ನಾಳೆಯಿಂದ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ

| Published : Jan 21 2025, 12:34 AM IST

ಸಾರಾಂಶ

ವಿಜಯನಗರದಲ್ಲಿರುವ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಟೈಮ್ಸ್ ಗ್ರೂಪ್ ಆಫ್ ಇನ್ಟಿಟ್ಯೂಟ್ ಸಂಯುಕ್ತಾಶ್ರಯದಲ್ಲಿ ಜ.೨೨ರಿಂದ ಜ.೨೬ರವರೆಗೂ ರಾಜ್ಯ ಮಟ್ಟದ ಲೆದರ್ ಬಾಲ್ ಮಹಿಳಾ ಕ್ರಿಕೆಟ್ ಟೂರ್ನಮೆಂಟ್‌ ಹಮ್ಮಿಕೊಳ್ಳಲಾಗಿದೆ ಎಂದು ಟೈಮ್ಸ್ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು. ಈ ಕ್ರೀಡೆಗೆ ರಾಜ್ಯದ ವಿವಿಧ ಭಾಗಗಳಿಂದ ಎಂಟು ತಂಡಗಳು ಭಾಗವಹಿಸಲಿದೆ. ಮೈಸೂರಿನಿಂದ ಇಂದು ತಂಡ, ಬೆಂಗಳೂರಿನಿಂದ ಎರಡು ತಂಡ, ಹಾಸನದಿಂದ ಒಂದು ತಂಡ, ಶಿವಮೊಗ್ಗ ಒಂದು, ಹುಬ್ಬಳಿಯಿಂದ ಹಾಗೂ ವಿಜಯಪುರ, ಬ್ರಹ್ಮಾವರದಿಂದ ಒಂದೊಂದು ತಂಡ ಪಾಲ್ಗೊಳ್ಳಲಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವಿಜಯನಗರದಲ್ಲಿರುವ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆ ಆವರಣದಲ್ಲಿ ಟೈಮ್ಸ್ ಗ್ರೂಪ್ ಆಫ್ ಇನ್ಟಿಟ್ಯೂಟ್ ಸಂಯುಕ್ತಾಶ್ರಯದಲ್ಲಿ ಜ.೨೨ರಿಂದ ಜ.೨೬ರವರೆಗೂ ರಾಜ್ಯ ಮಟ್ಟದ ಲೆದರ್ ಬಾಲ್ ಮಹಿಳಾ ಕ್ರಿಕೆಟ್ ಟೂರ್ನಮೆಂಟ್‌ ಹಮ್ಮಿಕೊಳ್ಳಲಾಗಿದೆ ಎಂದು ಟೈಮ್ಸ್ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವಿವಿಧ ಕ್ರೀಡೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಟೈಮ್ಸ್ ಶಾಲೆಯ ಬಳಿಯೇ ನಾನಾ ಕ್ರೀಡೆಗಳ ಮೈದಾನ ಸಿದ್ಧಪಡಿಸಲಾಗಿದೆ. ಈಗಾಗಲೇ ಉದ್ಘಾಟನೆಗೊಂಡು ನಂತರದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಜ.೨೨ರಂದು ಬೆಳಿಗ್ಗೆ ೮:೩೦ಕ್ಕೆ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ. ಈ ಕ್ರೀಡೆಗೆ ರಾಜ್ಯದ ವಿವಿಧ ಭಾಗಗಳಿಂದ ಎಂಟು ತಂಡಗಳು ಭಾಗವಹಿಸಲಿದೆ. ಮೈಸೂರಿನಿಂದ ಇಂದು ತಂಡ, ಬೆಂಗಳೂರಿನಿಂದ ಎರಡು ತಂಡ, ಹಾಸನದಿಂದ ಒಂದು ತಂಡ, ಶಿವಮೊಗ್ಗ ಒಂದು, ಹುಬ್ಬಳಿಯಿಂದ ಹಾಗೂ ವಿಜಯಪುರ, ಬ್ರಹ್ಮಾವರದಿಂದ ಒಂದೊಂದು ತಂಡ ಪಾಲ್ಗೊಳ್ಳಲಿದೆ ಎಂದರು.

ಮೊದಲ ಬಹುಮಾನವಾಗಿ ೪೦ ಸಾವಿರ ಹಾಗೂ ಎರಡನೇ ಬಹುಮಾನವಾಗಿ ₹೨೦ ಸಾವಿರ ಕೊಡಲಾಗುವುದು. ಜೊತೆಗೆ ಟೈಮ್ಸ್ ಕಪ್‌ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಟೇಶ್ ಮೊಬೈಲ್ ಸಂಖ್ಯೆ ೯೭೪೧೫೩೬೨೭೮, ವಿನಯ್ ಮೊ. ೭೭೬೦೬೮೧೮೧೬ ಹಾಗೂ ಅರ್ಜುನ್ ಮೊ. ೮೦೫೦೬೮೬೬೪೭ ಸಂಪರ್ಕಿಸಬಹುದು. ಮುಂದಿನ ದಿನಗಳಲ್ಲಿ ಇನ್ನು ಹಲವಾರು ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುವುದಾಗಿ ಹೇಳಿದರು. ಕ್ರಿಕೆಟ್ ಸೀನಿಯರ್ ಕೋಚರ್ ನಟೇಶ್, ರವಿಶಂಕರ್, ಸುರೇಶ್, ವಿನಯ್ ಮತ್ತು ಅರ್ಜುನ್ ಇದ್ದರು.