ಸ್ತ್ರೀ ಶಕ್ತಿ ಸಂಘದ ವಾರ್ಷಿಕೋತ್ಸವ

| Published : Nov 12 2025, 03:00 AM IST

ಸಾರಾಂಶ

ಸ್ತ್ರೀ ಶಕ್ತಿ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರುಇಲ್ಲಿನ ಕಾವೇರಿ ಸ್ತ್ರೀ ಶಕ್ತಿ ಸಂಘದ 25 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಸದಸ್ಯೆ ಹಾಗೂ ನಿವೃತ್ತ ಆಶಾ ಕಾರ್ಯಕರ್ತೆಯಾದ

ಕೆ.ಸಿ.ರುಕ್ಮಿಣಿ ಅವರನ್ನು ಸಂಘದ ಸದಸ್ಯರು ಸನ್ಮಾನಿಸಿ ಗೌರವಿಸಿದರು. ಪ್ರಾರಂಭದಲ್ಲಿ ಈ ಸಂಘವು ಕೇವಲ 10 ರು. ಗಳ ಸದಸ್ಯರ ಬಂಡವಾಳ ಹೂಡಿಕೆಯೊಂದಿಗೆ ಬೆಳೆದು ಸಂಘದಲ್ಲಿ ಇದೀಗ ಸದಸ್ಯರಿಗೆ 3ರಿಂದ 4 ಲಕ್ಷದ ತನಕ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಶ್ಯಾಮಲ ತಿಳಿಸಿದರು.