ಸಾರಾಂಶ
ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ, ಬೀರೂರುಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸರ್ವಾಜನಿಕರು ಮತ್ತು ವಿದ್ಯಾರ್ಥಿಗಳಿಗೆ ಉಪಟಳ ನೀಡುತ್ತಿರುವ ಬಗ್ಗೆ ಅನೇಕ ಬಾರಿ ಸಾಮಾನ್ಯ ಸಭೆಗಳಲ್ಲಿ ದೂರು ನೀಡಿದರೂ ಸಹ ಅಧಿಕಾರಿಗಳು ನಾಯಿಗಳ ನಿಯಂತ್ರಿಸಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ದೂರಿದಾಗ ಸದಸ್ಯೆ ಜ್ಯೋತಿ ಸಂತೋಷ್ ಕುಮಾರ್, ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದಂಡು ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ಓಡಾಡದ ಪರಿಸ್ಥಿತಿ ಎದುರಾಗಿದೆ ಎಂದಾಗ ಧ್ವನಿಗೂಡಿಸಿದ ಸದಸ್ಯೆ ಸಹನ ವೆಂಕಟೇಶ್ ಕಳೆದ 2 ವರ್ಷಗಳಿಂದಲೂ ಈ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಮನವಿ ಮಾಡಿ ಅರ್ಜಿ ನೀಡಿದರು ಪ್ರಯೋಜನವಾಗಿಲ್ಲ. ಬೀದಿ ನಾಯಿಗಳ ನಿಯಂತ್ರಣಕ್ಕೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಾಧಿಕಾರಿ ಜಿ.ಪ್ರಕಾಶ್ ಉತ್ತರಿಸಿ ನಾಯಿಗಳನ್ನು ಹೇಗೆ ಬೇಕೋ ಹಾಗೇ ಹಿಡಿಯುವಂತಿಲ್ಲ. ಅವುಗಳು ಮರಿ ಹಾಕದಂತೆ ಅವುಗಳಿಗೆ ಗರ್ಭ ನಿಯಂತ್ರಣಕ್ಕೆ ಕ್ರಮವಹಿಸಿ ಆರೈಕೆ ಮಾಡಬೇಕಾಗಿದೆ. ಹಾಗಾಗಿ ಈ ಸಮಸ್ಯೆ ಮುಂದುವರಿ ದಿದೆ ಎಂದರು. ಪರಿಸರ ಅಭಿಯಂತರ ನೂರುದ್ದೀನ್ ಮಾತನಾಡಿ, ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನೋತ್ಪತ್ತಿ ಆಗ ದಂತೆ ಮಾಡಲು ಸುಮಾರು ₹ 10ಲಕ್ಷ ಬೇಕಾಗುತ್ತದೆ. ನಮ್ಮ ಪುರಸಭೆ ಬಜೆಟ್ ನಲ್ಲಿ ಬರಿ ₹2ಲಕ್ಷ ಮಾತ್ರ ಮೀಸಲಿಸ ಲಾಗಿದ್ದು, 2 ಬಾರಿ ಟೆಂಡರ್ ಕರೆದರು ಸಹ ಯಾರು ಬಾಗಿಯಾಗಿಲ್ಲ ಎಂದರು.ಸದಸ್ಯ ಎಂ.ಪಿ.ಸುದರ್ಶನ್ ಉತ್ತರಿಸಿ ಬೀದಿ ನಾಯಿಗಳ ಹಾವಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಪತ್ರಿಕೆಗಳು ಸಹ ಈ ಸಮಸ್ಯೆ ಹಲವು ಬಾರಿ ವರದಿ ಮಾಡಿದ್ದರು ಪುರಸಭೆ ಅಧಿಕಾರಿಗಳು ಎಚ್ಚೆತ್ತು ಕೊಂಡಿಲ್ಲ. ಸುಮ್ಮನೆ ಕಾಟಚಾರದ ಉತ್ತರ ನೀಡದೆ, ಬೇರೆ ಯಾವ ನಿಧಿಯಲ್ಲಾದರೂ ಹಣ ತೆಗೆದು ಸಮಸ್ಯೆಗೆ ಮುಕ್ತಿ ನೀಡಿ ಎಂದರು.ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಮಾತನಾಡಿ, ಪುರಸಭೆಯಲ್ಲಿ ಸಿಂಗಲ್ ಟೆಂಡರ್ ಹಾಕಿರುವವರಿಗೆ ಟೆಂಡರ್ ನ ಅನುಮೋದನೆ ನೀಡಬಾರದು, ಈ ಹಿಂದೆ ಸಿಂಗಲ್ ಟೆಂಡರ್ ಪಡೆದ ಅನೇಕ ಗುತ್ತಿಗೆದಾರರು ಇದುವರೆಗು ಸಹ ಕಾಮಗಾರಿ ಪೂರ್ಣ ಮಾಡಿಲ್ಲ.ಆದ್ದರಿಂದ ಇಂತಹ ಟೆಂಡರ್ ಅನುಮೋದನೆಗೊಳಿಸದೆ ಮರು ಟೆಂಡರ್ ಮಾಡಿ ಎಂದಾಗ ಎಲ್ಲಾ ಸದಸ್ಯರು ಧ್ವನಿಗೂಡಿಸಿದ ಪರಿಣಾಮ ಮುಖ್ಯಾಧಿಕಾರಿ ಮರು ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚಿಸಿದರು.ಸದಸ್ಯ ಬಿ.ಕೆ.ಶಶಿಧರ್ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಎಲ್ಲಾ ಸದಸ್ಯರು ನಿರ್ಣಯಿಸಿದ್ದರೂ ಕೆಲವು ಸಂಘ ಸಂಸ್ಥೆಗಳು ಮುಂದೆ ಬಂದು ತಾವೇ ಮಾಡಲು ಹೊರಟಿದ್ದಾರೆ. ಇದಕ್ಕೆ ಪುರಸಭೆ ಅಧಿಕಾರಿಗಳು ಅವಕಾಶ ನೀಡ ಬಾರದು. ಪುರಸಭೆಯ 23 ಸದಸ್ಯರು ಮತ್ತು ಅಧ್ಯಕ್ಷರಿಗೆ ಜವಾಬ್ದಾರಿ ಇಲ್ಲವೆ ? ಮಹಾನ್ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತ ಮಾಡದೆ, ಪುರಸಭೆ ಅಧ್ಯಕ್ಷರು ಮತ್ತು ಶಾಸಕರ ನೇತೃತ್ವದಲ್ಲಿ ಪ್ರತಿಮೆಗಳನ್ನು ಉದ್ಘಾಟಿಸಿದರೆ ಪುರಸಭೆಗೆ ಹೆಸರು ಎಂದಾಗ ಎಲ್ಲಾ ಸದಸ್ಯರು ಒಪ್ಪಿದರು.ಸದಸ್ಯ ಸುದರ್ಶನ್ ಮಾತನಾಡಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ನಿವೇಶನ ರಹಿತರಿಗೆ ಅರ್ಜಿ ಆಹ್ವಾನಿಸಿದಾಗ ಸುಮಾರು 1630 ಅರ್ಜಿ ಬಂದಿವೆ. ಕಡು ಬಡವರಿಗೆ ನಿವೇಶನ ಅಥವಾ ಮನೆ ಕಟ್ಟಿಕೊಳ್ಳಲು ಸಾಧ್ಯವೇ? ಅರ್ಜಿದಾರರಿಗೆ ಸರಿಯಾದ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ, ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ವನಿತಾ ಮಧು, ಶಾರದ ರುದ್ರಪ್ಪ, ಜ್ಯೋತಿ ವೆಂಕಟೇಶ್, ರವಿ, ಜಿಮ್ ರಾಜು, ಜಿ.ಲಕ್ಷ್ಮಣ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಹಾಗೂ ಪುರಸಭೆ ಮತ್ತಿತರ ನಾಮಿನಿ ಸದಸ್ಯರು ಸೇರಿದಂತೆ ಅಧಿಕಾರಿಗಳು ಇದ್ದರು.16 ಬೀರೂರು 2ಬೀರೂರಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಮುಖ್ಯಾಧಿಕಾರಿ ಜಿ.ಪ್ರಕಾಶ್, ಉಪಾಧ್ಯಕ್ಷ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.