಶಕಗಳಿಂದ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂಘಟನೆ ಕಾರ್ಯ ನಿರ್ವಹಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನ ಪಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಈ ಸಂಘಕ್ಕೆ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.

ಬಹುಮಾನ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ನೀಡಿ ಪುರಸ್ಕರಿಸಲಾಯಿತು.

ಸಂಘದ ಅಧ್ಯಕ್ಷ ಸುದೀರ್ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಫೋಟೋ ಕಾಡ್ತಾ ಸಂಸ್ಥೆಯ ಮಾಲಕ ಸಂದೀಪ್ ಕಾಮತ್, ಮುಖ್ಯ ಗೌರವಾಧ್ಯಕ್ಷ ನವೀನ್ ಬಳ್ಳಾಲ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ದಿವಾಕರ್ ಹಿರಿಯಡ್ಕ ಸ್ವಾಗತಿಸಿದರು. ಕೋಶಾಧಿಕಾರಿ ರಮೇಶ್ ಭಟ್ ಎಲ್ಲೂರು ವಂದಿಸಿದರು. ರಾಘವೇಂದ್ರ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.