ಸಾರಾಂಶ
ಭಾರೀ ಮಳೆಗೆ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮಂಡ್ಯ: ನಗರದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆ, ಕಲ್ಲಹಳ್ಳಿಯ ಶ್ರೀ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಒಂದೊಂದು ಮರ ಉರುಳಿ ಬಿದ್ದಿದ್ದರೆ, ಕಿರಗಂದೂರು ರಸ್ತೆ ಬಳಿ ಹೆದ್ದಾರಿಯಲ್ಲಿ ಅಳವಡಿಸಿರುವ ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಸ್ವಾಗತ ಕಮಾನು ಕುಸಿದುಬಿದ್ದಿದೆ. ಅಲ್ಲದೆ ಹೊಳಲು ವಿ.ಸಿ. ಫಾರಂ ರಸ್ತೆಯಲ್ಲಿ ಮರ ಹಾಗೂ ಹೈಟೆಕ್ಷನ್ ವಿದ್ಯುತ್ ಕಂಬ, ಧರಶಾಹಿಯಾಗಿವೆ. ಶ್ರೀರಂಗಪಟ್ಟಣ ಗಣಗೂರು ಬಳಿಯ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಿದ್ಯುತ್ ಕಂಬ ರಸ್ತೆಗೆ ಬಿದ್ದ ಹೈ ಟೆಕ್ಷನ್ ವೈರ್ ನಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿ ಸವಾರರು ಪರದಾಡಿದರು. ಕಂಬದಲ್ಲಿದ್ದ ರಾಡ್‌ಗಳನ್ನು ಕಳ್ಳತನ ಮಾಡಿರುವುದರಿಂದ ಸಡಿಲಗೊಂಡಿರುವ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.