ಸಾರಾಂಶ
ಕಗ್ಗಲಡ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ದಲಿತ ಯುವಕರಲ್ಲಿ ವ್ಯಸನ ಹೆಚ್ಚಳ , ಗ್ರಾಮದಲ್ಲಿ ಐದು ಕಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಅಬಕಾರಿ ಮತ್ತು ಪೊಲೀಸ್ ಇಲಾಖೆ ಪ್ರಮುಖ ಕೈಗೊಳ್ಳುವಂತೆ ಮಹಿಳೆಯರು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿರಾ
ಕಗ್ಗಲಡ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ದಲಿತ ಯುವಕರಲ್ಲಿ ವ್ಯಸನ ಹೆಚ್ಚಳ , ಗ್ರಾಮದಲ್ಲಿ ಐದು ಕಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಅಬಕಾರಿ ಮತ್ತು ಪೊಲೀಸ್ ಇಲಾಖೆ ಪ್ರಮುಖ ಕೈಗೊಳ್ಳುವಂತೆ ಮಹಿಳೆಯರು ಒತ್ತಾಯಿಸಿದರು.ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಕಗ್ಗಲಡ ಗ್ರಾಮದಲ್ಲಿ ಸರಕಾರಿ ಶಾಲೆ, ಮುಂಭಾಗ ಹಾಗೂ ಹಲವಾರು ಅಂಗಡಿಗಳಲ್ಲಿ ಅಕ್ರಮ ಮಧ್ಯೆ ಮಾರಾಟ ನಿರಂತರವಾಗಿ ನಡೆಯುತ್ತಿದ್ದು, ದುಡಿಮೆಯನೇ ನಂಬಿ ಬದುಕುತ್ತಿರುವ ದಲಿತ ಕುಟುಂಬದ ಯುವಕರು ದುಡಿಮೆಯನ್ನು ಕುಡಿತದ ಚಟಕ್ಕೆ ಖರ್ಚು ಮಾಡಿ ಕುಟುಂಬಗಳಲ್ಲಿ ನೆಮ್ಮದಿ ಇಲ್ಲದಂತೆ ಮಾಡುತ್ತಿದ್ದಾರೆ. ಹೆತ್ತ ತಂದೆ ತಾಯಿಯನ್ನೇ ಹೊಡೆಯುವಂತಹ ಸ್ಥಿತಿ ಈ ಕುಣಿತದ ಚಟದಿಂದ ನಿರ್ಮಾಣವಾಗಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಲಕ್ಷ್ಮಮ್ಮ ಒತ್ತಾಯಿಸಿದ್ದಾರೆ.
ಈ ಬಗ್ಗೆ ಅಬಕಾರಿ ಮತ್ತು ಪೊಲೀಸ್ ಇಲಾಖೆ ಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ, ಇಲಾಖೆಗಳು ಕೂಡ ಅಕ್ರಮ ಮದ್ಯ ಮಾರಾಟಗಾರರಿಗೆ ಕುಮ್ಮಕ್ಕು ನೀಡುತ್ತವೆ ಎಂದರು. ಈ ಸಂದರ್ಭದಲ್ಲಿ ಮೀನಾಕ್ಷಿ, ಕಮಲಮ್ಮ, ಕಾವ್ಯ,ರತ್ನಮ್ಮ, ನಿಂಗಮ್ಮ, ಮಂಜಮ್ಮ, ಜಯಶ್ರೀ, ನರಸಿಂಹರಾಜು ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))