ಜನರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಲು ಕ್ರಮ: ಮರಿರಾಮಣ್ಣ

| Published : Feb 18 2025, 12:31 AM IST

ಜನರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸಲು ಕ್ರಮ: ಮರಿರಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಜನತೆಯ ಕಚೇರಿ ಅಲೆದಾಟ ತಪ್ಪಿಸುವ ಹಿನ್ನೆಲೆ ಫಾರಂ ನಂ.೩ ಮೇಳ ಹಮ್ಮಿಕೊಳ್ಳಲಾಗಿದೆ.

ಫಾರಂ ನಂ.೩ ವಿತರಣೆ ಮೇಳಕ್ಕೆ ಪುರಸಭೆ ಅಧ್ಯಕ್ಷ ಚಾಲನೆ

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ಪಟ್ಟಣದ ಜನತೆಯ ಕಚೇರಿ ಅಲೆದಾಟ ತಪ್ಪಿಸುವ ಹಿನ್ನೆಲೆ ಫಾರಂ ನಂ.೩ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ಫಾರಂ ನಂ.೩ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಡಳಿತ ಯಂತ್ರ ಸುಗಮಗೊಳಿಸಿ, ಜನರ ಮನೆಬಾಗಿಲಿಗೆ ಸೌಲಭ್ಯ ಒದಗಿಸುವ ಹಿನ್ನೆಲೆ ಫಾರಂ ನಂ.೩ ವಿತರಣೆ ಮೇಳ ಹಮ್ಮಿಕೊಳ್ಳಲಾಗಿದೆ. ಪ್ರಚಾರಕ್ಕಿಂತಲೂ ತ್ವರಿತ ಸೇವೆಗೆ ಆದ್ಯತೆ ನೀಡಲಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಮುಕ್ತಿವಾಹನ, ಸೇತುವೆಗೆ ಲೈಟಿಂಗ್, ಎಲ್ಲೆಡೆಯೂ ಹೈಮಾಸ್ಟ್ ದೀಪ ಸೇರಿದಂತೆ ಹಲವು ಪ್ರಮುಖ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ಮಾತನಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಫಾರಂ ೩ಯನ್ನು ವಿತರಿಸಲಾಗುತ್ತಿದೆ. ಜಿಲ್ಲಾಧಿಕಾರಿ ಆಶಯದಂತೆ ಮೇಳ ಹಮ್ಮಿಕೊಳ್ಳಲಾಗಿದ್ದು, ಇದರಿಂದ ನೂರಾರು ಜನರಿಗೆ ಉಪಯೋಗವಾಗುತ್ತಿದೆ ಎಂದರು.

ಮೇಳದಲ್ಲಿ ಒಟ್ಟು ೮೦ಕ್ಕೂ ಹೆಚ್ಚು ಜನರಿಗೆ ಫಾರಂ ನಂ.೩ ವಿತರಿಸಲಾಯಿತು. ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಜೋಗಿ ಹನುಮಂತಪ್ಪ, ಅಜೀಜುಲ್ಲಾ, ಕಂದಾಯ ಅಧಿಕಾರಿ ಮಾರೆಣ್ಣ ಮಾತನಾಡಿದರು.

ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಸದಸ್ಯರಾದ ನವೀನ್‌ಕುಮಾರ್, ಮಂಜುಳಾ ಕೃಷ್ಣನಾಯ್ಕ, ನೇತ್ರಾವತಿ ಸೆರೆಗಾರ ಹುಚ್ಚಪ್ಪ, ನಾಗರಾಜ ಜನ್ನು, ದೀಪಕ್, ದಾದಾಪೀರ್, ತ್ಯಾವಣಗಿ ಕೊಟ್ರೇಶ್, ಉಪ್ಪಾರ್ ಬಾಳಪ್ಪ, ಮಾಜಿ ಸದಸ್ಯರಾದ ಅಲ್ಲಾಭಕ್ಷಿ, ಡಿಶ್ ಮಂಜುನಾಥ, ಮುಖಂಡರಾದ ಸಿಖಂದರ್ ಖಾನ್, ವಿಜಯಕುಮಾರ್ ಇದ್ದರು. ಕಂದಾಯ ಅಧಿಕಾರಿ ಮಾರುತಿ, ವ್ಯವಸ್ಥಾಪಕ ಚಂದ್ರಶೇಖರ ನಿರ್ವಹಿಸಿದರು.