ಕೆಶಿಫ್ ವತಿಯಿಂದ ಅಪಘಾತ ವಲಯಗಳನ್ನು ಗುರುತಿಸಿ ವಿಶೇಷವಾಗಿ ಸೌಂದರ್ಯೀಕರಣದ ಜೊತೆಗೆ ಪುಟ್‌ಪಾಥ್ ಸಮೇತವಾಗಿ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ.
ಮಳವಳ್ಳಿ: ತಾಲೂಕಿನ ಕಿರುಗಾವಲು ಸಂತೆ ಮೈದಾನದ ಮಳವಳ್ಳಿ- ಮೈಸೂರು ಮುಖ್ಯ ರಸ್ತೆಯನ್ನು ಅಪಘಾತ ರಹಿತ ವಲಯವನ್ನಾಗಿ ಮಾಡುವ ಜೊತೆಗೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲೂಕಿನ ಕಿರುಗಾವಲು ಸಂತೆ ಮೈದಾನದಲ್ಲಿ ಕೊರಟೆಗೆರೆ ಬಾವಲಿ ರಸ್ತೆ ಸುರಕ್ಷತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಕೆಶಿಫ್ ವತಿಯಿಂದ ಅಪಘಾತ ವಲಯಗಳನ್ನು ಗುರುತಿಸಿ ವಿಶೇಷವಾಗಿ ಸೌಂದರ್ಯೀಕರಣದ ಜೊತೆಗೆ ಪುಟ್‌ಪಾಥ್ ಸಮೇತವಾಗಿ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿಯೇ ಅತ್ಯಂತ ಪ್ರಖ್ಯಾತಿ ಹೊಂದಿರುವ ಕಿರುಗಾವಲು ಸಂತೆ ಮೈದಾನವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.ತಾಲೂಕಿನ ಹುಸ್ಕೂರು ಹಾಗೂ ಅಗಸನಪುರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಉದ್ಘಾಟಿಸಲಾಗಿದೆ ಎಂದರು.
ಈ ವೇಳೆ ಮನ್ಮುಲ್ ನಿರ್ದೇಶಕರಾದ ಕೃಷ್ಣೇಗೌಡ, ಆರ್.ಎನ್.ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಗ್ರಾಪಂ ಅಧ್ಯಕ್ಷೆ ಇನಿಯತ್ ಕಾತೂನ್, ಉಪಾಧ್ಯಕ್ಷ ಮಾದೇಗೌಡ, ಮುಖಂಡರಾದ ಕೃಷ್ಣಮೂರ್ತಿ, ಮಹೇಶ್, ಮಸೂದ್, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಗ್ರಾಪಂ ಸದಸ್ಯರು ಹಾಗೂ ಮುಖಂಡರು ಇದ್ದರು.