ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ನೂತನ ಕುಲಪತಿಯಾಗಿ ಸ್ಟೀಫನ್ ಡಿಸೋಜ ಅವರನ್ನು ನೇಮಕಗೊಳಿಸಿ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ.ಸೋಮವಾರ ಉಡುಪಿ ಧರ್ಮಾಧ್ಯಕ್ಷರ ನಿವಾಸ ಚಾಪೆಲ್‌ನಲ್ಲಿ ನಡೆದ ಸರಳ ಧಾರ್ಮಿಕ ವಿಧಿ ಸಮಾರಂಭದಲ್ಲಿ ಸ್ಟೀಫನ್ ಡಿಸೋಜಾ ಅವರು ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ನೂತನ ಕುಲಪತಿಗಳಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನವನ್ನು ಬೋಧಿಸಿದರು.ನಿರ್ಗಮನ ಕುಲಪತಿ ಡಾ.ರೋಶನ್ ಡಿಸೋಜ, ನೂತನ ಕುಲಪತಿಗಳಿಗೆ ಕಡತಗಳನ್ನು ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ನೂತನ ಕುಲಪತಿಗಳಿಗೆ ಹೆಚ್ಚುವರಿಯಾಗಿ ಧರ್ಮಪ್ರಾಂತ್ಯದ ವಿವಿಧ ಆಯೋಗಗಳ ಸಂಯೋಜಕರಾಗಿ ಕೂಡ ನೇಮಕಗೊಳಿಸಲಾಗಿದ್ದು, ಈ ಹಿಂದೆ ಆ ಹುದ್ದೆಯನ್ನು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ನಿರ್ವಹಿಸುತ್ತಿದ್ದರು.ಸ್ಟೀಫನ್ ಡಿಸೋಜಾ ಅವರು 2009ರಲ್ಲಿ ಧರ್ಮಗುರುಗಳಾಗಿ ದೀಕ್ಷೆಯನ್ನು ಸ್ವೀಕರಿಸಿದ್ದು, ಬಳಿಕ ಬಿಜೈ ಚರ್ಚಿನಲ್ಲಿ ಸಹಾಯಕ ಧರ್ಮಗುರುಗಳಾಗಿ, ಮಂಗಳೂರು ಸಂತ ಜೋಸೆಫರ ಗುರುಮಠದಲ್ಲಿ ಪ್ರಾಧ್ಯಾಪಕರಾಗಿ, ಉಡುಪಿ ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.