ಸಾರಾಂಶ
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಹೋಗ್ರಿ, ಮೊದಲು ಅನಧಿಕೃತ ಕಟ್ಟಡ ಕಾಮಗಾರಿ ನಿಲ್ಲಿಸಿ ಎಂದು ನಗರಸಭೆ ಆಯುಕ್ತ ರಮೇಶ್‌ಗೆ ಶಾಸಕ ಎ. ಆರ್. ಕೃಷ್ಣಮೂರ್ತಿ ಸೂಚಿಸಿದರು.ಇಲ್ಲಿನ ನಗರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸದಸ್ಯೆ ಸುಮ ಸುಬ್ಬಣ್ಣ ಅವರ ವಾರ್ಡ್‌ನಲ್ಲಿ ಸಾಯಿಬಾಬ ದೇವಸ್ಥಾನ ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಡ ಕಾಮಗಾರಿಯೊಂದು ನಗರಸಭೆ ಅನುಮತಿ ಪಡೆಯದೆ ನಡೆಯುತ್ತಿದ್ದರೂ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ. ಈ ಕಟ್ಟಡದ ಮೂಲ ದಾಖಲೆ ನನ್ನ ಬಳಿ ಇದೆ. ಅಕ್ರಮವಾಗಿ ಕಟ್ಟಡ ಕಟ್ಟುತ್ತಿದ್ದರೂ ನೀವು ಏಕೆ ಸ್ಥಗಿತಕ್ಕೆ ಮುಂದಾಗಿಲ್ಲ. ಕೂಡಲೇ ಅನಧಿಕೃತ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿ, ಹೋಗ್ರಿ ಮೊದಲು ಅನಧಿಕೃತ ಕಾಮಗಾರಿ ನಿಲ್ಲಿಸಿ ಎಂದು ತರಾಟೆ ತೆಗೆದುಕೊಂಡರು.
ನಿಮ್ಮ ಆಡಳಿತದಲ್ಲಿ ಬಿಗಿ ಇದ್ದಂತೆ ಕಾಣುತ್ತಿಲ್ಲ. ಕೆಲಸ, ಕಾರ್ಯಗಳಲ್ಲಿ ಹಿಡಿತವೂ ಇಲ್ಲದಾಗಿದೆ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಾಗುತ್ತಿದೆ ಇಲ್ಲಿನ ಪರಿಸ್ಥಿತಿ. ಇಲ್ಲೆ ಕುಳಿತ 3 ಮಂದಿ ಇದಕ್ಕೆಲ್ಲ ಸಹಕಾರ, ಸಾಥ್ ನೀಡುತ್ತಿದ್ದಾರೆ. ಎಂಬ ಮಾಹಿತಿ ನನ್ನ ಬಳಿ ಇದೆ. ಆ ಹೆಸರನ್ನು ಹೇಳಬೇಕಾ?. ಕೂಡಲೇ ಅನಧಿಕೃತ ಕಟ್ಟಡ ಕಾಮಗಾರಿ ನಿಲ್ಲಿಸಿ ಎಂದರು. ಈ ವೇಳೆ ಮದ್ಯ ಪ್ರವೇಶಿಸಿದ ಸದಸ್ಯ ಮನೋಹರ್ ಅದೊಂದೆ ಕಟ್ಟಡದ ಬಗ್ಗೆ ಪ್ರಶ್ನಿಸುತ್ತಿದ್ದೀರಿ. ಸಾಕಷ್ಟು ಅನಧಿಕೃತ ಕಟ್ಟಡ ನಿರ್ಮಾಣವಾಗಿವೆ ಎಂದರು. ಪ್ರತಿಕ್ರಿಯಿಸಿದ ಶಾಸಕರು ನನಗೆ ಈ ಬಗ್ಗೆ ಒಬ್ಬರು ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದಕ್ಕೆ ಹೇಳಿದ್ದೇನೆ, ಅನಧಿಕೃತ ಕಟ್ಟಡ ಎಂದಾದರೆ ಕೂಡಲೇ ನಿಲ್ಲಿಸಲಿ ಎಂದರು.ಶಾಸಕರು ಹಾಗೂ ಮನೋಹರ್ ಚರ್ಚೆ ಜೋರಾಗಿ ನಡೆಯಿತು. ನಾನು ಇಲ್ಲಿಂದ ಎದ್ದು ಹೋಗಬೇಕಾ ಮನೋಹರ್ ಎಂದು ಶಾಸಕರು ಪ್ರಶ್ನಿಸುತ್ತಿದ್ದಂತೆ ಸದಸ್ಯ ಮನೋಹರ್ ಬೇಡ ಸಾರ್ ನಾನೇ ಬೇಕಾದರೆ ಹೋಗುವೆ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ಚರ್ಚೆಗೆ ತೆರೆ ಬಿತ್ತು.
14 ಖಾತೆ ನೀಡಿದ ಪ್ರಕರಣ, ತನಿಖೆಗೆ ನಿರ್ಣಯ: ಡಾ. ರಾಜ್‌ಕುಮಾರ್ ಮತ್ತು ಅಂಬೇಡ್ಕರ್ ರಸ್ತೆ ಅಗಲಿಕರಣಕ್ಕೆ ಈಗಾಗಲೇ ನಗರಸಭೆ ತೀರ್ಮಾನವಾಗಿದ್ದರೂ ಏಕೆ ಆ ಭಾಗದ ನಿವಾಸಿಗಳಿಗೆ 15 ಇಸ್ವತ್ತುಗಳನ್ನು ನವೀಕರಿಸಿ ನೀಡಲಾಗಿದೆ. ಇದು ಸರಿಯಾದ ಕ್ರಮವಲ್ಲ, ಈ ಸಂಬಂಧ ಸಮಗ್ರ ತನಿಖೆಯಾಗಲಿ ಎಂದು ಶಾಸಕ ಎ. ಆರ್. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.ರಸ್ತೆ ಅಗಲಿಕರಣ ನಿರ್ಣಯದ ಬೆನ್ನಲ್ಲೆ 15 ಇ ಸ್ವತ್ತು ನೀಡುವ ಅಗತ್ಯತೆ ಏನಿತ್ತು? ಇದರ ಹೊಣೆ ಯಾರ ಹೊರಬೇಕು , ಶೌಚಾಲಯ ಐಡಿಎಸ್ ಎಂಟಿ ಮಳಿಗೆ ವಿಚಾರದಲ್ಲೂ ಲೋಪವಾಗುತ್ತಿದೆ ಎಂದು ಪೌರಾಯುಕ್ತ ರಮೇಶ್ ಅವರನ್ನು ಪ್ರಶ್ನಿಸಿದರು.ಸದಸ್ಯ ಜಯಮರಿ ಮಾತನಾಡಿ, ರಸ್ತೆ ಅಗಲಿಕರಣ ತೀಮಾನವಾಗಿದ್ದರೂ ಖಾತೆ ನೀಡಿರುವ ವಿಚಾರ ಸರಿಯಲ್ಲ, ಯಾವ ಅಧಿಕಾರಿಗಳು ಇದನ್ನ ಮಾಡಿದ್ರು ತನಿಖೆಯಾಗಲಿ ಎಂದರು. ಇದಕ್ಕೆ ಧ್ವನಿಗೂಡಿಸಿದ ಪ್ರಶಾಂತ್, ಸುಶೀಲ, ಎ. ಪಿ. ಶಂಕರ್, ಸ್ವಾಮಿನಂಜಪ್ಪ, ಅನ್ಸರ್ ಇನ್ನಿತರ ಸದಸ್ಯರು ಕೂಡಲೇ ಖಾತೆ ರದ್ದಾಗಲಿ, ಸಭೆಯ ನಿರ್ಣಯಕ್ಕೆ ಏಕೆ ವಿರುದ್ಧವಾಗಿ ಖಾತೆ ಮಾಡಲಾಗಿದೆ ಎಂದರು.ಸದಸ್ಯ ಜಿ. ಪಿ ,ಶಿವಕುಮಾರ್ ಮಾತನಾಡಿ, ನಾಗಮಂಜುನಾಥ್ ಎಂಬುವರು ಕಳೆದ ಅರೇಳು ತಿಂಗಳಿಂದಲೂ ನಗರಸಭೆಗೆ ಟ್ರೇಡ್ ಲೈಸನ್ಸ್ ಗಾಗಿ ಅಲೆಯುತ್ತಿದ್ದರು, ಅವರಿಗೆ ಟ್ರೇಡ್ ಲೈಸನ್ಸ್ ನೀಡಬೇಕಾದರೆ ಇ ಸ್ವತ್ತು ಕಡ್ಡಾಯ, ಅವರು ಮನವಿ ಮಾಡಿದ ಹಿನ್ನೆಲೆ ಇ ಸ್ವತ್ತು ನವಿಕರಣ ಮಾಡಲಾಗಿದೆ, ಆದರೆ ಇಲ್ಲಿ ಅಕ್ರಮವಾಗಿ ಇ ಸ್ವತ್ತು ನೀಡಿಲ್ಲ, ಅಲ್ಲದೆ ಸರ್ಕಾರಿ ಜಾಗಕ್ಕೆ ಇ ಸ್ವತ್ತು ನೀಡಿ ಲೋಪವಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಉಪಾಧ್ಯಕ್ಷ ಎ .ಪಿ. ಶಂಕರ್ ಮಾತನಾಡಿ, ಬೆಲ್ಲದ ನಾಗೇಂದ್ರಗೆ ಖಾತೆ ನೀಡಿದ್ದಕ್ಕೆ ನೀವೇ ಆಕ್ಷೇಪ ವ್ಯಕ್ತಪಡಿಸಿದ್ದಿರಿ. ಈಗ ನೀವು ಮಾಡಿದ್ದು ಸರಿನಾ? ಎಂದು ಪ್ರಶ್ನಿಸಿದರುಇದಕ್ಕೆ ಉತ್ತರಿಸಿದ ಶಿವಕುಮಾರ್, ಅಂದು ನೀವು ಮಾಡಿದ್ದು ಅಕ್ರಮ. ಏಕ ನಿವೇಶನಕ್ಕೆ ಬಹುನಿವೇಶನ ಮಾಡಿದ್ದು ನಿಮ್ಮ ಲೋಪ. 8 ಖಾತೆ ವಿಚಾರದಲ್ಲಿ ಸದಸ್ಯರೊಬ್ಬರು ಮಾಲೀಕರಿಂದ 1 ಖಾತೆಗೆ ₹1 ಲಕ್ಷ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು.ಸದಸ್ಯ ಪ್ರಶಾಂತ್ ಮಾತನಾಡಿ, ಇಲ್ಲಿ ವಿಷಯಾಂತರ ಬೇಡ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಖಾತೆ ರದ್ದುಮಾಡಿ ಕ್ರಮವಹಿಸಿ ಎಂದು ಆಗ್ರಹಿಸಿದರು.ನಾಮನಿರ್ದೇಶನ ಸದಸ್ಯ ಶಿವಮಲ್ಲು ಮಾತನಾಡಿ, ಕೆಲವರು ವಿಷ ಕುಡಿಯುತ್ತೇನೆ ಅಂದರು. ಆಯುಕ್ತರು ಖಾತೆ ಮಾಡಿರಲಿಲ್ಲ, ಯಾರೊ ಅತ್ತರು ಎಂದು ಖಾತೆ ಮಾಡಿದ ಕ್ರಮ ಸರಿಯಲ್ಲ, ತನಿಖೆಯಾಗಲಿ, ಯಾರಾದರೂ ತಲೆದಂಡವಾಗಲಿ ಎಂದು ಆಗ್ರಹಿಸಿದರುನಗರಸಭೆಯಲ್ಲಿ ಬಲಾಡ್ಯ ಸದಸ್ಯರ ಕೆಲಸ ಆಗುತ್ತೆ, ಅವರೇ ಒತ್ತಡ ನೀಡಿ ಕೆಲಸ ಮಾಡಿಸುತ್ತಾರೆ, ಇದರಿಂದ ಕೆಲ ಅಧಿಕಾರಿಗಳ ತಲೆ ದಂಡವಾಗುತ್ತೆ, ಸಾರ್ವಜನಿಕರ ಕೆಲಸ ನಡೆಯುತ್ತಿಲ್ಲ ಎಂದು ದೂರಿದರು.
ಸಭೆಗೆ ಮಾಹಿತಿ ನೀಡಿದ ಪೌರಾಯುಕ್ತರು, 8 ಖಾತೆ ಮಾಲೀಕರು ಕಂದಾಯ ಪಾವತಿಸಿದ ಹಿನ್ನೆಲೆ ಮುಂದೆ ತೊಂದರೆಯಾಗಬಾರದೆಂಬ ಹಿನ್ನೆಲೆ ಖಾತೆ ನೀಡಲಾಗಿದೆ. ಆದೆರ ಕಳೆದ ಸಭೆಯಲ್ಲಿ ಆ ರಸ್ತೆಗೆ ಸಂಬಂಧಿಸಿದ ಜಾಗಗಳಿಗೆ ಖಾತೆ ನೀಡಬಾರದೆಂಬ ನಿರ್ಣಯ ಮಾಡಿಲ್ಲ, ಅವುಗಳು ಅಕ್ರಮ ಖಾತೆಯಲ್ಲ, ಈಗ ನಿರ್ಣಯ ಮಾಡಿದ್ರೆ ಮುಂದೆ ಎರಡು ರಸ್ತೆಗಳಲ್ಲಿರುವ ಯಾವುದೇ ಆಸ್ತಿಗೂ ಇಸ್ವತ್ತು ನೀಡಲ್ಲ ಎಂದರು.24 ಗಂಟೆ ಕುಡಿಯುವ ನೀರಿನ ಪೂರೈಕೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ₹67 ಕೋಟಿ ಕಾಮಗಾರಿ ಪೈಕಿ ₹59 ಕೋಟಿಗೆ ಟೆಂಡರ್ ಪ್ರಕ್ರಿಯೆ ಕೈಗೊಂಡ ಕಂಪನಿ ಪೂರ್ಣ ಕಾಮಗಾರಿ ಮಾಡಿಲ್ಲ, ಮಾಡಿದ ತಕ್ಷಣ ₹4 ಕೋಟಿ ಬಾಕಿ ನೀಡುವಂತೆ ಚರ್ಚೆಯಾಯಿತು. ಕಂಪನಿ ಸಹ ಮುಖ್ಯಸ್ಥ ಚಂದನ್ ಮಾತನಾಡಿ, ಆಗಬೇಕಾದ ಕಾಮಗಾರಿ ಮಾಡುತ್ತೇವೆ, ಈಗ ನಮ್ಮ ಬಳಿ ಹಣವಿಲ್ಲ ಬಾಕಿ ಹಣ ಕೊಡಿಸಿ ಎಂದರು.
ಇದಕ್ಕೆ ಶಾಸಕರು ಒಪ್ಪಲಿಲ್ಲ, ಚರ್ಚೆ ಬಳಿಕ ಕೊಳ್ಳೇಗಾಲದ ನಿವಾಸಿಗಳು ಕುಡಿಯುವ ನೀರಿಗೆ ಮನೆಯೊಂದಕ್ಕೆ ₹120 ಗೖಹೇತರ ಬಳಕೆ ಮತ್ತು ವಾಣಿಜ್ಯ ಬಳಕೆಗಾಗಿ ಮೀಟರ್ ದರದಲ್ಲೆ ಹಣ ಪಾವತಿಸಬೇಕು.