ಇಂದಿನ ದಿನಗಳಲ್ಲಿ ಯುವ ಪೀಳಿಗೆಯು ದುಶ್ಚಟಗಳ ದಾಸತ್ವಕ್ಕೆ ಸಿಲುಕಿಕೊಂಡು ತಮ್ಮ ಬದುಕನ್ನು ವಿನಾಶಗೊಳಿಸಿಕೊಳ್ಳುತ್ತಿರುವುದು ಅಘಾತಕಾರಿ ಸಂಗತಿ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಅನಂತ್ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಇಂದಿನ ದಿನಗಳಲ್ಲಿ ಯುವ ಪೀಳಿಗೆಯು ದುಶ್ಚಟಗಳ ದಾಸತ್ವಕ್ಕೆ ಸಿಲುಕಿಕೊಂಡು ತಮ್ಮ ಬದುಕನ್ನು ವಿನಾಶಗೊಳಿಸಿಕೊಳ್ಳುತ್ತಿರುವುದು ಅಘಾತಕಾರಿ ಸಂಗತಿ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಅನಂತ್ ಕುಮಾರ್ ಹೇಳಿದರು. ಸೋಮವಾರ ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದಿನ ಯುವ ಪೀಳಿಗೆಯು ಮಾದಕ ದ್ರವ್ಯ, ಧೂಮಪಾನ ಹಾಗೂ ಮದ್ಯಪಾನದಂತಹ ದುಶ್ಚಟಗಳಿಗೆ ದಾಸರಾಗಿ ಬಲಿಯಾಗುತ್ತಿರುವುದು ಪೋಷಕರಿಗೂ ಸಮಾಜಕ್ಕೂ ಅತಂಕಕಾರಿ ವಿಚಾರವಾಗಿದೆ. ಇದನ್ನು ತಡೆಯಲು ಮತ್ತು ಅವುಗಳಿಂದ ಆರೋಗ್ಯ ಹಾಗೂ ಭವಿಷ್ಯದ ಮೇಲಾಗುವ ಭೀಕರ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.ಪ್ರಾಂಶುಪಾಲ ಶ್ರೀಲತಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸುನೀತಾ ಗಿರೀಶ್, ಈಶ, ಪೊಲೀಸ್ ಪೇದೆಗಳಾದ ಸುದೀಶ್ ಕುಮಾರ್, ರಮೇಶ್ ಬಿರದಾರ್, ಮಹಿಳಾ ಪೇದೆ ದಿವ್ಯ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.