ರಾಷ್ಟ್ರೀಯ ಈಜು ಸ್ಪರ್ಧೆ- ರಾಜ್ಯದಿಂದ ಜೀವಾಂಶ್, ರುತ್ವಾ, ಕೃಥಿಕ್ ಆಯ್ಕೆ

| Published : Dec 13 2024, 12:49 AM IST

ರಾಷ್ಟ್ರೀಯ ಈಜು ಸ್ಪರ್ಧೆ- ರಾಜ್ಯದಿಂದ ಜೀವಾಂಶ್, ರುತ್ವಾ, ಕೃಥಿಕ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

State Shot 9 Cos 9 Swimming Championship held at Mysore, Bangalore

ಕನ್ನಡಪ್ರಭ ವಾರ್ತೆ ಮೈಸೂರು

ಬೆಂಗಳೂರಿನಲ್ಲಿ ನಡೆದ ರಾಜ್ಯ ಶಾಟ್೯ ಕೋಸ್೯ ಈಜು ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಜಿಎಸ್ಎಯ ಜೀವಾಂಶ್, ರುತ್ವಾ ಮತ್ತು ಕೃಥಿಕ್ ಸ್ಪರ್ಧಿಸಿ, ದಕ್ಷಿಣ ವಲಯದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.ಕರ್ನಾಟಕ ರಾಜ್ಯ ಈಜು ಸಂಘವು ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ ಏರ್ಪಡಿಸಿದ್ದ ರಾಜ್ಯ ಶಾರ್ಟ್ ಕೋರ್ಸ್ ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಸುಬ್ರಹ್ಮಣ್ಯ ಜೀವಾಂಶ್, ರುತ್ವಾ, ಕೃಥಿಕ್, ಸಾನ್ವಿ ಹಾಗೂ ಹಾರಿಕಾ ಭಾಗವಹಿಸಿ 4 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆದಿದ್ದಾರೆ.ಇದರಲ್ಲಿ ಸುಬ್ರಹ್ಮಣ್ಯ ಜೀವಾಂಶ್ 3 ಚಿನ್ನ, ರುತ್ವಾ 1 ಚಿನ್ನ, 2 ಬೆಳ್ಳಿ, 1 ಕಂಚು ಮತ್ತು ಕೃಥಿಕ್ 1 ಬೆಳ್ಳಿ ಪದಕವನ್ನು ಪಡೆದು, ಈ ಮೂವರು ಡಿ.27 ರಿಂದ 29 ರವರೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯಲಿರುವ ದಕ್ಷಿಣ ವಲಯದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.ಇವರು ಜೆ.ಪಿ. ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋಟ್ಸ್೯ ಅಸೋಸಿಯೇಷ್ ನಲ್ಲಿ ಮುಖ್ಯ ತರಬೇತುದಾರ ಪವನ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾರೆ.