ಸಾರಾಂಶ
ರೈತರಿಗೆ ಬಿತ್ತನೆ ಮಾಡಲು ಗುಣಮಟ್ಟದ ಬೀಜ ವಿತರಣೆಗೆ ಕ್ರಮ ವಹಿಸಲಾಗುವುದು. ಒಂದು ವೇಳೆ ಬೀಜ ಕಳಪೆಯಾಗಿದ್ದರೆ ಕೂಡಲೇ ರೈತರು ದೂರು ಸಲ್ಲಿಸಬಹುದು.
ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ
ಕನ್ನಡಪ್ರಭ ವಾರ್ತೆ ಕೂಡ್ಲಿಗಿರೈತರಿಗೆ ಬಿತ್ತನೆ ಮಾಡಲು ಗುಣಮಟ್ಟದ ಬೀಜ ವಿತರಣೆಗೆ ಕ್ರಮ ವಹಿಸಲಾಗುವುದು. ಒಂದು ವೇಳೆ ಬೀಜ ಕಳಪೆಯಾಗಿದ್ದರೆ ಕೂಡಲೇ ರೈತರು ದೂರು ಸಲ್ಲಿಸಬಹುದು. ಕೃಷಿ ಇಲಾಖೆಯ ಅಧಿಕಾರಿಗಳು ನಿಮ್ಮ ಹಿತಕಾಯಲು ಬದ್ಧ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕೆ.ವಾಮದೇವ ಕೊಳ್ಳಿ ತಿಳಿಸಿದರು.
ತಾಲೂಕಿನ ಗುಡೇಕೋಟೆ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು. ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಈವರಿಗೆ ಕಚೇರಿಯಿಂದ ವಿವಿಧ ಕಂಪನಿಯ ಮೆಕ್ಕಜೋಳ, ರಾಗಿ, ಸಜ್ಜೆ, ಜೋಳ, ಸೂರ್ಯಕಾಂತಿ, ತೋಗರಿ ಬೀಜ ನೀಡಲಾಗಿದ್ದು, ಎಲ್ಲವು ಚೆನ್ನಾಗಿ ಮೊಳಕೆ ಬಂದಿವೆ ಮತ್ತು ಬೀಜಗಳ ಬಗ್ಗೆ ಯಾವುದೇ ದೂರು ರೈತರಿಂದ ಬಂದಿಲ್ಲವೆಂದರು.ಈ ವರ್ಷ ಗುಡೇಕೋಟೆ ಹೋಬಳಿ ವ್ಯಾಪ್ತಿ ಉತ್ತಮ ಮುಂಗಾರು ಮಳೆ ಆರಂಭವಾಗಿದ್ದು, ಈ ಭಾಗದ ರೈತರು ಹೆಚ್ಚಾಗಿ ಶೇಂಗಾ ಬೆಳೆ ಬೆಳೆಯಲು ಬಯಸುತ್ತಾರೆ. ಅದಕ್ಕೆ ರೈತರ ಬೇಡಿಕೆಯಂತೆ ಅಗತ್ಯವಾಗಿ ಶೇಂಗಾ ಬೀಜ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದರು.ಈ ಸಂದರ್ಭ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಆಯ್ದ ರೈತರಿಗೆ ಶೇಂಗಾ, ಸಜ್ಜೆ, ರಾಗಿ, ನವಣೆ ಬೀಜ ವಿತರಿಸಿದರು. ಪೆಂಟ್ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯರಾದ ಬೊಮ್ಮಣ್ಣ, ಓಬಣ್ಣ, ರೈತ ಸಂಪರ್ಕ ಕಚೇರಿ ಕೃಷಿ ಅಧಿಕಾರಿ ಪುಷ್ಪಾ ಅಳ್ನಾವರ್, ಪವಿತ್ರ ಬನ್ನಿಕಲ್ಲು, ಶ್ರವಣಕುಮಾರ್, ಗೌತಮಕುಮಾರ್, ಶಿವಾನಂದ ಸೇರಿದಂತೆ ರೈತರು ಇದ್ದರು.