ಸಾರಾಂಶ
ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ನಾಯಿಗಳ ನಿಯಂತ್ರಣಕ್ಕೆ ಗ್ರಾಪಂ ಆಡಳಿತ ಕಡಿವಾಣ ಹಾಕಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ರಾತ್ರಿ ವೇಳೆ ಗ್ರಾಮದ ಹೊಲ, ತೋಟ, ಕಬ್ಬಿನ ಗದ್ದೆಗಳಲ್ಲಿ ತಂಗುತ್ತಿವೆ. ಬೆಳಗಿನ ವೇಳೆ ದಿಢೀರನೇ ಗ್ರಾಮಕ್ಕೆ ನುಗ್ಗುವ ಚಾಳಿ ರೂಪಿಸಿಕೊಂಡಿವೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕಳ್ಳನಕೆರೆ ಗ್ರಾಮದಲ್ಲಿ ಶನಿವಾರ ಹಲವು ಜನರಿಗೆ ಬೀದಿನಾಯಿಗಳು ದಾಳಿ ಮಾಡಿ ತೀವ್ರ ಗಾಯಗೊಳಿಸಿರುವ ಘಟನೆ ನಡೆದಿದೆ.ರೈತರು ತಮ್ಮ ಜಮೀನು ಕಡೆಗೆ ತೆರಳುವಾಗ ನಾಯಿ ದಾಳಿಯಿಂದ ಗ್ರಾಮದ ಪುನೀತ್‌ಕುಮಾರ್, ದಿಲೀಪ್, ಸುರೇಶ ಹಾಗೂ ನಿವೃತ್ತ ಶಿಕ್ಷಕ ಗಂಗಾಧರ್ ಗಾಯಗೊಂಡಿದ್ದಾರೆ.
ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ನಾಯಿಗಳ ನಿಯಂತ್ರಣಕ್ಕೆ ಗ್ರಾಪಂ ಆಡಳಿತ ಕಡಿವಾಣ ಹಾಕಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ರಾತ್ರಿ ವೇಳೆ ಗ್ರಾಮದ ಹೊಲ, ತೋಟ, ಕಬ್ಬಿನ ಗದ್ದೆಗಳಲ್ಲಿ ತಂಗುತ್ತಿವೆ. ಬೆಳಗಿನ ವೇಳೆ ದಿಢೀರನೇ ಗ್ರಾಮಕ್ಕೆ ನುಗ್ಗುವ ಚಾಳಿ ರೂಪಿಸಿಕೊಂಡಿವೆ.ರೈತರು ಹಾಲಿನ ಡೇರಿ, ಹೊಲ ಗದ್ದೆಗೆ ತೆರಳಲು ಕೋಲು ಹಿಡಿದುಕೊಂಡು ಹೋಗಬೇಕಾದ ಸ್ಥಿತಿ ಆಗಿದೆ. ಮಕ್ಕಳಂತು ಶಾಲೆಗೆ ಕಳುಹಿಸಲು ಭಯವಾಗಿದೆ. ಜನ, ಜಾನುವಾರುಗಳ ಮೇಲೆ ಎಗರುವ, ದಾಳಿ ಮಾಡಿ ಕಚ್ಚುತ್ತಿರುವ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಲಿಂಗರಾಜೇಗೌಡ ಆಗ್ರಹಿಸಿದ್ದಾರೆ.
ನಾಯಿ ಕಡಿತಕ್ಕೆ ಒಳಗಾದ ಗಾಯಾಳುಗಳನ್ನು ಕಿಕ್ಕೇರಿ ಸಮುದಾಯ ಅರೋಗ್ಯ ಕೇಂದ್ರಕ್ಕೆ ಗ್ರಾಮದ ಗ್ರಾಮಸ್ಥರು ಚಿಕಿತ್ಸೆಗೆ ಕರೆದುಕೊಂಡು ಹೋದರು. ಆದರೆ, ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚುಚ್ಚು ಮದ್ದು ಇಲ್ಲದೆ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಾಯಿಗಳ ನಿಯಂತ್ರಣಕ್ಕೆ ಕಾನೂನು ಕ್ರಮ ವಹಿಸಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಕಿಕ್ಕೇರಿ ಗ್ರಾಪಂ ಪಿಡಿಒ ಚಲುವರಾಜ್ ತಿಳಿಸಿದ್ದಾರೆ.19ರಂದು ವಿದ್ಯುತ್ ವ್ಯತ್ಯಯ
ಮಳವಳ್ಳಿ: ತಾಲೂಕಿನ ಹಲಗೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ನ.19 ರಂದು ಬೆಳಗ್ಗೆ 9 ರಿಂದ ಸಂಜೆ 6ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕೇಂದ್ರದ ವ್ಯಾಪ್ತಿಯ ಹಲಗೂರು, ಲಿಂಗಪಟ್ಟಣ, ದಳವಾಯಿಕೋಡಿಹಳ್ಳಿ, ಟಿ.ಕೆ.ಹಳ್ಳಿ, ಎಚ್.ಬಸಾಪುರ, ಗೊಲ್ಲರಹಳ್ಳಿ, ಕುಂತೂರು, ಸಾಮಂದಿಪುರ, ಸಾಗ್ಯ, ಚಿಲ್ಲಾಪುರ, ಒಬಿ ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಸಿ.ನಿತ್ತೇಶ ತಿಳಿಸಿದ್ದಾರೆ.