ಸುರ್ಪೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆ ಅಧಿಕಾರಿಗಳು ಪಟ್ಟಣದ ವಿವಿಧ ಕಡೆ ಬೀದಿ ಬದಿ ವ್ಯಾಪಾರಸ್ಥರನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಪಟ್ಟಣದ ವಾಹನ, ಪಾದಚಾರಿಗಳು ಅಷ್ಟೇ ಅಲ್ಲದೇ ಸ್ವತಃ ಬೀದಿ ಬದಿ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಎಸ್. ನಾಗಭೂಷಣ ಕನ್ನಡಪ್ರಭ ವಾರ್ತೆ ತುರುವೇಕೆರೆ

ಸುರ್ಪೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆ ಅಧಿಕಾರಿಗಳು ಪಟ್ಟಣದ ವಿವಿಧ ಕಡೆ ಬೀದಿ ಬದಿ ವ್ಯಾಪಾರಸ್ಥರನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಪಟ್ಟಣದ ವಾಹನ, ಪಾದಚಾರಿಗಳು ಅಷ್ಟೇ ಅಲ್ಲದೇ ಸ್ವತಃ ಬೀದಿ ಬದಿ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಪಟ್ಟಣದ ಮಾಯಸಂದ್ರ, ಬಾಣಸಂದ್ರ, ತಿಪಟೂರು ರಸ್ತೆ ಮತ್ತು ದಬ್ಬೇಘಟ್ಟ ರಸ್ತೆಗಳ ಆಜೂಬಾಜು ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳನ್ನು ತೆರೆದು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಪಟ್ಟಣ ಪಂಚಾಯಿತಿ ವತಿಯಿಂದ ಸುಮಾರು ಎಂಟು ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿ ಅದನ್ನು ಹಾಗೇಯೇ ಬಿಡಲಾಗಿದೆ. ಅಧಿಕಾರಸ್ಥರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜಕಾರಣಿಗಳ ಕಮ್ಮಕ್ಕಿನಿಂದಾಗಿ ಆಡಿದ್ದೇ ಆಟವೆನ್ನುವಂತೆ ಬೀದಿ ಬದಿ ವ್ಯಾಪಾರ ನಡದೆ ಇತ್ತು. ಪಟ್ಟಣ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಬಾಬು ಮತ್ತು ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಲೋಹಿತ್, ಎಸೈ ಟಿ.ಮೂರ್ತಿ ಯವರ ತಂಡ ಕಾರ್ಯಾಚರಣೆಗೆ ಇಳಿದು ಪಾದಚಾರಿ ರಸ್ತೆಯಲ್ಲಿ ಇಡಲಾಗಿದ್ದ ಎಲ್ಲಾ ಅಂಗಡಿಗಳನ್ನು ಎತ್ತಂಗಡಿ ಮಾಡಿದ್ದಾರೆ. ಮಸಾಲಾ ಜಯರಾಮ್ ಶಾಸಕರಾಗಿದ್ದ ಕೊನೆ ವೇಳೆಯೇ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಮಾಡಿದ್ದರು. ಸಂಕೀರ್ಣದ ಅಕ್ಕಪಕ್ಕ ಇದ್ದವರಿಗೆ ಸಂತೆ ಮೈದಾನದಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದರು. ಆದರೆ ಬೀದಿಬದಿ ವ್ಯಾಪಾರಿಗಳು ಸಂತೆ ಮೈದಾನಕ್ಕೆ ತೆರಳಿದರೆ ವ್ಯಾಪಾರ ಆಗುವುದಿಲ್ಲ ಎಂದು ಹೇಳಿ ಪಟ್ಟು ಹಿಡಿದು ಇಲ್ಲೇ ವ್ಯಾಪಾರು ವಹಿವಾಟು ನಡೆಸಿದ್ದರು. ವಾಣಿಜ್ಯ ಸಂಕೀರ್ಣ ಪ್ರಾರಂಭಗೊಂಡು ಮೂರುವರೆ ವರ್ಷಗಳು ಕಳೆದರೂ ಸಹ ಬಾಡಿಗೆದಾರರು ಹರಾಜು ಕೂಗಿಕೊಳ್ಳಲು ಸಿದ್ದವಿರಲಿಲ್ಲ. ಸದ್ಯ ನ್ಯಾಯಾಯಲದ ಆದೇಶವನ್ನು ಅಸ್ತ್ರವನ್ನಾಗಿಸಿಕೊಂಡು ಅಧಿಕಾರಿಗಳು ಪಟ್ಟಣದ ಪ್ರಮುಖ ರಸ್ತೆಯ ಅಕ್ಕಪಕ್ಕ ಇಡಲಾಗಿದ್ದ ಎಲ್ಲಾ ಅಂಗಡಿಗಳನ್ನು ಎತ್ತಂಗಡಿ ಮಾಡಿ ಪಟ್ಟಣದ ಉಡುಸಲಮ್ಮ ದೇವಾಲಯದ ಮುಂಭಾಗದ ಸಂತೇಮೈದಾನದಲ್ಲಿ ಅಂಗಡಿಗಳನ್ನು ಇಡಲು ಅವಕಾಶ ನೀಡಿದ್ದಾರೆ. ಈ ಜಾಗಕ್ಕೆ ಹಲವಾರು ಮಂದಿ ಆಗಮಿಸಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದಾರೆ. ದಿನ ಕ್ರಮೇಣ ವ್ಯಾಪಾರ ವೃದ್ಧಿ ಆಗುತ್ತಿದೆ ಎಂಬುದು ಹಲವಾರು ಬೀದಿಬದಿ ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ನೋಟೀಸ್ ಜಾರಿಈಗಾಗಲೇ ಮಾಯಸಂದ್ರ, ಬಾಣಸಂದ್ರ, ತಿಪಟೂರು ಮತ್ತು ದಬ್ಬೇಘಟ್ಟ ರಸ್ತೆಯಲ್ಲಿರುವ ಹಲವಾರು ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳ ಆಡಳಿತ ಮಂಡಲಿಯವರು ತಮ್ಮ ಕಚೇರಿಗಳ ಮುಂಭಾಗ ಯಾವುದೇ ಅಂಗಡಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಪಟ್ಟಣ ಪಂಚಾಯಿತಿಗೆ ನೋಟೀಸ್ ಜಾರಿ ಮಾಡಿದ್ದಾರೆ.

---------------------

ಕೋಟ್ -

ಈಗ ಸಂತೆ ಮೈದಾನಕ್ಕೆ ಶಿಫ್ಟ್ ಆಗಿರುವುದು ಒಂದು ರೀತಿ ಒಳಿತೇ ಆಗಿದೆ. ದಾರಿ ಬದಿ ಅಂಗಡಿ ಇಟ್ಟುಕೊಂಡಿದ್ದೆವು. ಯಾವಾಗ ಎತ್ತಂಗಡಿ ಆಗುವುದೋ ಎಂಬ ಅತಂಕ ಮನೆ ಮಾಡಿತ್ತು. ಈಗ ನೆಮ್ಮದಿ ಆಗಿದೆ. ಇಂದಲ್ಲಾ ನಾಳೆ ವ್ಯಾಪಾರ ಸರಿದಾರಿಗೆ ಬರುತ್ತದೆ. -ನಾಗಮಣಿ.

ಈರುಳ್ಳಿ ವ್ಯಾಪಾರಿ

(22 ಟಿವಿಕೆ 2 – ನಾಗಮಣಿ) ನಾವು ಹತ್ತಾರು ವರ್ಷದಿಂದ ಹೂವಿನ ಅಂಗಡಿಯನ್ನು ಹಳೆ ಬಸ್ ನಿಲ್ದಾಣದ ಬಳಿ ಹಾಕಿಕೊಂಡಿದ್ದೆವು. ಬಸ್ ಗಳು ಬಂದಾಗ, ಜನಗಳು ಇಳಿಯುವಾಗ ಜನರಿಗೆ ಕಿರಿಕಿರಿ ಆಗುತ್ತಿತ್ತು. ಈಗ ಇಲ್ಲಿಗೆ ಬಂದಿದ್ದೇವೆ. ವ್ಯಾಪಾರ ಒಂದು ಹಂತಕ್ಕೆ ಬಂದಿದೆ. - ಮನೋಜ್ , ಹೂವಿನ ವ್ಯಾಪಾರಿ ( 22 ಟಿವಿಕೆ 3 – ಮನೋಜ್) ಇಲ್ಲಿ ವ್ಯವಸ್ಥೆ ಮಾಡಿರುವುದು ಪರವಾಗಿಲ್ಲ. ಲೈಟ್ ಚನ್ನಾಗಿದೆ. ನೆರಳಿನ ವ್ಯವಸ್ಥೆ ಮಾಡಬೇಕು. ನೀರಿನ ವ್ಯವಸ್ಥೆ ಇದೆ. ಶೌಚಾಲಯದ ವ್ಯವಸ್ಥೆ ಮಾಡಿದರೆ ಎಲ್ಲಾ ಸರಿ ಆದಂತೆ.

ಶಂಕರಣ್ಣ ತರಕಾರಿ ವ್ಯಾಪಾರಿ.

ಸಂತೇಮೈದಾನ, ಪೊಲೀಸ್ ಠಾಣೆ ಬಳಿ ಎಲ್ಲರಿಗೂ ವ್ಯವಸ್ಥೆ ಮಾಡಲಾಗುತ್ತಿದೆ. ವ್ಯಾಪಾರ ವಲಯ ವೃದ್ಧಿಗಾಗಿ ಸರ್ಕಾರದಿಂದ ಸುಮಾರು 50 ಲಕ್ಷರೂ ಬಿಡುಗಡೆಯಾಗಲಿದೆ. ಈ ಹಣದಲ್ಲಿ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಲಾಗುವುದು. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಏರ್ಪಾಟು ಮಾಡಲಾಗುವುದು. - ಶ್ರೀನಾಥ್ ಬಾಬು, ಪಪಂ ಇಒ