ಬೀದಿಬದಿ ವ್ಯಾಪಾರಿಗಳು ಆರ್ಥಿಕ ಸ್ವಾವಲಂಬಿಗಳಾಗಿ

| Published : Feb 23 2024, 01:55 AM IST

ಸಾರಾಂಶ

ಬೀದಿ ಬದಿ ಆತ್ಮನಿರ್ಭರ ನಿಧಿ, ಪಿಎಂ ಸ್ವ-ನಿಧಿ ಯೋಜನೆಯಡಿ ಈವರೆಗೆ ಸಾಲ ಪಡೆಯದೇ ಇರುವ ಬೀದಿಬದಿ ವ್ಯಾಪಾರಿಗಳು ಸೌಲಭ್ಯ ಪಡೆದು ತಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು.

ಕಾರಟಗಿ: ಬೀದಿಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಅಹ್ಮದ್ ಹುಸೇನ್ ಹೇಳಿದರು.ಇಲ್ಲಿನ ಇಂದಿರಾನಗರದ ಸಮುದಾಯ ಭವನದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಮತ್ತು ಪುರಸಭೆ ಸಹಯೋಗದಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ(ಡೇನಲ್ಮ್) ಪಿಎಂ ‘ಸ್ವನಿದಿ, ಸ್ವನಿಧಿ ಸೇ ಸಮೃದ್ಧಿ ಮೇಳ ಹಾಗೂ ‘ನಾನೂ ಕೂಡಾ ಡಿಜಿಟಲ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬೀದಿ ಬದಿ ಆತ್ಮನಿರ್ಭರ ನಿಧಿ, ಪಿಎಂ ಸ್ವ-ನಿಧಿ ಯೋಜನೆಯಡಿ ಈವರೆಗೆ ಸಾಲ ಪಡೆಯದೇ ಇರುವ ಬೀದಿಬದಿ ವ್ಯಾಪಾರಿಗಳು ಸೌಲಭ್ಯ ಪಡೆದು ತಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಬಹುದು. ಪ್ರಥಮ ಹಂತದಲ್ಲಿ ₹೧೦ ಸಾವಿರಕ್ಕೆ ಸೀಮಿತವಾಗಿದೆ. ಅದನ್ನು ಸಮರ್ಪಕವಾಗಿ ಮರುಪಾವತಿ ಮಾಡಿದರೆ ನಂತರ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಯಲ್ಲಿ ಮಾಡುವವರಿಗೆ ಬಡ್ಡಿ ಸಹಾಯಧನ ಸೌಲಭ್ಯದೊಂದಿಗೆ ಮತ್ತಷ್ಟು ಸಾಲ ಸೌಲಭ್ಯ ದೊರೆಯಲಿದೆ. ಸಾಲ ಮರುಪಾವತಿಸಿದ ಫಲಾನುಭವಿಗಳಿಗೆ ದ್ವಿತೀಯ ಹಂತದಲ್ಲಿ ₹೨೦ ಸಾವಿರ, ತೃತೀಯ ಹಂತದಲ್ಲಿ ₹೫೦ ಸಾವಿರ ಬ್ಯಾಂಕ್ ಸಾಲ ಸೌಲಭ್ಯ ಸಿಗಲಿದೆ ಎಂದರು.ಯೋಜನೆಯಡಿ ಸಾಲ ಪಡೆಯುವ ಎಲ್ಲಾ ವ್ಯಾಪಾರಿಗಳ ಜೊತೆಗೆ ಅವರ ಕುಟುಂಬದವರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸದುಪಯೋಗ ಪಡೆಯಬಹುದು ಎಂದರು. ಈಗಾಗಲೇ ಕಾರಟಗಿ ಪುರಸಭೆ ವ್ಯಾಪ್ತಿಯಲ್ಲಿ ೧೦ ಸಾವಿರ ರೂಪಾಯಿಯ ಮೊದಲ ಹಂತದ ಸಾಲವನ್ನು ೪೭೫ ಜನಕ್ಕೆ ೨ನೇ ಹಂತದ ₹೨೦ಸಾವಿರ ಸಾಲವನ್ನು ೧೬೬ ಜನಕ್ಕೆ, ೩ನೇ ಹಂತದ ₹೫೦ಸಾವಿರ ಸಾಲವನ್ನು ೩೩ ಜನಕ್ಕೆ ನೀಡಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ವ್ಯವಸ್ಥಾಪಕ ಪರಮೇಶ್ವರಪ್ಪ ವಹಿಸಿದ್ದರು. ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಮರೇಶ್ ಬಿಜಕಲ್, ಪುರಸಭೆ ಸದಸ್ಯರಾದ ಆನಂದ ಮ್ಯಾಗಡಮನಿ, ರಾಮಣ್ಣ ಕೊರವರ್, ಕಾರ್ಮಿಕ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಸೂರ್ಯ ಪ್ರಕಾಶ್, ಆರ್‌ಡಿಸಿಸಿ ಬ್ಯಾಂಕ್‌ನ ಚನ್ನಬಸವ, ಪಿಕೆಜಿ ಬ್ಯಾಂಕ್‌ನ ಕ್ಷೇತ್ರಾಧಿಕಾರಿ ಅಶ್ವಿನಿ ನಾಗನೂರು, ಆರೋಗ್ಯ ನಿರೀಕ್ಷಕಿ ಮಲ್ಲಮ್ಮ, ಚನ್ನಬಸವ, ರಾಘವೇಂದ್ರ, ಡೇ ನಲ್ಮ್ ವಿಷಯ ನಿರ್ವಾಹಕರಾದ ಖಾಜಾಬಿ, ಹನುಮೇಶ್, ದ್ರಾಕ್ಷಾಯಿಣಿ ಇನ್ನಿತರರು ಇದ್ದರು.