ಕಾರು ಡ್ರೈವಿಂಗ್‌ ಕಲಿಗೆ ಶುಲ್ಕ 7 ಸಾವಿರಕ್ಕೆ ಏರಿಕೆ

| Published : Dec 14 2023, 01:30 AM IST

ಸಾರಾಂಶ

ಹೊಸ ವರ್ಷಕ್ಕೆ ವಾಹನ ಚಾಲನಾ ತರಬೇತಿ ಪಡೆಯುವವರಿಗೆ ಶಾಕ್‌ ನೀಡಿರುವ ಸಾರಿಗೆ ಇಲಾಖೆ, 2024ರ ಜ. 1ರಿಂದ ಅನ್ವಯವಾಗುವಂತೆ ರಾಜ್ಯದ ವಾಹನ ಚಾಲನಾ ತರಬೇತಿ ಶಾಲೆಗಳ ಶುಲ್ಕ ಹೆಚ್ಚಿಸಿ ಆದೇಶಿಸಿದೆ.

- ಕಲಿಕೆ ಜತೆ ಡಿಎಲ್‌ ಕೂಡ ಬೇಕು ಎಂದರೆ 8350 ರು. ಕೊಡಬೇಕು

- ಹೊಸ ವರ್ಷಕ್ಕೆ ಕಾರು ಕಲಿಯಬೇಕು ಅಂದುಕೊಂಡವರಿಗೆ ಶಾಕ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಕ್ಕೆ ವಾಹನ ಚಾಲನಾ ತರಬೇತಿ ಪಡೆಯುವವರಿಗೆ ಶಾಕ್‌ ನೀಡಿರುವ ಸಾರಿಗೆ ಇಲಾಖೆ, 2024ರ ಜ. 1ರಿಂದ ಅನ್ವಯವಾಗುವಂತೆ ರಾಜ್ಯದ ವಾಹನ ಚಾಲನಾ ತರಬೇತಿ ಶಾಲೆಗಳ ಶುಲ್ಕ ಹೆಚ್ಚಿಸಿ ಆದೇಶಿಸಿದೆ.

ಸದ್ಯ ಕಾರು ಚಾಲನೆ ಕಲಿಕೆಗಾಗಿ 4 ಸಾವಿರ ರು. ಶುಲ್ಕವಿದ್ದು, ಡ್ರೈವಿಂಗ್‌ ಸ್ಕೂಲ್‌ಗಳೇ ಎಲ್‌ಎಲ್‌ ಹಾಗೂ ಡಿಎಲ್‌ಗಳನ್ನು ಮಾಡಿಸಿಕೊಡುತ್ತವೆ. ಆದರೆ, ಆ ಶುಲ್ಕವನ್ನು 7 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದರ ಜತೆಗೆ ಎಲ್‌ಎಲ್‌ಗೆ 350 ರು. ಹಾಗೂ ಡಿಎಲ್‌ಗೆ 1 ಸಾವಿರ ರು.ಗಳನ್ನು ಸಾರಿಗೆ ಇಲಾಖೆಗೆ ಪಾವತಿಸಬೇಕಿದೆ. ಹೀಗಾಗಿ ಜ. 1ರಿಂದ ಚಾಲನಾ ಕಲಿಕೆ ಮತ್ತು ಪರವಾನಗಿಗಾಗಿ 8,350 ರು. ವ್ಯಯಿಸಬೇಕಿದೆ. ಎಲ್ಲ ವಾಹನಗಳ ಚಾಲನೆ ಕಲಿಕೆ ಮತ್ತು ಪರವಾನಗಿಗೂ ಡ್ರೈವಿಂಗ್‌ ಶಾಲೆಗಳ ಶುಲ್ಕದ ಜತೆಗೆ ಹೆಚ್ಚಿನ ಹಣ ವ್ಯಯಿಸಬೇಕಾಗಲಿದೆ.ಕಳೆದ 10 ವರ್ಷಗಳ ಹಿಂದೆ ಅಂದರೆ 2013ರಲ್ಲಿ ಡ್ರೈವಿಂಗ್‌ ಸ್ಕೂಲ್‌ಗಳ ಶುಲ್ಕ ಹೆಚ್ಚಿಸಲಾಗಿತ್ತು. ಅದಾದ ನಂತರ ಶುಲ್ಕ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಮುಂದಾಗಿರಲಿಲ್ಲ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ಅನುಮತಿ ಕೋರಿ ಡ್ರೈವಿಂಗ್‌ ಸ್ಕೂಲ್‌ಗಳು ಪದೇಪದೆ ಮನವಿ ಸಲ್ಲಿಸುತ್ತಿದ್ದವು. ಇದೀಗ ಅದಕ್ಕೆ ಸಮ್ಮತಿಸಿರುವ ಸಾರಿಗೆ ಇಲಾಖೆ ಜ. 1ರಿಂದ ನೂತನ ದರದಂತೆ ಶುಲ್ಕ ಪಡೆದು ಚಾಲನಾ ತರಬೇತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ, ಬಿಡಿಭಾಗಗಳ ದರ ಏರಿಕೆಯಿಂದಾಗಿ ಡ್ರೈವಿಂಗ್‌ ಸ್ಕೂಲ್‌ಗಳ ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕಳೆದ ಎರಡ್ಮೂರು ವರ್ಷಗಳ ಹಿಂದೆ ಸಾರಿಗೆ ಇಲಾಖೆಯು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು ಸೇರಿದಂತೆ ಇನ್ನಿತರ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಶುಲ್ಕ ಪರಿಷ್ಕರಣೆ ಕುರಿತಂತೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಿಂದೆಯೇ ಸಮಿತಿಯು ವರದಿ ನೀಡಲಾಗಿತ್ತಾದರೂ, ಇಲಾಖೆಯು ಅದನ್ನು ಜಾರಿಗೊಳಿಸಿರಲಿಲ್ಲ. ಇದೀಗ ವರದಿ ಅಂಗೀಕರಿಸಿ, ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಲಾಗಿದೆ.---ಬಾಕ್ಸ್‌ಶುಲ್ಕ ಹೆಚ್ಚಳದ ವಿವರವಾಹನಈವರೆಗೆಹೆಚ್ಚಳದ ಮೊತ್ತಮೋಟಾರು ಸೈಕಲ್2,200 ರು.3 ಸಾವಿರ ರು.ಆಟೋ ರಿಕ್ಷಾ3 ಸಾವಿರ ರು4 ಸಾವಿರ ರು.ಕಾರುಗಳು4 ಸಾವಿರ ರು.7 ಸಾವಿರ ರು.