ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಮೂಲಭೂತ ಸೌಕರ್ಯ ಅನುದಾನದಲ್ಲಿ ಸುಮಾರು 1 ಕೋಟಿ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎನ್.ಎಚ್.50 ಎ ರಸ್ತೆಯಿಂದ ತೊರೆಮಾವಿನಹಳ್ಳಿ ಗ್ರಾಮದವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲವು ದಿನಗಳಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಈ ರಸ್ತೆಯಲ್ಲಿ ಜನರು ಸಂಚರಿಸಲು ಬಹಳ ಕಷ್ಟಪಡಬೇಕಿತ್ತು. ಒಂದು ಕೋಟಿ ವೆಚ್ಚದಲ್ಲಿ ಕೆಲ ಭಾಗ ಡಾಂಬಾರು ರಸ್ತೆ ಮತ್ತು ಕೆಲ ಭಾಗ ಸಿಸಿ ರಸ್ತೆ ನಿರ್ಮಾಣ ಮಾಡಲು ಯೋಜನೆ ತಯಾರಾಗಿದೆ. ಹಾಗಾಗಿ ಉತ್ತಮ ರಸ್ತೆಯಾಗಲಿದೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಬೂವನಹಳ್ಳಿಪುನೀತ್, ಇಂದ್ರಕುಮಾರ್, ಹೊಸಳ್ಳಿ ದೇವರಾಜು, ಶ್ರೀನಿವಾಸ್, ರಾಮಕೃಷ್ಣ, ತಿಮ್ಮೇಗೌಡ, ಶಿವರುದ್ರಪ್ಪ, ತಿಮ್ಮಪ್ಪ ಸೇರಿದಂತೆ ತೊರೆಮಾವಿನಹಳ್ಳಿ, ಭೂವನಹಳ್ಳಿ ಗ್ರಾಮಸ್ಥರು ಇದ್ದರು.