ಬೀಡಾಡಿ ಜಾನುವಾರುಗಳನ್ನು ಗೋಶಾಲೆಗೆ ದಾಖಲಿಸಬೇಕು: ಸಚಿವ ವೆಂಕಟೇಶ್‌ ಸೂಚನೆ

| Published : Jan 31 2025, 12:48 AM IST

ಬೀಡಾಡಿ ಜಾನುವಾರುಗಳನ್ನು ಗೋಶಾಲೆಗೆ ದಾಖಲಿಸಬೇಕು: ಸಚಿವ ವೆಂಕಟೇಶ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಬಿಡಾಡಿ ಜಾನುವಾರುಗಳನ್ನು ಗೋಶಾಲೆಗೆ ದಾಖಲಿಸಿಕೊಳ್ಳದ ಸಂಸ್ಥೆಗಳಿಗೆ ಸರ್ಕಾರದ ಸವಲತ್ತು ಹಾಗೂ ಅನುದಾನ ತಡೆ ಹಿಡಿಯಲಾಗುವುದು ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಸೇರಿಸಿಕೊಳ್ಳದಿದ್ದಲೆ ಅನುದಾನ ತಡೆ ಹಿಡಿಯಲಾಗುವುದು, ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಸೂಚನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಬಿಡಾಡಿ ಜಾನುವಾರುಗಳನ್ನು ಗೋಶಾಲೆಗೆ ದಾಖಲಿಸಿಕೊಳ್ಳದ ಸಂಸ್ಥೆಗಳಿಗೆ ಸರ್ಕಾರದ ಸವಲತ್ತು ಹಾಗೂ ಅನುದಾನ ತಡೆ ಹಿಡಿಯಲಾಗುವುದು ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಏರ್ಪಡಿಸಿದ್ಧ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ವರದಿ ಪ್ರಕಾರ 800ಕ್ಕೂ ಹೆಚ್ಚು ರಾಸುಗಳು ಸಾವಪ್ಪಿರುವುದು ವರದಿಯಾಗಿದೆ. ಕೆಲವು ಹೊಟ್ಟೆ ಉಬ್ಬಿನಿಂದ, ರಸ್ತೆ ಬದಿ ಪ್ಲಾಸ್ಟಿಕ್ ಹಾಗೂ ಸಣ್ಣಪುಟ್ಟ ಸಮಾರಂಭದ ತ್ಯಾಜ್ಯಗಳ ಸೇವನೆಯಿಂದ ರಾಸುಗಳು ಸಾವನ್ನಪ್ಪಿರುವ ಪ್ರಕರಣ ವರದಿಯಾದ ಕಾರಣ ಸರ್ಕಾರಿ ಅಥವಾ ಖಾಸಗಿ ಗೋಶಾಲೆಗಳಲ್ಲಿ ದಾಖಲಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ರಸ್ತೆಗಳಲ್ಲಿ ಹಸುಗಳ ಓಡಾಟದಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಲಿದೆ. ಅಲ್ಲದೇ ಅನೇಕ ಅಪಘಾತಗಳು ಸಂಭವಿಸುತ್ತಿರುವ ಕಾರಣ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಗೋಶಾಲೆಗೆ ಬಿಡಬೇಕು. ಹಸುಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವ ಸಂಸ್ಥೆಗಳಿಗೆ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯ ಕಡಿತಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಕಡೂರು ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಹಾಲಿನ ಡೈರಿಗಳ ಸಮಸ್ಯೆಯಿಂದ ರೈತರಿಗೆ ಬಹಳಷ್ಟು ತೊಂದರೆ ಯಾಗಿದೆ. ಜಮೀನಿನಲ್ಲಿ ಬಹುತೇಕ ತೆಂಗು ಇನ್ನಿತರೆ ಬೆಳೆಗಳು ಹೊಂದಿದ್ದರೂ ಜೀವನದ ಆಧಾರವಾಗಿ ಹೈನುಗಾರಿಕೆ ವೃತ್ತಿಯನ್ನೇ ಅವಲಂಬಿಸಿರುವ ರೈತರಿಗೆ ಸಮರ್ಪಕವಾಗಿ ಸ್ಪಂದಿಸಲು ಪ್ರತ್ಯೇಕ ಘಟಕ ಸ್ಥಾಪಿಸಿಕೊಟ್ಟರೆ ಅನುಕೂಲವಾಗಲಿದೆ ಎಂದರು.

ಕಡೂರು ಚಿಕ್ಕಮಗಳೂರು ಹಾಗೂ ಅರಸೀಕೆರೆ ಒಳಗೊಂಡು ಜಿಲ್ಲೆಗೊಂದು ಪ್ರತ್ಯೇಕ ಡೈರಿ ಘಟಕ ಸ್ಥಾಪಿಸಿದರೆ ಹಾಸನಕ್ಕಿಂತ ಹೆಚ್ಚಿನ ಪ್ರಮಾಣ ದಲ್ಲಿ ಸಾಧನೆ ಮಾಡಬಹುದು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕನಿಷ್ಠ ಪ್ರತಿ ತಾಲೂಕಿನಲ್ಲಿ ಇಂತಿಷ್ಟು ಹಾಲು ಸಂಗ್ರಹಿಸಬೇಕಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಘಟಕ ಸ್ಥಾಪಿಸಲು ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ವಿಸ್ತರಣಾ ಮತ್ತು ತರಬೇತಿ ಜಂಟಿ ನಿರ್ದೇಶಕ ಪ್ರಸನ್ನಕುಮಾರ್, ರೇಷ್ಮೆ ಇಲಾಖೆ ಜಂಟಿ ನಿರ್ದೇಶಕಿ ಪ್ರತಿಭಾ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಮೋಹನ್‌ಕುಮಾರ್, ಆಯುಕ್ತೆ ರೂಪಶ್ರೀ, ನಿರ್ದೇಶಕ ಮಂಜುನಾಥ್ ಪಾಳೇಗಾರ್ ಉಪಸ್ಥಿತರಿದ್ದರು.

30 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಕೆ. ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಶಾಸಕ ಆನಂದ್‌, ಡಾ. ಅಂಶುಮಂತ್‌ ಇದ್ದರು.