ಈ ಹಿಂದೆ ಹೊನ್ನಾಳಿ ತಾಲೂಕಿನಲ್ಲಿದ್ದ ನ್ಯಾಮತಿ ಅನಂತರದಲ್ಲಿ ಪ್ರತ್ಯೇಕ ತಾಲೂಕಾಗಿ ಬೇರ್ಪಟ್ಟಿದೆ. ಇದೀಗ ನೂತನವಾಗಿ ನ್ಯಾಮತಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾಸ ಸಂಘ ನಿ., (ಟಿಎಪಿಸಿಎಂಎಸ್) ಆರಂಭಗೊಂಡಿದೆ. ನ್ಯಾಮತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಟಿ.ಎ.ಪಿ.ಸಿ.ಎಂ.ಎಸ್. ಷೇರುದಾರರು, ಷೇರು ಹಣ ಹಾಗೂ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊನ್ನಾಳಿ ಟಿ.ಎ.ಪಿ.ಸಿ.ಎಂ.ಎಸ್.ನಿಂದ ವರ್ಗಾವಣೆ ಮಾಡಿಕೊಡುವ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೊನ್ನಾಳಿ ಸಂಘದ ನಿರ್ದೇಶಕರೂ ಆಗಿರುವ ಶಾಸಕ ಡಿ.ಜಿ.ಶಾಂತನಗೌಡ ಸಭೆಯಲ್ಲಿ ತಿಳಿಸಿದ್ದಾರೆ.
- ಹೊನ್ನಾಳಿ ಟಿಎಪಿಸಿಎಂಎಸ್ ಮಹಾಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಭರವಸೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈ ಹಿಂದೆ ಹೊನ್ನಾಳಿ ತಾಲೂಕಿನಲ್ಲಿದ್ದ ನ್ಯಾಮತಿ ಅನಂತರದಲ್ಲಿ ಪ್ರತ್ಯೇಕ ತಾಲೂಕಾಗಿ ಬೇರ್ಪಟ್ಟಿದೆ. ಇದೀಗ ನೂತನವಾಗಿ ನ್ಯಾಮತಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾಸ ಸಂಘ ನಿ., (ಟಿಎಪಿಸಿಎಂಎಸ್) ಆರಂಭಗೊಂಡಿದೆ. ನ್ಯಾಮತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಟಿ.ಎ.ಪಿ.ಸಿ.ಎಂ.ಎಸ್. ಷೇರುದಾರರು, ಷೇರು ಹಣ ಹಾಗೂ ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊನ್ನಾಳಿ ಟಿ.ಎ.ಪಿ.ಸಿ.ಎಂ.ಎಸ್.ನಿಂದ ವರ್ಗಾವಣೆ ಮಾಡಿಕೊಡುವ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೊನ್ನಾಳಿ ಸಂಘದ ನಿರ್ದೇಶಕರೂ ಆಗಿರುವ ಶಾಸಕ ಡಿ.ಜಿ.ಶಾಂತನಗೌಡ ಸಭೆಯಲ್ಲಿ ತಿಳಿಸಿದರು.ಶುಕ್ರವಾರ ಪಟ್ಟಣದ ಹೊನ್ನಾಳಿ ತಾ. ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ,ನಿಯಮಿತದ 2025-2026ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಧಾಟಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ನ್ಯಾಮತಿ ತಾಲೂಕಿನ ಟಿಎಪಿಸಿಎಂಎಸ್ ಅಧ್ಯಕ್ಷ ಗೌಡ್ರು ಆರ್. ಪ್ರವೀಣ್ ಅವರು ನೂತನವಾಗಿ ಆರಂಭಗೊಂಡಿರುವ ತಮ್ಮ ಸಂಘಕ್ಕೆ ಹಾಲಿ ಹೊನ್ನಾಳಿ ಸಂಘದಡಿ ನ್ಯಾಮತಿ ತಾಲೂಕಿನ ವ್ಯಾಪ್ತಿಯ ಷೇರುದಾರರು, ಷೇರು ಹಣ ,ಹಾಗೂ ಚರ ಮತ್ತು ಸ್ಥಿರ ಆಸ್ತಿಗಳನ್ನು ನ್ಯಾಮತಿ ಸಂಘಕ್ಕೆ ವರ್ಗಾಯಿಸಿಕೊಡಬೇಕು ಎಂದು ಶಾಸಕರಲ್ಲಿ ಬೇಡಿಕೆಯಿಟ್ಟರು. ಆಗ ಶಾಸಕರು ಈ ಬಗ್ಗೆ ಸ್ಪಷ್ಟನೆ ನೀಡಿ, ನ್ಯಾಮತಿ ತಾಲೂಕು ಇದೀಗ ತನ್ನದೇ ಆದ ಟಿಎಪಿಸಿಎಂಎಸ್ ಹೊಂದಿದೆ. ಅದರ ಅಧ್ಯಕ್ಷರ ಮನವಿಯಂತೆ ವರ್ಗಾಯಿಸಿಕೊಡುವ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಎ. ವರ್ಗದ ಸದಸ್ಯರಾದ ಟಿ.ಜಿ. ರಮೇಶ್ ಗೌಡ ಮಾತನಾಡಿ, ಸಂಘವು 2025-2026ನೇ ಸಾಲಿನಲ್ಲಿ ಒಟ್ಟಾರೆಯಾಗಿ ₹2.25 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ವತಿಯಿಂದ ರೈತರಿಗೆ ಎಂ.ಆರ್.ಪಿ. ದರಲ್ಲಿ ರಾಸಾಯನಿಕ ಗೊಬ್ಬರ ಮಾರಾಟ ಕೇಂದ್ರ ಹಾಗೂ ಕ್ರಿಮಿನಾಶಕ ಕೇಂದ್ರ ಇರುತ್ತದೆ. ಸಂಘದಿಂದ ಪಡಿತರ ಮಾರಾಟ ವ್ಯವಸ್ಥೆ ಕೂಡ ಇದ್ದು, ಸಂಘವು ಸುಸಜ್ಜಿತ ಕಟ್ಟಡಗಳನ್ನು ಮತ್ತು ಉಗ್ರಾಣಗಳನ್ನು ಹೊಂದಿದೆ ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಕೂಲಂಬಿ ರೇವಣಸಿದ್ದಪ್ಪ ಕೆ.ಜೆ. ಮಹಾಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಿ.ಎನ್. ಶಿವನಗೌಡ, ಎ ವರ್ಗದ ನಿರ್ದೇಶಕರಾದ ಎನ್.ಜಿ. ಮರುಳಸಿದ್ದಪ್ಪ, ಟಿ.ಜಿ. ರಮೇಶಗೌಡ, ಕೆ.ಜಿ.ರವಿಕುಮಾರ್, ಮನು ಎಸ್.ಜಿ., ಬಿ ವರ್ಗದ ನಿರ್ದೇಶಕರಾದ ಡಿ.ಜಿ.ಶಾಂತನಗೌಡ, ಜಿ.ಎಚ್.ತಮ್ಮಣ್ಣ, ಕುಮಾರ ಸ್ವಾಮಿ, ರಂಗಪ್ಪ, ಬಿ.ಬಸವರಾಜು, ಜಿ.ಪಿ.ಶೋಭಾ, ಎಂ.ಆರ್. ನಾಗರತ್ನ, ಸಹಕಾರ ಸಂಘಗಳ ಉಪ ನಿಬಂಧಕ ಕಿಶೋರ್ ಕುಮಾರ್ ಜೋಷಿ, ನಾಮನಿರ್ದೇಶನ ಸದಸ್ಯರಾದ ಎಚ್.ಬಸವರಾಜಪ್ಪ, ರಾಜು ಡಿ. ಸರಳಿನಮನೆ, ಮುಖ್ಯ ಕಾರ್ಯನಿರ್ವಾಹಕ ಜಿ.ಇ. ಮುರಿಗೇಶಪ್ಪ, ಸಿಬ್ಬಂದಿ ಗೋಪಿ, ಸುಧಾ, ಸುರೇಶ್, ಆರುಣ್ ಕುಮಾರ್ ಹಾಗೂ ಸಂಘದ ಸದಸ್ಯರು ಇದ್ದರು.- - -
-25ಎಚ್.ಎಲ್.ಐ2:ಹೊನ್ನಾಳಿ ಪಟ್ಟಣದ ಟಿಎಪಿಸಿಎಂಎಸ್ 2025-2026ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಧಾಟಿಸಿದರು.