ಸಾರಾಂಶ
ರಾಜ್ಯಮಟ್ಟದ ಮಕ್ಕಳ ಗೋಷ್ಠಿ ಉದ್ಘಾಟನೆಕನ್ನಡಪ್ರಭ ವಾರ್ತೆ ಯಲ್ಲಾಪುರ
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಿ ನಮ್ಮ ಪುರಾಣ ಕಥನಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವುದು ಉತ್ತಮವಾದ ಕೆಲಸ. ಕಥೆ, ಕಾದಂಬರಿಗಳು ಮಾತ್ರ ಸಾಹಿತ್ಯವಲ್ಲ; ಪುರಾಣ, ಇತಿಹಾಸಗಳೂ ಸಹ ಸಾಹಿತ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಹೇಳಿದರು.ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಇಂದು ನಡೆಯುವ ಮಕ್ಕಳ ಗೋಷ್ಠಿ ಕೇವಲ ಮಕ್ಕಳಿಗೆ ಮಾತ್ರವಲ್ಲ ಪಾಲಕರು, ಆಯೋಜಕರು ಎಲ್ಲರೂ ಪಾಲ್ಗೊಳ್ಳುವಂತೆ ಮಾಡಿದೆ. ಸೀತಾನುಸಂಧಾನದ ಮೂಲಕ ರಾಮಾಯಣ ಕಥನ ಓದುವ ಆಸಕ್ತಿಯನ್ನು ರಾಜ್ಯದ ಹಲವಾರು ಜನರಲ್ಲಿ ಮೂಡಿಸಿದೆ. ಇದು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರನ್ನು ತಲುಪುವಂತಾಗಲಿ ಎಂದರು.ಅ.ಭಾ.ಸಾ.ಪ.ದ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ಮಾತನಾಡಿದರು.
ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ಅಧ್ಯಕ್ಷ ವಿ.ವಿ. ಜೋಶಿ ವೇದಿಕೆಯಲ್ಲಿದ್ದರು. ನಂತರ ನಡೆದ ಸೀತಾನುಸಂಧಾನ ಮಕ್ಕಳ ಗೋಷ್ಠಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ೨೦ ಶಾಲೆಗಳ ಮಕ್ಕಳು ವಾಲ್ಮೀಕಿ ರಾಮಾಯಣದ ಸೀತೆಯ ಕುರಿತು ಮಾತನಾಡಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವರೆ, ಕವಿ ಕೃಷ್ಣ ಪದಕಿ, ಡಾ. ರಾಮರಾಜು ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು. ಗೋಷ್ಠಿಯ ಗೀತೆಯನ್ನು ಸಿಂದೂರ ಗಿರಣಿಮನೆ, ಅವನಿ ಕೇಸರಕರ್, ಶ್ರಾವಣೀ ಭಟ್ಟ ಹಾಡಿದರು. ಮಕ್ಕಳಾದ ಪುಷ್ಕರಾ, ಕೆ.ಎನ್. ದೀಪಿಕಾ ಭಟ್ಟ, ಆದ್ಯಾ ಹೆಗಡೆ ಮತ್ತು ಪುಷ್ಪಾ ಹೆಗಡೆ, ಸುಜಾತಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ ಶಾಸ್ತ್ರಿ ಉಮ್ಮಚಗಿ ವಂದಿಸಿದರು.ಮಕ್ಕಳಲ್ಲಿ ಉತ್ತಮ ಚಿಂತನೆ ಬೆಳೆಸಿ:
ಆಧುನಿಕ ಕಾಲಘಟ್ಟದಲ್ಲಿ ನಾವಿದ್ದೇವೆ. ಯಾಂತ್ರಿಕ ವ್ಯವಸ್ಥೆಯನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕು. ಮಕ್ಕಳಿಗೆ ಮೊಬೈಲ್ ನೋಡಬೇಡಿ ಎಂದರೆ ಕೇಳೋದಿಲ್ಲ. ಅವರ ಮನಸ್ಸಿಗೆ ಉತ್ತಮ ಸಂಸ್ಕಾರ ನೀಡುವಂತಹ ಚಿಂತನೆಯನ್ನು ನಾವು ನೀಡಬೇಕು ಎಂದು ಯಕ್ಷಗಾನ ಅರ್ಥದಾರಿ ದಿವಾಕರ ಹೆಗಡೆ ಕೆರೆಹೊಂಡ ಹೇಳಿದರು.ಯಲ್ಲಾಪುರದ ಉಮ್ಮಚಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಗೋಷ್ಠಿಯ ಸಮಾರೋಪ ಭಾಷಣ ಮಾಡಿದರು.ಉತ್ತಮ ಚಿಂತಕರ ಚಿಂತನೆಗಳಾದ ರಾಮಾಯಣ, ಮಹಾಭಾರತ ಸೇರಿದಂತೆ ಹಲವು ಪ್ರವಚನಗಳು ಮೊಬೈಲ್‌ನಲ್ಲಿ ಸಿಗುತ್ತವೆ. ಶತಾವಧಾನಿ ಆರ್.ಗಣೇಶರ ೬೦ಕ್ಕೂ ಹೆಚ್ಚು ರಾಮಾಯಣ ಕುರಿತ ಉಪನ್ಯಾಸಗಳು ಲಭ್ಯವಿದೆ. ಅನೇಕ ಕವಿಗಳ ರಾಮಾಯಣವನ್ನೂ ಮೊಬೈಲ್‌ನಲ್ಲಿ ಓದಬಹುದು. ಅಲ್ಲದೇ, ಉತ್ತಮ ಶಾಸ್ತ್ರೀಯ ಸಂಗೀತ, ತಾಳಮದ್ದಲೆ, ಅಂತಹ ಪ್ರಭಾವಪೂರ್ಣ ಚಿಂತನೆಗಳನ್ನು ಮಕ್ಕಳ ಮನಸ್ಸಿಗೆ ತಲುಪಿಸುವ ಕಾರ್ಯವನ್ನು ಪಾಲಕರು ಮಾಡಿದಾಗ ಅವರು ಅಗಾಧವಾಗಿ ಬೆಳೆಯಲು ಸಾಧ್ಯ ಎಂದರು.ಅ.ಭಾ.ಸಾ.ಪ. ರಾಜ್ಯಾಧ್ಯಕ್ಷ ಎಸ್.ಜಿ. ಕೋಟಿ ಅಧ್ಯಕ್ಷತೆ ವಹಿಸಿದ್ದರು. ಅ.ಭಾ.ಸಾ.ಪ. ಕಾರ್ಯಕಾರಿಣಿ ಸದಸ್ಯ ಜಗದೀಶ ಭಂಡಾರಿ ಮಾತನಾಡಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವರೆ, ಕವಿ ಕೃಷ್ಣ ಪದಕಿ, ಡಾ. ರಾಮರಾಜು ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು. ಗೋಷ್ಠಿಯ ಗೀತೆಯನ್ನು ಸಿಂಧೂರ ಗಿರಣಿಮನೆ, ಅವನಿ ಕೇಸರಕರ್, ಶ್ರಾವಣೀ ಭಟ್ಟ ಹಾಡಿದರು. ಮಕ್ಕಳಾದ ಪುಷ್ಕರಾ, ಕೆ.ಎನ್. ದೀಪಿಕಾ ಭಟ್ಟ, ಆದ್ಯಾ ಹೆಗಡೆ ಮತ್ತು ಪುಷ್ಪಾ ಹೆಗಡೆ, ಸುಜಾತಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ ಶಾಸ್ತ್ರಿ ಉಮ್ಮಚಗಿ ವಂದಿಸಿದರು.