ಉತ್ತಮ ಭವಿಷ್ಯಕ್ಕಾಗಿ ದುಶ್ಚಟಗಳಿಂದ ದೂರವಿರಿ

| Published : Jun 29 2024, 12:39 AM IST

ಸಾರಾಂಶ

ವಿದ್ಯಾರ್ಥಿಗಳು ಗುಟುಕಾ, ತಂಬಾಕು, ಸಿಗರೇಟುಗಳಂತಹ ಮಾದಕ ವಸ್ತುಗಳಿಗೆ ದಾಸರಾದರೆ ಅದರಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತದೆ. ತಮ್ಮ ಕನಸನ್ನು ನನಸು ಮಾಡಲು ದುಶ್ಚಟಗಳಿಂದ ದೂರ ಇರಬೇಕು ಎಂದು ಎಸೈ ಸಂಜಯಕುಮಾರ ಕಲ್ಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ವಿದ್ಯಾರ್ಥಿಗಳು ಗುಟುಕಾ, ತಂಬಾಕು, ಸಿಗರೇಟುಗಳಂತಹ ಮಾದಕ ವಸ್ತುಗಳಿಗೆ ದಾಸರಾದರೆ ಅದರಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತದೆ. ತಮ್ಮ ಕನಸನ್ನು ನನಸು ಮಾಡಲು ದುಶ್ಚಟಗಳಿಂದ ದೂರ ಇರಬೇಕು ಎಂದು ಎಸೈ ಸಂಜಯಕುಮಾರ ಕಲ್ಲೂರ ಹೇಳಿದರು.

ಪಟ್ಟಣದ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಚಡಚಣ ಪೊಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರಹಿಪ್ಪರಗಿ ಸರಕಾರಿ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಡಾ.ಅಶೋಕ ಜಾಧವ ಮಾತನಾಡಿ, ಮೊದಲು ನಾವು ಬದಲಾವಣೆಯಾಗಬೇಕಾದರೆ, ನಮ್ಮ ಜೀವನ ಶೈಲಿ ಬದಲಾಗಬೇಕು. ಅದರ ಜೊತೆಯಲ್ಲಿ ಶಾರೀರಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆ ಆಗಬೇಕಾದರೆ ಕ್ರೀಡೆಯೂ ಅತ್ಯವಶ್ಯಕವಾಗಿರುತ್ತದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ.ರಾಠೋಡ ಮಾತನಾಡಿ, ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಹಾಳು ಮಾಡುವುದಿಲ್ಲ. ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿ ಡಾ.ಎಸ್.ಎಸ್.ಚೋರಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಮುತ್ತಿನ, ನಿರ್ದೇಶಕಿ ನಾಗಮ್ಮ ಅಂಕದ, ಗ್ರಂಥಪಾಲಕ ಎಂ.ಕೆ.ಬಿರಾದಾರ, ಐ.ಕ್ಯೂ.ಎ.ಸಿ ಕೋ ಆರ್ಡಿನೇಟರ್‌ ಡಾ. ಎಸ್.ಎಸ್.ದೇಸಾಯಿ, ಖ್ಯಾತ ಗಾಯಕ ಸೋಮಶೇಖರ ರಾಠೋಡ, ದೈಹಿಕ ಶಿಕ್ಷಣ ನಿರ್ದೇಶಕ ಚಾಂದ ಮುಕುಂದ, ಚಡಚಣ ಪೋಲಿಸ ಸಿಬ್ಬಂದಿ ವರ್ಗ, ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ನಿರ್ದೇಶಕ ಎಸ್.ಎಸ್.ಅವಟಿ ಸ್ವಾಗತಿಸಿದರು. ಮಹಾಂತೇಶ ಜನವಾಡ ನಿರೂಪಿಸಿದರು. ಎಸ್.ಎಸ್.ಪಾಟೀಲ ವಂದಿಸಿದರು.